
ಯಲ್ಲಾಪುರ: ತಾಲೂಕಿನ ಧನಗರ ಗೌಳಿ ಸಮುದಾಯದವರು ದಸರಾ ಹಬ್ಬವನ್ನು ವೈಶಿಷ್ಟö್ಯಪೂರ್ಣವಾಗಿ ವಿಜೃಂಭಣೆಯಿAದ ಆಚರಿಸುತ್ತಾರೆ.

ತಾಲೂಕಿನ ಕಿರವತ್ತಿ ,ಮದನೂರ ಸೇರಿದಂತೆ ವಿವಿಧೆಡೆ ವಾಸವಾಗಿರುವ ಧನಗರ, ಗೌಳಿ ಜನಾಂಗವುಆಚರಿಸುವ ವಿಶೇಷ ಹಬ್ಬವೇ ಶಿಲ್ಲಂಗಾನ,
ಇದರ ವಿಶೇಷತೆ ಊರಿಗೆ ಒಳ್ಳೆಯದಾಗಲಿ. ದನಕರುಗಳಿಗೆ ರೋಗ ಬರದಂತಿರಲಿ ಎಂದು ಹರಕೆ ತೀರಿಸುವುದು. ಇದನ್ನು ಒಂದು ಗ್ರಾಮದಲ್ಲಿ ಹಮ್ಮಿಕೊಂಡು ಅಕ್ಕ ಪಕ್ಕದ ಗ್ರಾಮಗಳಿಗೂ ತಾಂಬೂಲ ಕೊಟ್ಟು ತಮ್ಮ ಜನರನ್ನು ಆಮಂತ್ರಿಸುತ್ತಾರೆ.
ಆಮಂತ್ರಣ ಸ್ವೀಕರಿಸಿ ನೂರಾರು ಜನ ಬೇರೆ ಬೇರೆ ಕಡೆಯಿಂದ ಬರುತ್ತಾರೆ. ಈ ಸಮುದಾಯದವರು ಆಚರಿಸುವ ಎಲ್ಲಹಬ್ಬಗಳಲ್ಲಿ ದಸರಾ ಹಬ್ಬವು ಅತಿ ದೊಡ್ಡಹಬ್ಬ . ಮೂರು ದಿನ ಹಾಲು ಮತ್ತು ಮೊಸರು ಉಪಯೋಗಿಸಿ ಕೊಂಡು ಆಚರಣೆ ಮಾಡುತ್ತಾರೆ.

ಹಬ್ಬ ಪ್ರಾರಂಭವಾದ ದಿನದಿಂದ ನಮ್ಮ ಜನಾಂಗದ ಜನರು ಬಹಳ ಆಚಾರ ವಿಚಾರ ಶ್ರದ್ಧೆ ಭಕ್ತಿ ಭಾವದಿಂದ ದೇವರಿಗೆ ಪೂಜೆ ಸಲ್ಲಿಸುತ್ತಾರೆ .ನಮ್ಮವರು ಎಷ್ಟೇ ವಿದ್ಯಾವಂತರಾದರೂ ನಮ್ಮ ಪರಂಪರೆಯ ಶುಭ ಶ್ವೇತ ವರ್ಣದ ನಿಲುವಂಗಿ ಧರಿಸಿ, ತಲೆಗೆಪಾಗೋಟ ,ಕೈಯಲ್ಲಿ ಬೆತ್ತದ ಕೋಲು ,ವಾದ್ಯಗಳೊಂದಿಗೆ ಸಮುದಾಯದವರು ಸೇರಿ ಮುರಳಿ ವಾದನ, ಗಜ ನೃತ್ಯ ಮಾಡಿ ಪ್ರತಿಯೊಬ್ಬರ ಮನೆಗೆ ಹೋಗಿ ಆಯುಧ ಪೂಜೆ ಮಾಡುವರು, ಪೂಜೆ ಪಠಣಗಳೊಂದಿಗೆ ಹರಹರ ಚಾಂಗಬಲಾ (ಎಲ್ಲರಿಗೂ ಶುಭವಾಗಲಿ) ಎಂಬ ಘೋಷ ವಾಕ್ಯದೊಂದಿಗೆ ಜಯಕಾರ ಹಾಕುತ್ತಾರೆ.
ಒಂದೇ ತಟ್ಟೆಯಲ್ಲಿ ಒಂದೊAದು ತುತ್ತು ಸ್ವೀಕಾರ ಮಾಡುವ ಮೂಲಕ ಒಗ್ಗಟ್ಟಿನ ಸಂದೇಶವನ್ನು ಸಾರುತ್ತೇವೆ.ನಂತರ ಬನ್ನಿಯನ್ನು ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಂಡು ಶುಭಾಶಯ ಹೇಳುತ್ತೇವೆ .ಹೀಗೆ ಶಿಲ್ಲಂಗಾನದ ಹಲವಾರು ವಿಧಿ ವಿಧಾನಗಳನ್ನು ನೆರವೇರಿಸುವ ಮೂಲಕ ಹಬ್ಬವನ್ನು ಸಂತಸದಿAದ ಆಚರಿಸುತ್ತೇವೆ ಎಂದು ದನಗರ ಗೌಳಿ ಸಮುದಾಯದ ದೊಂಡು ಪಾಟೀಲ ಹೇಳುತ್ತಾರೆ.
Leave a Comment