ಹೊನ್ನಾವರ :ತಾಲೂಕಿನ ಪುರಾಣ ಪ್ರಸಿದ್ದ ಇಡಗುಂಜಿಗೆ ಕಲಿವೀರ ಚಿತ್ರದ ನಾಯಕ ನಟ ಏಕಲವ್ಯ ಭೇಟಿ ನೀಡಿ ಶ್ರೀ ಮಹಾಗಣಪತಿ ದರ್ಶನ ಪಡೆದರು. ನಂತರ ಕರ್ನಾಟಕ ಕ್ರಾಂತಿರಂಗದ ಬಳ್ಕೂರ ಘಟಕದ ಸನ್ಮಾನ ಸ್ವೀಕರಿಸಿದರು. ಈ ಹಿಂದೆ ಸಂಘಟನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಕಲಿವಿರ ಚಿತ್ರ ಬಿಡುಗಡೆಯಾದ ಬಳಿಕ ಆಗಮಿಸುತ್ತೇನೆ ಎಂದು ನೀಡಿದ ಭರವಸೆಯಂತೆ ಶುಕ್ರವಾರ ಗ್ರಾಮಕ್ಕೆ ಆಗಮಿಸಿದ್ದರು.
ಇದೇ ವೇಳೆ ಕರ್ನಾಟಕ ಕ್ರಾಂತಿರಂಗದ ಸದಸ್ಯರು ಮತ್ತು ಗ್ರಾಮದ ಯುವಕರು ಸನ್ಮಾನಿಸಿ ಗೌರವಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಚಿತ್ರದ ನಾಯಕ ನಟ ಏಕಲವ್ಯ ಮಾತನಾಡಿ ಈಗಾಗಲೇ ಚಲನಚಿತ್ರ ಬಿಡುಗಡೆಯಾಗಿ ೨೫ ದಿನಗಳು ಯಶ್ವಸಿಯಾಗಿ ಪೂರೈಸಿದೆ. ಇಲ್ಲಿಯ ಜನರ ಪ್ರೀತಿ ವಿಶ್ವಾಸವು ಮತ್ತೆ ಈ ಊರಿಗೆ ಬರುವಂತಾಗಿದೆ. ನಾನು ಯಾವ ಮಟ್ಟಕ್ಕೆ ಬೆಳೆದರು ಈ ಊರಿನ ಮಗನಂತೆ ಇರುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮಕ್ಕೆ ಆಗಮಿಸಿದ ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದರಾದ ಬಳ್ಕೂರ ಕೃಷ್ಣ ಯಾಜಿ ಮಾತನಾಡಿ ಕ್ರಾಂತಿರಂಗ ಸಂಘಟನೆ ಸಾಮಾಜಿಕ ಆರ್ಥಿಕ ಸಾಂಸ್ಕೃತಿಕ ವಿಷಯದಲ್ಲಿ ಸದಾಕಾಲ ಜಾಗ್ರತವಾಗಿರಲಿ. ನಿಮ್ಮಿಂದ ಉರಿಗೆ ಕೊಡುಗೆಗಳು ಹೀಗೆ ಇರಲಿ. ಹುಟ್ಟಿದ ನೆಲ ಹೆತ್ತ ತಾಯಿ ಸ್ವರ್ಗಕಿಂತ ಮಿಗಿಲಾದುದ್ದು. ಜನ್ಮ ಭೂಮಿಯ ಅಭಿಮಾನ ನಮ್ಮಲಿ ಇರಬೇಕು ಜನ್ಮ ಕೊಟ್ಟ ನೆಲ ಪವಿತ್ರವಾದುದು. ಸಾವಿರಾರು ಸನ್ಮಾನ ಪಡೆದ ನನಗೆ ಸನ್ಮಾನ ಮಾಡುವ ಯೋಗವನ್ನು ನಮ್ಮೂರಿನವರೆ ಅವಕಾಶ ಮಾಡಿಕೊಟ್ಟಿದ್ದಾರೆ ಸನ್ಮಾನ ಸ್ವಿಕರಿಸುವಾಗ ಎಷ್ಟು ಸಂತೋಷವಾಗುತ್ತದೆಯೋ. ಸನ್ಮಾನ ನೀಡುವಾಗಲು ಅಷ್ಟೆ ಸಂತೋಷವಾಗುತ್ತದೆ. ಎಂದು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯ ಗಣಪತಿ ನಾಯ್ಕ ಬಿಟಿ, ಕರ್ನಾಟಕ ಕ್ರಾಂತಿರಂಗ ಬಳ್ಕೂರ ಘಟಕದ ಅಧ್ಯಕ್ಷ ದೇವೆಂದ್ರ ನಾಯ್ಕ, ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.
Leave a Comment