ಹೊನ್ನಾವರ : ರೇ.ಸಿ. ಮಾರಿಯಾ ಗೊರಟ್ಟಿ ಆರಂಭಿಸಿದ ಜಿಲ್ಲೆಯಾದ್ಯಂತ ಶಾಖೆಗಳಿರುವ ಪ್ರತಿಭೋದಯ, ಬಾಲ ಪ್ರಗತಿ ಕೇಂದ್ರದ ವಿದ್ಯಾರ್ಥಿ ಪಾಲಕರಿಗೆ ಅಕ್ಕಿ, ಬೇಳೆ, ಗೋಧಿ, ಮೊದಲಾದ ಜೀವನಾವಶ್ಯಕ ವಸ್ತುಗಳನ್ನು ಕೋವಿಡ್ ಪರಿಹಾರವಾಗಿ ನೀಡುವ ಕಾರ್ಯಕ್ರಮ ಪ್ರತಿಭೋದಯದಲ್ಲಿ ನಡೆಯಿತು.

ವಿದ್ಯಾರ್ಥಿಗಳನ್ನು, ಪಾಲಕರನ್ನು ಕರೆಸಿಕೊಂಡ ಸಂಸ್ಥೆಯ ಆಡಳಿತ ನಿರ್ದೇಶಕ ಫಾದರ್ ಗಾಬ್ರಿಯಲ್ ಈ ಸಂದರ್ಭದಲ್ಲಿ ಮಾತನಾಡಿ 300 ವಿದ್ಯಾರ್ಥಿಗಳಿಗೆ ಕಿಟ್ನ್ನು ದಾನಿಸಂಸ್ಥೆಯೊಂದು ನೀಡಿತು. ನಾವು ವಿದ್ಯಾರ್ಥಿಗಳಲ್ಲಿ ಬೇಧ ಬೇಡ ಎಂದು ಇತರ ದಾನಿಗಳಿಂದಲೂ ಸಂಗ್ರಹಿಸಿ ಜಿಲ್ಲೆಯ ಎಲ್ಲ 788 ವಿದ್ಯಾರ್ಥಿಗಳಿಗೆ ಇದನ್ನು ನೀಡುತ್ತಿದ್ದೇವೆ.
ಈ ಸಣ್ಣ ಸಹಾಯವನ್ನು ಸ್ವೀಕರಿಸಿ ಮಕ್ಕಳು ಶ್ರದ್ಧೆಯಿಂದ ಕಲಿಯುವಂತೆ ಪ್ರೇರಣೆ ಪಡೆಯಲಿ ಎಂದು ಅವರು ಹಾರೈಸಿದರು. ನಗರದ ಗಣ್ಯರು, ಪತ್ರಕರ್ತರು ಉಪಸ್ಥಿತರಿದ್ದರು.
Leave a Comment