ಹೊನ್ನಾವರ: ತಾಲೂಕ ಆಸ್ಪತ್ರೆಯ ಡಯಾಲಿಸಿಸ್ ಸಿಬ್ಬಂದಿಗಳು ಕಳೆದ ನಾಲ್ಕು ತಿಂಗಳಿನಿಂದ ಸಂಬಳವಿಲ್ಲದೇ ಪರದಾಡುತ್ತಿದ್ದಾರೆ. ಈ ಹಿಂದೆಯೆ ಮುಂದಿನ ತಿಂಗಳಿನಿಂದ ಸೇವೆಯನ್ನು ನಿಲ್ಲಿಸುದಾಗಿ ತಿಳಿಸಿದ್ದರು. ಇದರಂತೆ ಶಾಸಕ ಸುನೀಲ ನಾಯ್ಕ ಭೇಟಿಯಾಗಿ ಮನವಿ ಸಲ್ಲಿಸಿದರು.

ಕಲೆದ 8 ತಿಂಗಳಿನಿಂದ ಪಿ.ಎಫ್ ಹಣ ಹಾಗೂ ನಾಲ್ಕು ತಿಂಗಳೀನಿಂದ ವೇತ ನೀಡಿಲ್ಲ. ಕೋವಿಡ್ ಸಮಯದಲ್ಲಿ ಕೆಲಸ ಮಾಡಿದ್ದರೂ ಯಾವುದೇ ಭತ್ಯೆ ನೀಡಿಲ್ಲ. ವೇತನವಿಲ್ಲದೇ ದುಡಿಯುವುದು ಕಷ್ಟ ಸಾಧ್ಯವಾಗಿದ್ದು, ಬಾಕಿ ವೇತನ ಪಾವತಿಯಾಗದೇ ಇದ್ದರೆ, ಸಪ್ಟೆಂಬರ್ 2ರಿಂದ ಕೆಲಸ ಸ್ಥಗಿತಗೊಳಿಸುತ್ತೇವೆ ಎಂದು ಸಿಬ್ಬಂದಿಗಳು ತಿಳಿಸಿದರು. ಶಾಸಕ ಸುನೀಲ ನಾಯ್ಕ ಪ್ರತಿಕ್ರಿಯಿಸಿ ವೇತನ ಪಾವತಿ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
Leave a Comment