
ಯಲ್ಲಾಪುರ: ತಾಲೂಕಿನಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಶುಕ್ರವಾರಶ್ರದ್ಧಾ-ಭಕ್ತಿಯಿಂದಆಚರಿಸಲಾಯಿತು.ಪಟ್ಟಣದ ಬಹುತೇಕ ಸಾರ್ವಜನಿಕ ಗಣೇಶ ಸಮಿತಿಗಳು ಪಟಾಕಿ ಅಬ್ಬರ, ಮೆರವಣಿಗೆ, ಅನ್ನಸಂತರ್ಪಣೆವಿರದೆ ಸರಳ ವಾಗಿ ಮೂರು ,ಐದು ದಿನಗಳ ವರೆಗೆ ಗಣೇಶೋತ್ಸವ ಆಚರಣೆ ಗೆ ಮುಂದಾಗಿದ್ದು,ಆಗಾಗ ಸುರಿಯುತ್ತಿರುವ ಮಳೆಯ ಸಿಂಚನದ ನಡುವೆ ಸರಕಾರದ ನಿಯಮಾವಳಿಯಂತೆ ಹಬ್ಬವನ್ನು ಆಚರಿಸಲಗುತ್ತಿದೆ.
ಪಟ್ಟಣದಲ್ಲಿ 21 ಹಾಗೂ ಗ್ರಾಮೀಣ ಭಾಗದಲ್ಲಿ 60 ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿವೆ.ಕೊರೋನ ಕಾರಣ
ಈಬಾರಿ ಎಲ್ಲೆಡೆ ಚಿಕ್ಕ ಗಣೇಶನ ವಿಗ್ರಹವನ್ನು ಸ್ಥಾಪಿಸಿ ಪೂಜಿಸಲಾಗುತ್ತಿದೆ.
ಪಟ್ಟಣದ ಬಿಕ್ಕು ಗುಡಿಗಾರ ಕುಟುಂಬದ ಅರುಣ, ಸಂತೋಷ್ ಹಾಗೂ ಆದಿತ್ಯ ಗುಡಿಗಾರ , ಗುನಗಾ, ದಿಲೀಪ್ ಗುಡಿಗಾರ ಸೇರಿದಂತೆ ಕಲಾವಿದ ಕುಟುಂಬದವರ ಮನೆಗಳಲ್ಲಿ ತಯಾರಿಸಲಾದ ಆಕರ್ಷಕ ಗಣೇಶ ಮೂರ್ತಿ ಗಳನ್ನು ಜನರು ಖರೀದಿಸಿ ಭಕ್ತಿ ಯಿಂದ ತಲೆಯ ಮೇಲೆ ಹೊತ್ತು ಕೊಂಡು ಹೋಗುವ, ಮೂಲಕ ಹಾಗೂ ವಾಹನಗಳಲ್ಲಿ ತಮ್ಮ ಮನೆಗಳಿಗೆ, ಸಾರ್ವಜನಿಕ ಮಂಟಪ ಗಳಿಗೆ ಗಣೇಶ ನನ್ನು ತೆಗೆದುಕೊಂಡು ಹೋಗಿ ಸಿಂಗರಿಸಿದ ಮಂಟಪ ದಲ್ಲಿ ಪ್ರತಿಷ್ಠಾಪನೆ ಮಾಡಿದರು.
Leave a Comment