ಹೊನ್ನಾವರ: ಗೇರುಸೊಪ್ಪಾ ಪ್ರೌಡಶಾಲೆಯಲ್ಲಿ ಅಧ್ಯಯನ ನಡೆಸಿ ಈ ಬಾರಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಭೂಮಿಕಾ ನಾಯ್ಕಳ ಸಾಧನೆಗೆ ತಾಲೂಕಿನೆಲ್ಲಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಕ್ಷೇತ್ರ ಶಾಸಕ ಸುನೀಲ ನಾಯ್ಕ ವಿದ್ಯಾರ್ಥಿನಿ ಮನೆಗೆ ತೆರಳಿ ಸನ್ಮಾನಿಸಿ ಗೌರವಿಸಿ ವೈಯಕ್ತಿಕವಾಗಿ ಸಹಾಯ ಮಾಡಿದ್ದಾರೆ.
ತಾಲೂಕ ಆಡಳಿತದ ಪರವಾಗಿ ಭಟ್ಕಳ ಸಹಾಯಕ ಆಯುಕ್ತೆ ಮಮತಾದೇವಿ ಬಿ.ಎಸ್. ಹಾಗೂ ತಹಶೀಲ್ದಾರ ವಿವೇಕ ಶೇಣ್ವಿ ನಿವಾಸಕ್ಕೆ ತೆರಳಿ ಸನ್ಮಾನಿಸಿ ಗೌರವಿಸುವ ಜೊತೆ ಅಗಸ್ಟ 15ರ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ.
ಸ್ಥಳಿಯ ನಗರಬಸ್ತಿಕೇರಿ ಗ್ರಾಮ ಪಂಚಾಯತಿ ವತಿಯಿಂದ ಅಧ್ಯಕ್ಷ ಮಂಜುನಾಥ ನಾಯ್ಕ ನೇತ್ರತ್ವದಲ್ಲಿ ಸದಸ್ಯರು ಹಾಗೂ ಸಿಬ್ಬಂದಿಗಳು ಸನ್ಮಾನಿಸಿ ಗೌರವಿಸಿದ್ದಾರೆ. ಗೇರುಸೊಪ್ಪ ಪ್ರೌಡಶಾಲೆಯ ಶಿಕ್ಷಕರು ಸನ್ಮಾನಿಸಿ ಗೌರವಿಸಿದ್ದಾರೆ. ವಿದ್ಯಾರ್ಥಿನಿ ಸಾಧನೆಗೆ ಹಲವರು ವೈಯಕ್ತಿಕವಾಗಿ ಶುಭ ಹಾರೈಸುವ ಜೊತೆ ಮುಂದಿನ ವಿದ್ಯಾಭ್ಯಾಸಕ್ಕೆ ನೆರವಾಗಲು ಆರ್ಥಿಕ ಸಹಾಯ ನೀಡಿದ್ದಾರೆ. ಮಗಳ ಸಾಧನೆಗೆ ಹೆತ್ತವರ ಸಮ್ಮಖದಲ್ಲಿಯೇ ಸನ್ಮಾನವಾಗುತ್ತಿರುzಕ್ಕೆ ಕುಟುಂಬದವರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಭಾವಂತರ ಗುರುತಿಸಿ ಪೋತ್ಸಾಹಿಸುತ್ತಿರುವುದು ನಿಜಕ್ಕೂ ಇನ್ನಷ್ಟು ವಿದ್ಯಾರ್ಥಿಗಳಿಗೆ ಇದು ಪ್ರೇರಣೆಯಾಗಲಿದೆ.

Leave a Comment