
ಯಲ್ಲಾಪುರ :ದಾವಣಗೆರೆಯಲ್ಲಿ ಜರುಗಿದ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡೆಯ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕಿರವತ್ತಿಯ ಸರಕಾರಿ ಉರ್ದು ಪ್ರೌಢಶಾಲೆ ಶಿಕ್ಷಕ ಪತಂಜಲಿ ಉತ್ತರ ಕನ್ನಡದ ಯುವ ಪ್ರಭಾರಿ ದಿವಾಕರ ಮರಾಠಿರವರಿಗೆ ಯಲ್ಲಾಪುರ ಪತಂಜಲಿ ಯೋಗ ಸಮಿತಿ ಯಿಂದ ಪಟ್ಟಣದ ಅಡಿಕೆಭವನದಲ್ಲಿ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ದಿವಾಕರ ಮರಾಠಿ ಮಾತನಾಡಿಪ್ರತಿನಿತ್ಯ ಯೋಗಮಾಡುವುದರಿಂದ ದೈಹಿಕಸಾಮರ್ಥ್ಯ ಹೆಚ್ಚುತ್ತದೆ ಹಾಗೂ ಕ್ರೀಡಾ ಸಾಧನೆಗೆ ಸಹಾಯವಾಗುತ್ತದೆ, ನನ್ನ ಈ ಸಾಧನೆಗೆ ನನ್ನ ಪ್ರತಿನಿತ್ಯದ ಯೋಗ ಕಾರಣ ಹಾಗೂ ಎಲ್ಲರ ಪ್ರೋತ್ಸಾಹ ತನಗೆ ಶಕ್ತಿ ವರ್ಧಕ ವಾಗಿದ್ದು ಮುಂದಿನ ಸಾಧನೆಗೆ ಪ್ರೇರಣೆ ಎಂದು ನುಡಿದರು. ಪತಂಜಲಿ ಜಿಲ್ಲಾ ಸಮಿತಿ ಸದಸ್ಯ ಹಾಗೂ ವಕೀಲ ಜಿ ಎಸ್. ಭಟ್ಟ ಹಳವಳ್ಳಿ ಮಾತನಾಡಿ ಪತಂಜಲಿ ಜಿಲ್ಲಾ ಯೋಗ ವಿಸ್ತಾರಕ ಸುಬ್ರಾಯ ಭಟ್ಟರವರು ಮಾತನಾಡಿ ದಿವಾಕರಮರಾಠಿಯವರು ಬಹುಮುಖ ಪ್ರತಿಭೆಯನ್ನು ಹೊಂದಿದ್ದು ಯೋಗ, ಕ್ರೀಡೆ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ವಿಕೆ.ಭಟ್ಟ ,ಉಪಾಧ್ಯಕ್ಷ ನಾಗೇಶ್ ರಾಯ್ಕರ , ಕನಕಪ್ಪ, ರಚನಾ ಹೆಗಡೆ, ಸದಾನಂದ ದಬಗಾರ, ಮಂಜುನಾಥ ಹೆಗಡೆ ಶುಭ ಹಾರೈಸಿದರು.
Leave a Comment