ಹೊನ್ನಾವರ ತಾಲೂಕಿನ ಸಂತೇಗುಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದು ಲಕ್ಷ ರೂಪಾಯಿ ಮೌಲ್ಯದ ತಾಂತ್ರಿಕ ಪರಿಕರಗಳ ಸ್ವೀಕಾರ ಸಮಾರಂಭ ಜರುಗಿತು.ಹೊಸಾಕುಳಿ ಗ್ರಾಮ ಪಂಚಾಯತಿಯ ನಿಕಟಪೂರ್ವ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಸುರೇಶ ಶೆಟ್ಟಿ ಈ ಹಿಂದಿನಿಂದಲೂ ಹಲವು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಇದೀಗ ಸಂತೇಗುಳಿ ಶಾಲೆಗರ ಸ್ಮಾರ್ಟ್ ಟಿವಿ ಹಾಗೂ ಇಂಟರ್ನೆಟ್ ಸೇವೆ, ಮುಖ್ಯಶಿಕ್ಷಕಿ ಮೀರಾ ಪಟಗಾರ ನೀಡಿದ ಲ್ಯಾಪ್ ಟಾಪ್, ಶಿಕ್ಷಕರು ನೀಡಿದ ಪ್ರಿಂಟರ್ ಹಾಗೂ ವಿದ್ಯಾರ್ಥಿಗಳು ನೀಡಿದ ಕಪಾಟನ್ನು ಈ ಸಂದರ್ಭದಲ್ಲಿ ಶಾಲೆಗೆ ಹಸ್ತಾಂತರಿಸಲಾಯಿತು.
ಸಮಾರಂಭವನ್ನು ಉದ್ಘಾಟಿಸಿ ಸುರೇಶ ಶೆಟ್ಟಿ ಮಾತನಾಡಿ ಜಾಗತಿಕ ಬದಲಾವಣೆಗೆ ಮಗುವನ್ನು ತೆರೆದಿಡಬೇಕಾದರೆ ಸರ್ಕಾರಿ ಶಾಲೆಗಳ ಕೋಣೆಗಳು ಸ್ಮಾರ್ಟ್ ಶಾಲೆಗಳಾಗಿ ಪರಿವರ್ತನೆಯಾಗಬೇಕಾದ ತುರ್ತು ಅಗತ್ಯವಿದೆ ಅದನ್ನು ಮನಗಂಡು ನೀಡಿದ್ದೇನೆ ಶೈಕ್ಷಣಿಕವಾಗಿ ಮುಂದುವರೆದರೆ ಗ್ರಾಮ ಇನ್ನಷ್ಟು ಅಭಿವೃದ್ದಿಯಾಗಲಿ ಇದರ ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಗ್ರಾಮ ಪಂಚಾಯತಿ ಸದಸ್ಯ ಎಚ್. ಆರ್. ಗಣೇಶ ಮಾತನಾಡಿ ಉತ್ತಮ ಭೌತಿಕ ಹಾಗೂ ಶೈಕ್ಷಣಿಕ ಸೌಲಭ್ಯಗಳಿಂದ ಸುಸಜ್ಜಿತಗೊಂಡಿರುವ ಶಾಲೆಯ ಮುಂದಿನ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸುಬ್ರಾಯ ಹೆಗಡೆ ಮಾತನಾಡಿ ಎಲ್ಲಾ ಮಕ್ಕಳಿಗೂ ಭೌತಿಕ ತರಗತಿಗಳು ಶೀಘ್ರವಾಗಿ ಪ್ರಾರಂಭಿಸಬೇಕಿದೆ.
ಸರ್ಕಾರ ಈ ಬಗ್ಗೆ ಚಿಂತನೆ ಆಗಬೇಕಿದೆ. ಶಾಲೆಗೆ ನೀಡುವ ಪ್ರತಿ ವಸ್ತುವನ್ನು ಜೋಪಾನವಾಗಿಟ್ಟು ಇದರ ಉಪಯೋಗ ಪಡೆಯಲಾಗುವುದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ|ಸವಿತಾ ನಾಯಕ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಎಂ ಜಿ ನಾಯ್ಕ ಯುವಜನಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಹೇಶ ನಾಯ್ಕ ಪಂಚಾಯತ ಸದಸ್ಯೆ ಕಮಲಾ ಮುಕ್ತಿ, ಪ್ರತಿಮಾ ಹೆಗಡೆ, ಸಿ. ಆರ್.ಪಿ ಈಶ್ವರ ಭಟ್ಟ ಐ ಆರ್ ಭಟ್ಟ ಮತ್ತಿತರರು ಉಪಸ್ಥಿತರಿದ್ದರು.
Leave a Comment