ಹೊನ್ನಾವರ: ರೋಟರಿ ಸಂಸ್ಥೆ ಹೊನ್ನಾವರ ಹಾಗೂ ಭಾವನಾ ವಾಹಿನಿ ಸಹಯೋಗದಲ್ಲಿ ಭಾವನಾ ಸ್ವಾತಂತ್ರ್ಯೋತ್ಸವ ಸಂಭ್ರಮ ಕಾರ್ಯಕ್ರಮ ರೋಟರಿ ಭವನದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಹಿರಿಯ ಪತ್ರಕರ್ತರಾದ ಜಿ.ಯು. ಭಟ್ಟರು ದೇಶ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಉ.ಕ ಜಿಲ್ಲೆಯ ಹೋರಾಟಗಾರರು ಅದ್ಭುತ ಕೊಡುಗೆ ನೀಡಿದ್ದಾರೆ. ಜಿಲ್ಲೆಯ ಸಿದ್ಧಾಪುರದ ತಿಮ್ಮಪ್ಪ ನಾಯ್ಕರಂತಹ ಹೋರಾಟಗಾರರು ಮಹಾತ್ಮ ಗಾಂಧೀಜಿಯವರಿಂದ ಅಭಿನಂದಿಸಲ್ಪಿಟ್ಟಿದ್ದಾರೆ. ಸಾವಿರಾರು ಮಂದಿ ಮನೆ,ಮಠ ಕಳೆದುಕೊಡು ಹೋರಾಟ ನಡೆಸಿದ್ದಾರೆ ಎಂದು ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಮೆಲಕು ಹಾಕಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರೋಟರಿ ಅಧ್ಯಕ್ಷ ಸ್ಟೇಫನ್ ರೊಡ್ರಿಗೀಸ್ರವರು ಮಾತನಾಡಿ ಭಾರತ ದೇಶ ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇ±.À ಇಂತಹ ದೇಶದಲ್ಲಿ ರೋಟರಿಯಂತಹ ಸಮಾಜ ಸೇವಾ ಸಂಸ್ಥೆ ಮುಂಚುಣಿಯಲ್ಲಿ ನಿಂತು ಸಮಾಜ ಸೇವೆ ಮಾಡುತ್ತಿದೆ. ಭಾವನಾ ವಾಹಿನಿ ಜಿಲ್ಲೆಯಲ್ಲಿ ವಿಶಿಷ್ಟವಾದ ಕಾರ್ಯಕ್ರಮ ನೀಡುತ್ತಿದೆ ಎಂದರು, ಉದ್ಯಮಿ ರವಿ ಶೆಟ್ಟಿ ಕವಲಕ್ಕಿ ಮಾತನಾಡಿ ಜಿಲ್ಲೆಯ ಯುವ ಪ್ರತಿಭೆಗಳಿಗೆ ಸ್ವಾತಂತ್ರ್ಯ ಮಹತ್ವ ಸಾರುವ ಕಾರ್ಯಕ್ರಮಗಳನ್ನು ನೀಡಿ ಪ್ರೋತ್ಸಾಹಿಸುತ್ತಿದೆ ಎಂದರು.
ವೇದಿಕೆಯಲ್ಲಿ ಭಾವನಾ ವಾಹಿನಿಯ ಮುಖ್ಯಸ್ಥ ಭವಾನಿಶಂಕರ ನಾಯ್ಕ, ಉಷಾ ಭವಾನಿಶಂಕರ ನಾಯ್ಕ , ರೋಟರಿ ಇವೆಂಟ್ ಛೇರಮನ್ ವಿ.ಜಿ ನಾಯ್ಕ, ಕಾರ್ಯಕ್ರಮ ಸಂಯೋಜಕ ವೆಂಕಟೇಶ ಮೇಸ್ತ ಉಪಸ್ಥಿತರಿದ್ದರು.
ಮುಂಜಾನೆಯಿಂದ ಸಂಜೆಯವರೆಗೆ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ದೇಶಭಕ್ತಿಗೀತೆಗಳ ಗಾಯನ, ನೃತ್ಯ, ಅಭಿನಂದನೆ ಹಾಗೂ ಸನ್ಮಾನ ಸಮಾರಂಭಗಳು ನಡೆದವು.
ಕುಮಾರಿ ಸಾನ್ವಿರಾವ್ರವರ ಪ್ರಾರ್ಥನಾ ನೃತ್ಯದ ಮೂಲಕ ಕಾರ್ಯಕ್ರಮ ಆರಂಭವಾಯಿತು.ಭವಾನಿಶಂಕರ ಸ್ವಾಗತಿಸಿದರು ವೆಂಕಟೇಶ ಮೇಸ್ತ ಪ್ರಾಸ್ತಾವಿಕವಾಗಿ ಮಾತನಾಡಿ ಶಿಕ್ಷಕ ಶ್ರೀಧರ ಶೇಟ ಕಾರ್ಯಕ್ರಮ ನಿರೂಪಿಸಿದರು.
Leave a Comment