
ಯಲ್ಲಾಪುರ : ಸಚಿವರಾದ ಶಿವರಾಮ ಹೆಬ್ಬಾರ್ ಅವರು ಎರಡನೇ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿಗುರುವಾರ ರಾತ್ರಿ ಭಾರತೀಯ ಜನತಾ ಪಾರ್ಟಿ ಯಲ್ಲಾಪುರ ಮಂಡಲದ ವತಿಯಿಂದ ರವೀಂದ್ರ ನಗರದಲ್ಲಿಸಚಿವರನ್ನುಸ್ವಾಗತಿಸಲಾಯಿತು.ಮಂಡಲಾಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಎನ್. ಗಾಂವ್ಕರ್ ರವರು ಪಕ್ಷದ ಕಾರ್ಯಕರ್ತ ಪರವಾಗಿ ಸಚಿವರನ್ನು ಸನ್ಮಾನಿಸಿ ಸ್ವಾಗತಿಸಿದರು. ನಂತರ ಸಚಿವರ ಮನೆಯಲ್ಲಿ ಆರತಿ ಎತ್ತಿ ಅವರನ್ನು ಬರಮಾಡಿಕೊಂಡರು.ಸಚಿವ ಶಿವರಾಮ ಹೆಬ್ಬಾರ ಅವರ ಧರ್ಮ ಪತ್ನಿ ವನಜಾಕ್ಷಿ ಅವರ ಜನುಮದಿನವೂ ಆಗಿದ್ದರಿಂದ ಡಬಲ್ ಖುಷಿಯಿಂದ ಅವರ ಮನೆಯಲ್ಲಿ, ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿತ್ತು.ಆದರೂ ಕೋವಿಡ್ ಕಾರಣ ಸರಳವಾಗಿ ಅವರ ಜನ್ಮದಿನವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಜಿ ಗಾಂವ್ಕರ್,ಪಟ್ಟಣ ಪಂಚಾಯತ ಅಧ್ಯಕ್ಷರಾದ ಸುನಂದಾ ದಾಸ್, ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್, ಯುವಮೋರ್ಚಾ ಅಧ್ಯಕ್ಷಪ್ರದೀಪ ಯಲ್ಲಾಪುರಕರ್, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸೋಮೇಶ್ವರ ನಾಯ್ಕ ಹಾಗೂ ಪ್ರಮುಖರಾದ ಸುಜು ಮರಾಠಿ, ವಿನಾಯಕ ಬೋವಿವಡ್ಡರ್, ಜಗದೀಶ್ ಪೂಜಾರಿ, ಸುಧೀರ ಆಚಾರಿ ಹಾಗೂ ಉಮೇಶ ನಾಯ್ಡು ಹಾಗೂ ಪಕ್ಷದ ವಿವಿಧಸ್ತರದ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.
ಯಲ್ಲಾಪುರ ಹಾಗೂ ಸುದ್ದಿಗಾಗಿ ಈ ಗ್ರುಪ್ ಸೇರಿ
ಗ್ರುಪ್ ಸೇರಲು ಈ ಲಿಂಕ್ ಒತ್ತಿ https://chat.whatsapp.com/D0Ry5Povwke1s77ibSLq4A
Leave a Comment