ಹೊನ್ನಾವರ ತಾಲೂಕಿನ ಹಳದೀಪುರ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದ ವಾಹನ ಉದ್ಘಾಟನಾ ಕಾರ್ಯಕ್ರಮವನ್ನು ಪಂಚಾಯತ್ ಅಧ್ಯಕ್ಷರಾದ.ಅಜಿತ್ ಮುಕುಂದ್ ನಾಯ್ಕ್ ರವರು ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.
ಹಳದಿಪುರ ವಾರ್ಡ್ ನ ಸುತ್ತಮುತ್ತಲಿನ ಕಸ ವಿಲೇವಾರಿಗೆ ಒಂದು ವಾಹನ ಅವಶ್ಯಕತೆ ತುಂಬಾ ಇದ್ದಿದ್ದು ಮತ್ತು ಹಳದಿಪುರ ಜನತೆಯ ಬಹುದಿನದ ಕನಸಾಗಿದ್ದ ಕಸ ವಿಲೇವಾರಿ ವಾಹನವು ಇಂದು ಹಳದಿಪುರ ಗ್ರಾಮ ಪಂಚಾಯತ ದಲ್ಲಿ ಹೊಸದಾಗಿ ಸೇರ್ಪಡೆಗೊಂಡಿತು.

ಇದೇ ವೇಳೆ ಕೊರೋನಾ ಸಮಯದಲ್ಲಿ ಉತ್ತಮ ಸೇವೆ ನೀಡಿದ ಪ್ರಾಥಮಿಕ ಆರೊಗ್ಯ ಕೇಂದ್ರದ ವೈಶಾಲಿ ಪ್ರಕಾಶ ನಾಯ್ಕ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು ಪಂಚಾಯತ್ ಪಿ.ಡಿ.ಓ ,ಉಪಾಧ್ಯಕ್ಷರು ಹಾಗೂ ಸದಸ್ಯರು ಹಾಗೂ ಹಳದಿಪುರ ಗ್ರಾಮಸ್ಥರು ಉಪಸ್ಥಿತರಿದ್ದರು.
Leave a Comment