ಯಲ್ಲಾಪುರ: ಸಾಹಿತ್ಯದಂತೆಯೇ ಚಿತ್ರಕಲೆಯೂ ಹೊಸ ಹೊಸ ವಿಧ, ವಿಧಾನಗಳು ,ರಚಿಸುವ ಪ್ರಕಾರಗಳ ಮೂಲಕ ಬದಲಾವಣೆಯಾಗುತ್ತ ನೂತನ ತಂತ್ರಜ್ಞಾನ , ಸಂಕೇತಗಳನ್ನು ಕಲೆಯಲ್ಲಿ ಕಾಣಬಹುದಾಗಿದೆ. ಇಂದಿನ ದಿನಗಳಲ್ಲಿ ಚಿತ್ರ ಕಲೆಯನ್ನು ನೋಡುವ ಅರಿವುವನ್ನು ಪಡೆದುಕೊಳ್ಳಬೇಕಾದ ಅಗತ್ಯವೂ ಇದೆ ಎಂದು ಖ್ಯಾತ ಚಿತ್ರಕಲಾವಿದ ಶಿಕ್ಷಕ ಸತೀಶ ಯಲ್ಲಾಪುರ ಹೇಳಿದರು ಅವರು ಬುಧವಾರ ಸಂಜೆ ಪಟ್ಟಣದ ವಾಯಟಿಎಸ್ ಎಸ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಶಬನಮ್ ದೊಡ್ಡಮನಿ ಅವರ ಮೊದಲ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ವನ್ನು ಉದ್ಘಾಟಿಸಿ ಮಾತನಾಡಿ

ಶಬನಮ್ ಅವರ ಕಲೆಯಲ್ಲಿ ಮೈಸೂರು ,ತಂಜಾವೂರು ಚಿತ್ರಕಲೆಯ ಛಾಪನ್ನು ಕಾಣಬಹುದಾಗಿದೆ .ಇಂದು ಈ ಚಿತ್ರಕಲೆಗೆ ತುಂಬಾ ಬೇಡಿಕೆಯಿದ್ದು ಇನ್ನು ಹೆಚ್ಚಿನ ಪರಿಶ್ರಮ ಶ್ರದ್ದೆಯಿಂದ ಇದರಲ್ಲಿ ಮುಂದುವರೆದರೆ ಉತ್ತಮ ಭವಿಷ್ಯವಿದೆ. ಕಲೆಯೆಂಬುದು ಕೌಶಲ್ಯ ಬೇಡುವ ವಿಭಾಗವಾಗಿದೆ ಹೊಸ ಶಿಕ್ಷಣ ನೀತಿಯಲ್ಲಿ ಚಿತ್ರಕಲೆಯು ಕಲಿಕೆಯ ನಡುವಿನ ಆಯಾಸ ಪರಿಹಾರಕ್ಕಾಗಿ ಪಠ್ಯದಲ್ಲಿ ಇರುವದು ಅವಶ್ಯವಾಗಿದೆ. ಹಾಗೂ ಮನೋವಿಕಾಸಕ್ಕೆ ಮಾರ್ಗದರ್ಶಿಯಾಗಿದೆ ಎಂದರು.
ಕ್ಷೇತ್ರಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ಮಾತನಾಡಿ ಎಲ್ಲರಿಗೂ ಚಿತ್ರಕಲೆ ಒಲಿಯುವದಿಲ್ಲ. ಕಲೆಯೂ ಭಾವ ಸಂಸ್ಕೃತಿಯ ಸಾಕ್ಷಾತ್ಕಾರವಾಗಿದ್ದು ವರ್ಷವಿಡಿ ಆದಾಯತಂದುಕೊಡದೇ ಇದ್ದರೂ ಕ್ಷಣ ಮಾತ್ರದ ಖುಷಿಯನ್ನು ಹಿಡಿದಿಟ್ಟುಕೊಳ್ಳುತ್ತದೆ ಎಂದರಲ್ಲದೇ ಇಂದಿನ ಪಾಲಕರು ಹೆಚ್ಚುಕಡಿಮೆ ಆಯ್ಟಿ, ಬಿಟಿ ಬೆನ್ನಿಗೆ ಬಿದ್ದಿರುವದನ್ನು ಕಾಣುತ್ತೇವೆ ಆದರೆ ದೊಡ್ಡಮನಿ ದಂಪತಿಗಳು ಇಬ್ಬರೂ ಸರಕಾರಿ ನೌಕರರಾಗಿದ್ದರೂ ತಮ್ಮ ಮಗಳ ಆಸಕ್ತಿಯನ್ನು ಗುರುತಿಸಿ ಚಿತ್ರಕಲೆ ಯಲ್ಲಿ ಡಿಪ್ಲೋಮಾ ಮಾಡಿಸಿ ಇದೀಗ ಏಕವ್ಯಕ್ತಿ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿಕೊಡುವ ಮೂಲಕ ಎಲ್ಲ ಪಾಲಕರಿಗೆ ಮಾದರಿಯಾಗಿದ್ದಾರೆ ಎಂದರು.

ವಾಯ್ ಟಿ ಎಸ್ ಎಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲೆ ವಾಣಿಶ್ರೀ ಹೆಗಡೆ ಅಧ್ಯಕ್ಷತೆ ವಹಿಸಿದ್ದರು.ಮುಖ್ಯಾಧ್ಯಾಪಕಿ ಶೈಲಜಾ ಮಾಪ್ಸೆಕರ್,ತಾಕಾನಿಪ ಸಂಘದ ಅಧ್ಯಕ್ಷ ಕೆ.ಎಸ ಭಟ್ಟ, ಕಲಾವಿದ ಮಹೇಶ ಅಲ್ಮಠ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಲಾವಿದೆ ಶಬನಮ್ ತಾನು ಕಲಿತ ವಾಯ್ ಟಿ ಎಸ್ ಎಸ್ ಶಾಲೆಯ ಚಿತ್ರಕಲಾ ಶಿಕ್ಷಕ ಸಂತೋಷ ಗಾಡಿಗ ಅವರಿಗೆ ಸನ್ಮಾನಿಸಿ ಗುರುವಂದನೆ ಸಲ್ಲಿಸಿದರು.ಕೆ.ಸಿ ಮಾಳಕರ್ ನಿರ್ವಹಿಸಿದರು. ಶಿಕ್ಷಕ ದಿಲೀಪ್ ದೊಡ್ಡಮನಿ ಸ್ವಾಗತಿಸಿದರು.ದಿಲ್ಶಾದ್ ಬಾಗೇವಾಡಿ ವಂದಿಸಿದರು.
Leave a Comment