ಹೊನ್ನಾವರ: ತಾಲೂಕ ಪಂಚಾಯತಿ ಸಭಾಭವನದಲ್ಲಿ ಹತ್ತು ಜನ ವಿಶೇಷಚೇತನರ ಸಂಚಾರಕ್ಕೆ ಸರ್ಕಾರದಿಂದ ಮಂಜೂರಾದ ದ್ವಿಚಕ್ರವಾಹನವನ್ನು ಶಾಸಕ ಸುನೀಲ ನಾಯ್ಕ ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಹೆರಂಗಡಿ ಹಾಗೂ ಕಾಸರಕೋಡ ಗ್ರಾ.ಪಂ. ಕಸ ವಿಲೇವಾರಿ ಮಾಡಲು ವಾಹನವನ್ನು ಹಸ್ತಾಂತರಿಸಲಾಯಿತು.
ಮಾಧ್ಯಮದವರೊಂದಿಗೆ ಶಾಸಕ ಸುನೀಲ ನಾಯ್ಕ ಮಾತನಾಡಿ ಸರ್ಕಾರದಿಂದ ನೀಡಲಾದ ವಸ್ತುಗಳನ್ನು ನೀವೆ ಬಳಸಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕು. ಅಧಿಕಾರಿಗಳು ವಿಶೇಷಚೇತನರಿಗೆ ಇರುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಿ ಸರ್ಕಾರದ ಯೋಜನೆಯು ಯಶ್ವಸಿಯಾಗಲು ಸಹಕಾರ ನೀಡಬೇಕು.
ಇದಲ್ಲದೇ ಕ್ಷೇತ್ರದ ಎರಡು ಪಂಚಾಯತಿಯಲ್ಲಿ ಘನತಾಜ್ಯ ಘಟಕ ನಿರ್ಮಾಣವಾಗಿದ್ದು, ಗ್ರಾಮದ ಕಸ ಸಂಗ್ರಹಣೆಗೆ ವಾಹನ ಹಸ್ತಾಂತರಿಸಲಾಗಿದೆ. ಸ್ವಚ್ಚ ಹೊನ್ನಾವರ ಹಾಗೂ ಸ್ವಚ್ಚ ಗ್ರಾಮವನ್ನಾಗಿಸಲು ಸಾರ್ವಜನಿಕರು ಸಹಕಾರ ನೀಡಬೇಕು. ಸರ್ಕಾರದ ಯೋಜನೆಯನ್ನು ನೈಜ ಫಳಾನುಭವಿ ತಲುಪಲು ಜನಪ್ರತಿನಿಧಿಗಳ ಜೊತೆ ಅಧಿಕಾರಿಗಳ ಪಾತ್ರವು ಬಹುಮುಖ್ಯವಾಗಿದೆ. ಆನಿಟ್ಟಿನಲ್ಲಿ ಕ್ಷೇತ್ರದಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಪ.ಪಂ. ಅಧ್ಯಕ್ಷ ಶಿವರಾಜ ಮೇಸ್ತ, ತಾಲೂಕ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ, ಗ್ರಾ.ಪಂ. ಅಧ್ಯಕ್ಷರಾದ ಮಂಜುನಾಥ ನಾಯ್ಕ, ವಿಘ್ನೇಶ್ವರ ಹೆಗಡೆ, ಪ್ರಮೋದ ನಾಯ್ಕ, ಮಹೇಶ ನಾಯ್ಕ ಮಾವಳ್ಳಿ, ಬಿಜೆಪಿ ತಾಲೂಕ ಅಧ್ಯಕ್ಷ ರಾಜೇಶ ಭಂಡಾರಿ, ಪ.ಪಂ. ಸದಸ್ಯ ವಿಜಯಕಾಮತ್, ಗ್ರಾ.ಪಂ. ಸದಸ್ಯ ವಿನಾಯಕ ನಾಯ್ಕ, ಗಣೇಶ ಹಳ್ಳೇರ್, ನೂತನ ನಾಯ್ಕ, ಯುವಜನಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ, ಬಿಜೆಪಿ ಮುಖಂಡರಾದ ಎಂ.ಎಸ್.ಹೆಗಡೆ ಕಣ್ಣಿ, ಉಮೇಶ ನಾಯ್ಕ, ಸುಬ್ರಾಯ ನಾಯ್ಕ, ರವಿ ರಾಯಲಕೇರಿ ಉಪಸ್ಥಿತರಿದ್ದರು.
Leave a Comment