ಹೊನ್ನಾವರ; ಜಿಲ್ಲೆಯ ಉದ್ಯಮಗಳಿಗೆ ವಿಪುಲ ಅವಕಾಶವಿದೆ. ಪ್ರವಾಸೊದ್ಯಮದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಜಿಲ್ಲೆ ನಿರೀಕ್ಷೀತ ಪ್ರಮಾಣದಲ್ಲಿ ಸ್ಥಾನಗಳಿಸಿಲ್ಲ ಎಂದು ಕಾರ್ಮಿಕ ಸಚೀವರಾದ ಶಿವರಾಮ ಹೆಬ್ಬಾರ್ ಹೇಳಿದರು. ಅವರು ಕರ್ಕಿ ಕೋಣಕಾರ ಬಳಿ ಎಸ್.ಆರ್.ಎಲ್ ವೆಂಕಟ್ರಮಣ ಹೆಗಡೆ ಮಾಲಿಕತ್ವದಲ್ಲಿ ನಿರ್ಮಾಣವಾದ ನೂತನ ಪೆಟ್ರೂಲ್ ಬಂಕ್ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಕೆಲ ಪರಿಸರವಾದಿಗಳ ತೊಂದರೆಯಿಂದ ಜಿಲ್ಲೆ ಅಭಿವೃದ್ದಿ ಸಾಧಿಸಿಲ್ಲ. ಅಂಕೋಲಾ ಹುಬ್ಬಳಿ ರೈಲ್ವೆ ಬಂದಿಲ್ಲ. ಇದಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಾರಣರಾಗಿದ್ದಾರೆ. ಇತ್ತೀಚಿನ ದಿನದಲ್ಲಿ ಕಾಸರಕೋಡ ಕಾರವಾರ ಬಂದರು ನಿರ್ಮಾಣವಾಗಿದೆ. ನೈಸಗಿಕವಾಗಿ ಹಲವು ಸಂಪತ್ತು ಹೊಂದಿದ್ದು
ಪ್ರವಾಸಿ ಕ್ಷೇತ್ರದಲ್ಲಿ ಗೋವಾ ರಾಜ್ಯದಲ್ಲಿ ಲಾಭ ಗಳಿಸುತ್ತದೆ. ೩೮೦ ಕಿಲೋ ಮೀಟರ್ ವಿಸ್ತಾರ ಹೊಂದಿರುವ ರಾಜ್ಯ ಕರಾವಳಿಯು ನೆರೆಯ ಕೆರಳ- ಗೋವಾ ರಾಜ್ಯ ಸಾಧಿಸಿದಷ್ಟು ಸಾಧನೆ ಮಾಡಲು ಸಾಧ್ಯವಾಗಿಲ್ಲ ಎಂದರು.
ಭವಿಷ್ಯದ ದೃಷ್ಟಿಯಿಂದ ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ಪ್ರವಾಸೊದ್ಯಮ ಕ್ಷೇತ್ರಕ್ಕೆ ಒತ್ತು ನೀಡಬೇಕಿದೆ. ಇಲ್ಲದೇ ಹೋದಲ್ಲಿ ಮುಂದಿನ ದಿನದಲ್ಲಿ ಯುವ ಸಮುದಾಯ ನಮ್ಮನ್ನು ಶಪಿಸಲಿದೆ. ಇದೀಗ ಜಿಲ್ಲೆಯಲ್ಲಿ ಹಲವು ಉದ್ಯಮರಂಗ ತಲೆ ಎತ್ತಿದ್ದು, ಸ್ಪರ್ಧಾತ್ಮಕವಾಗಿ ಪೆಟ್ರೋಲ್ ಬಂಕ್ ಆರಂಭಗೊಳ್ಳುತ್ತಿದೆ. ಆದರೆ ಆಧುನಿಕ ಸೌಲಭ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಯಶ್ವಸಿಯಾಗಬೇಕಿದೆ.ಜಿಲ್ಲಾ ಮದ್ಯವರ್ತಿ ಬ್ಯಾಂಕ್ ಆಗಿರುವ ಕೆಡಿಸಿಸಿ ಉದ್ದೇಶವೇ ಜಿಲ್ಲೆಯಲ್ಲಿ ಉದ್ಯಮ ಇನ್ನಷ್ಟು ಬೆಳೆಯಲು ಪ್ರೇರಣೆ ನೀಡುವುದಾಗಿದೆ ಎಂದು ಭರವಸೆ ನೀಡಿದರು.

ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷರು ಯುಕೆ. ಬ್ಯಾಂಕ್ ಅಧ್ಯಕ್ಷರಾದ ಪ್ರಮೋದ ಹೆಗಡೆ ಯಲ್ಲಾಪುರ ಮಾತನಾಡಿ ಜಿಲ್ಲೆಯ ಬೆಳವಣೆಗೆ ಶ್ರೀಕುಮಾರ ಸಂಸ್ಥೆಯು ಬಹುಮುಖ್ಯವಾಗಿದೆ. ೫೦೦ಕ್ಕೂ ಹೆಚ್ಚಿನ ಜನರಿಗೆ ಉದ್ಯೂಗ ನೀಡುತ್ತಿದ್ದಾರೆ. ಹೊಸ ಆಯಾಮಗಳ ಮೂಲಕ ಉದ್ಯೋಗ ಸೃಷ್ಟಿಯಾದಲ್ಲಿ ಜಿಲ್ಲೆ ಇನ್ನಷ್ಟು ಅಭಿವೃದ್ದಿ ಆಗಲಿದ್ದು, ಆ ನಿಟ್ಟಿನಲ್ಲಿ ನಾವು ಸಾಗಬೇಕಿದೆ ಎಂದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ ಉದ್ಯಮದಲ್ಲಿ ಸಾರಿಗೆ ರಂಗದಲ್ಲಿ ಎಸ್.ಆರ್.ಎಲ್ ಸುದೀರ್ಘ ಸಾಧನೆಯ ಪರಿಶ್ರಮವೇ ಈ ಕ್ಷೇತ್ರದ ಸಾಧನೆಗೆ ಪ್ರೇರಣೆಯಾಗಿದೆ. ಯಾವುದೇ ರಂಗದಲ್ಲಾದರೂ ಪರಿಶ್ರಮಪಟ್ಟರೆ ಸ್ಪರ್ದಾತ್ಮಕ ಯುಗದಲ್ಲಿಯೂ ಸಾಧನೆ ಮಾಡಬಹುದು ಎನ್ನುವುದಕ್ಕೆ ಈ ಸಂಸ್ಥೆ ಉದಾಹರಣೆಯಾಗಿದೆ.ಜಿಲ್ಲೆಯ ಪ್ರವಾಸಿ ರಂಗದ ಅಭಿವೃದ್ಧಿಗೆ ಈ ಸಂಸ್ಥೆಯ ಪಾತ್ರ ಬಹುಮುಖ್ಯವಾಗಿದೆ. ಹೊಸ ಪೆಟ್ರೊಲಿಯಂ ಉದ್ಯಮ ಗುಣಮಟ್ಟ ಅಳತೆ ಪಾರದರ್ಶಕ ವ್ಯವಸ್ಥೆ ಇರಲಿ ಎಂದು ಸಲಹೆ ನೀಡಿದರು. ಮುಂಬರುವ ದಿನದಲ್ಲಿ ಪ್ರಕೃತಿಯ ಸಾಲು ಸಾಲು ಅವಾಲು ಎದುರಿಸಬೇಕಿದ್ದು , ನೈಸರ್ಗಿಕ ಸಂಪನ್ಮೂಲವನ್ನು ಇತಿಮಿತಿಯಲ್ಲಿ ಬಳಸೋಣ ಎಂದರು.



shri devaki krishna wash point, karki naka ,honavar, contact; sachin mesta 9538529046,8310014860
ಶ್ರೀ ಕುಮಾರ ಸಂಸ್ಥೆಯ ಮಾಲಕರಾದ ವೆಂಕ್ರಟಮಣ ಹೆಗಡೆ ಪ್ರಾಸ್ತವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಕೆಡಿಸಿಸಿ ಬ್ಯಾಂಕ್ ನಿರ್ದೆಶಕರಾದ ಶಿವಾನಂದ ಹೆಗಡೆ ಕಡತೋಕಾ, ಬೀರಣ್ಣ ನಾಯ್ಕ, ಕೆ.ಡಿ.ಸಿ.ಸಿ. ಬ್ಯಾಂಕ್ ಎಂ.ಡಿ ಆರ್.ಜಿ.ಭಾಗ್ವತ್, ಹಿಂದುಸ್ತಾನಿ ಪೆಟ್ರೋಲಿಯಂ ರಾಕೇಶ್, ಕರ್ಕಿ ಗ್ರಾ.ಪಂ.ಅಧ್ಯಕ್ಷೆ ಕಲ್ಪನಾ ಪ್ಲೋರಾ,ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಉದ್ಯಮಿ ಉಮೇಶ ಶ್ಯಾನಭಾಗ, ಗೀತಾ ಹೆಗಡೆ ಉಪಸ್ಥಿತರಿದ್ದರು.
Leave a Comment