ಯಲ್ಲಾಪುರ : ಅಧಿಕಾರ ಸ್ವೀಕರಿಸಿದ ಮರುದಿನವೇ ಮುಖ್ಯಮಂತ್ರಿ ಬೊಮ್ಮಾಯಿಯವರು ಜಿಲ್ಲೆಗೆ ಬಂದು ಹಾನಿಯನ್ನು ಪರಿಶೀಲಿಸಿ ೨೧೦ ಕೋಟಿ ರೂ ತುರ್ತು ಪರಿಹಾರ ಹಣವನ್ನು ಬಿಡುಗಡೆಗೊಳಿಸಿದ್ದಾರೆ. ಸರ್ವಋತು ರಸ್ತೆ ಹಾಗೂ ಪುನರನಿರ್ಮಾಣಕ್ಕಾಗಿ ಇನ್ನೂ ಹೆಚ್ಚಿನ ಪರಿಹಾರದ ಅವಶ್ಯಕತೆ ಇದ್ದು ಈ ಕುರಿತು ಸಿ.ಎಂ.ಅವರಿಗೆ ಮನವಿ ಮಾಡಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಹೇಳಿದರು. ಅವರು ತಾಲೂಕಿನ ಅರಬೈಲ್, ಗುಳ್ಳಾಪುರ ,ಕಳಚೆ ಭಾಗಕ್ಕೆ ಭೇಟಿ ನೀಡಿ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳ ಪರಿಶೀಲನೆ ನಡೆಸಿದರು,

ಭೂಕುಸಿತದಿಂದ ಅಪಾರ ಹಾನಿಯಾದ ಕಳಚೆಯಲ್ಲಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಸಂತ್ರಸ್ತರ ಅಹವಾಲನ್ನು ಸ್ವೀಕರಿಸಿದ ನಂತರ ಮಾತನಾಡಿ ಅತಿವೃಷ್ಟಿಯಿಂದಾಗಿ ಹಾನಿಯಾದ ಪ್ರದೇಶಗಳಿಗೆ ನನ್ನ ಇಲಾಖೆಯ ಎಲ್ಲ ಅಧಿಕಾರಿಗಳೊqನೆÀ ಖುದ್ದಾಗಿ ವೀಕ್ಷಿಸಿ, ಸರಕಾರದಿಂದ ಸಾಧ್ಯವಾದ ಎಲ್ಲ ರೀತಿಯ ನೆರವನ್ನು ಒದಗಿಸಬೇಕು ಎಂಬ ಉದ್ದೇಶದಿಂದ ಇಲ್ಲಿಗೆ ಬಂದಿದ್ದೇನೆ.
ನಾವು ಬೆಂಗಳೂರಿನಲ್ಲಿ ಕುಳಿತು ತಿರ್ಮಾನ ತೆಗೆದುಕೊಂಡಿದ್ದರೆ ಪ್ರವಾಹ ಪೀಡಿತ ಪ್ರದೇಶಗಳಿಗೆ ನ್ಯಾಯ ಒದಗಿಸಲು ಆಗುತ್ತಿರಲಿಲ್ಲ.

ಸದ್ಯದಲ್ಲಿಯೇ ಸಚಿವ ಶಿವರಾಮ ಹೆಬ್ಬಾರ್ ಅವರೊಂದಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು, ಭೇಟಿಯಾಗಿ ಈ ಕುರಿತು ಸಮಗ್ರವಾಗಿ ಚರ್ಚಿಸುತ್ತೇನೆ ಎಂದರು. ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ ನಮ್ಮ ಸಿ.ಎಂ ಬೊಮ್ಮಾಯಿಯವರು ತ್ವರಿತವಾಗಿ ಹಣ ಬಿಡುಗಡೆ ಮಾಡಿ ಜನರ ಕಷ್ಟಗಳಿಗೆ ಸ್ಪಂದಿಸಿರುವದು ಸರಕಾರ ಕಾರ್ಯತತ್ಪರತೆಗೆ ಜೀವಂತ ಉದಾಹರಣೆಯಾಗಿದೆ. ಕಳಚೆ ಗ್ರಾಮಸ್ಥರು ಸರ್ವ ಋತು ರಸ್ತೆಯನ್ನು ನಿರ್ಮಿಸಬೇಂಕೆAಬ ತಮ್ಮ ಬೇಡಿಕೆಯನ್ನು ಮುಂದಿಟ್ಟರು.
ಈ ಸಂದರ್ಭದಲ್ಲಿ ಮಲವಳ್ಳಿ ಗ್ರಾಮಸ್ಥರು ಹಾಳಾದ ತಮ್ಮೂರಿನ ರಸ್ತೆಯನ್ನು ಶೀಘ್ರದಲ್ಲಿ ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದರು.
ನಂತರ ಅರಬೈಲ್ ಘಾಟನಲ್ಲಿ ತಾತ್ಕಾಲಿಕವಾಗಿ ಅಗಲೀಕರಣ ರಸ್ತೆ ಹಾಗೂ ಕೊಚ್ಚಿಹೋದ ಗುಳ್ಳಾಪುರ ಸೇತುವೆಯನ್ನು ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಲೋಕೋಪಯೋಗಿ ಮುಖ್ಯ ಇಂಜನೀಯರ್ ಕೃಷ್ಣಾ ರೆಡ್ಡಿ,ವಾ.ಕ.ರಾ.ರ.ಸಾ.ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ್. ಸಹಾಯಕ ಆಯುಕ್ತೆ ಆಕೃತಿ ಬನ್ಸಾಲ್, ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ್, ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿ ಗಳು ಇದ್ದರು.
Leave a Comment