ಹೊನ್ನಾವರ; ಪಟ್ಟಣದ ಹಾಗೂ ತಾಲೂಕಿನ ಹಿರಿಮೆ ಹೆಚ್ಚಿಸಬೇಕಿದ್ದ ಶರಾವತಿ ವೃತ್ತ ಕಸದ ಕೊಂಪೆಯಾಗಿದೆ. ನಿರ್ವಹಣೆ ಮಾಡಬೇಕಿದ್ದ ಪಟ್ಟಣ ಪಂಚಾಯತಿ ನಿಲಕ್ಷ ಸಾರ್ವಜನಿಕ ಅಸಮಧಾನಕ್ಕೆ ಕಾರಣವಾಗಿದೆ.
ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಸರ್ಕಲ್ ಗೆ ತನ್ನದೇ ಆದ ವೈಶಿಷ್ಯವಿದೆ. ಪಟ್ಟಣದ ಭಟ್ಕಳ ಹಾಗೂ ಕುಮಟಾ ಮಾರ್ಗಕ್ಕೆ ಸರ್ಕಲ್ ರೀತಿಯಲ್ಲಿರುವ ಶರಾವತಿ ವೃತ್ತಕ್ಕೆ ಹಲವು ವರ್ಷದ ಹಿಂದೆ ಸುಸಜ್ಜಿತ ನಾಮಫಲಕ ಹಾಗೂ ಕಾರಂಜಿ ನಿರ್ಮಿಸುವ ಮೂಲಕ ಪಟ್ಟಣ ಪಂಚಾಯತಿ ಮುಂದಾಗಿತ್ತು.



ಇದರಿಂದ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವಾಗ ಹೊನ್ನಾವರದ ಸರ್ಕಲ್ ಕಂಗೊಳಿಸುತ್ತಿತ್ತು. ಕಳೆದ ಎರಡು ವರ್ಷದಿಂದ ಕಾರಂಜಿ ಕೆಟ್ಟು ನಿಂತಿದೆ. ಈ ವೃತ್ತದೊಳಗೆ ಕಸ ಹಾಗೂ ಮುಳ್ಳಿನ ಪೊದೆ ಬೆಳೆದಿದೆ. ಇಲ್ಲಿಯ ಸುತ್ತಲೂ ಅಳವಡಿಸಿದ ಕಬ್ಬಿಣದ ಸರಳಿಗೆ ಬಟ್ಟೆ ನೇತಾಡುತ್ತಿರುವುದು ಕಂಡುಬರುತ್ತಿದೆ.
ಪಟ್ಟಣದ ಪ್ರಮುಖ ಕೇಂದ್ರವರ್ಷೆ ಅಲ್ಲದೆ ಪಟ್ಟಣ ಪಂಚಾಯತಿಯ ಮುಂಭಾಗದಲ್ಲೆ ಇದ್ದರೂ ಇದರ ಸ್ವಚ್ಚತೆ ಹಾಗೂ ಕಾರಂಜಿ ದುರಸ್ತಿಯತ್ತ ಅಧಿಕಾತಿಗಳಾಗಳಿ ಜನಪ್ರತಿನಿಧಿಗಳಾಗಲಿ ಮುಂದಾಗಲಿಲ್ಲ. ಇನ್ನು ಇಲ್ಲಿ ಅಳವಡಿಸಿದ ಸಿಸಿ ಕ್ಯಾಮರವು ಕೂಡಾ ಕೆಟ್ಟು ವರ್ಷಗಳೇ ಕಳೆದಿದೆ. ಕೆಟ್ಟು ಹೋದ ಹಾಗೂ ಕಸದ ತೊಟ್ಟಿಯಂತೆ ಸರ್ಕಲ್ ಬದಲಾಗಿರುವುದಕ್ಕೆ ಸಾರ್ವಜನಿಕ ವಲಯದಿಂದಲೂ ಅಸಮಧಾನ ವ್ಯಕ್ತವಾಗುತ್ತಿದೆ.
ಸದಾ ಜನಸಂಚಾರವಿರುವ ಈ ಪ್ರದೇಶದ ಸ್ಥಿತಿಯೇ ಈಗಾದರೆ, ಇನ್ನುಳಿದ ಕಡೆ ಯಾವ ರೀತಿಯಲ್ಲಿ ನಿಲಕ್ಷವಿರಬಹುದು ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ..
ತಾಲೂಕಿನ ಹಿರಿಮೆ ಹೆಚ್ಚಿಸಬೇಕಿದ್ದ ಸರ್ಕಲನಲ್ಲಿ ಕಸ ಮುಳ್ಳಿನ ಪೊದೆ ಕೂಡಿದೆ. ಪಟ್ಟಣ ಪಂಚಾಯತಿ ಎದುರಗಡೆ ಇದ್ದರೂ ಇದರ ನಿಲಕ್ಷಕ್ಕೆ ಅಧಿಕಾರಿಗಳೇ ನೇರ ಹೋಣೆ. ಇಲ್ಲಿ ಬಟ್ಟೆ ಹಾಕುತ್ತಿದ್ದಾರೆ ಇದು ಕೂಡಲೇ ತಡೆಯಬೇಕು. ಸ್ಥಳವನ್ನು ಸ್ವಚ್ಚತೆ ಮಾಡಿ ಕಾರಂಜಿ ಹಾಗೂ ಸಿ.ಸಿ.ಕ್ಯಾಮರ್ ದುರಸ್ಥಿಗೆ ಇಲಾಖೆ ಮುಂದಾಗಬೇಕಿದೆ. ಇಲ್ಲದೇ ಹೊದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಶ್ರೀರಾಮ್ ಹೊನ್ನಾವರ.ಕರುನಾಡ ವಿಜಯಸೇನೆಯ ಜಿಲ್ಲಾ ವಕ್ತಾರರು
Leave a Comment