
ಯಲ್ಲಾಪುರ : ತಾಲೂಕಿನ ಹಿಂದೂ ಬಾಂಧವರೆಲ್ಲ ಪಟ್ಟಣದ ಐಬಿ ರಸ್ತೆ.ಯಲ್ಲಿರುವ ಬಸವೇಶ್ವರ ದೇವಸ್ಥಾನದಲ್ಲಿ ಸೇರಿ ತುಮಕೂರು ಹಿಂದೂ ಸಂಘಟನೆಯ ಕಾರ್ಯಕರ್ತನ ಮೇಲಿನ ಹಲ್ಲೆಯನ್ನು ಖಂಡಿಸಿ ಮತ್ತು ಬಾಂಗ್ಲಾದೇಶದ ಹಿಂದೂಗಳ ಮೇಲೆ ಆಗುತ್ತಿರುವ ದೌರ್ಜನ್ಯ ಹಾಗೂ ಅಲ್ಲಿನ ದೇವಸ್ಥಾನಗಳನ್ನು ಧ್ವಂಸಗೊಳಿಸಿರುವ ಘಟನೆಯನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ಹಾಗೂ ತಾಲೂಕಿನ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನಾ ಜಾಥಾ ಮೂಲಕ ತಹಶೀಲ್ದಾರ ಕಾರ್ಯಾಲಯಕ್ಕೆ ತೆರಳಿ ತಹಶಿಲ್ದಾರ ಶ್ರೀಕೃಷ್ಣ ಕಾಮಕರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ಇದಕ್ಕೂ ಮುನ್ನ ಬಸ್ ನಿಲ್ದಾಣ ಬಳಿ ಅಂಬೆಡ್ಕರ್ ವೃತ್ತದಲ್ಲಿ ಹಿಂದೂಗಳಿಗಾಗುತ್ತಿರುವ ಅನ್ಯಾಯ ,ದೌರ್ಜನ್ಯ ಖಂಡಿಸಿ ಸಾರ್ವಜನಿಕರನ್ನುದ್ದೇಶಿಸಿ ಹಿಂದೂ ಜಾಗರಣಾ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಸು ಕೃಷ್ಣಮೂರ್ತಿ , ಹಿಜಾವೇತಾಲೂಕಾಧ್ಯಕ್ಷ ಗೋಪಾಲಕೃಷ್ಣ ಗಾಂವಕರ, ಹಿರಿಯ ಮುಖಂಡರಾದ ರಾಮು ನಾಯ್ಕ, ವೆಂಕಟರಮಣ ಬೆಳ್ಳಿ , ಡಾ. ರವಿಭಟ್ಟ ಬರಗದ್ದೆ ,ಶ್ಯಾಮಿಲಿ ಪಾಠಣಕರ,ಸೋಮೇಶ್ವರ ನಾಯ್ಕ ಮಾತನಾಡಿದರು.ಸಿದ್ದಾರ್ಥ ನಂದೊಳ್ಳಿಮಠ ಮನವಿ ವಾಚಿಸಿದರು.
ಮನವಿಯಲ್ಲಿ
ಅಂತರಾಷ್ಟ್ರೀಯ ಮಟ್ಟದಲ್ಲಿ ಹಿಂದು ವಿರೋಧಿ ಚಟುವಟಿಕೆಗಳು ಮತ್ತೇ ಆರಂಭವಾಗಿರುವುದು, ಆತಂಕ ತಂದೊಡ್ಡಿದೆ ಪಾಕಿಸ್ತಾನ, ಬಾಂಗ್ಲಾದೇಶ ಇತ್ಯಾದಿ ದೇಶಗಳಲ್ಲಿ ಹಿಂದು ವಿರೋಧಿ ಶಕ್ತಿಗಳು ವಿಜ್ರಂಬಿಸುತ್ತಿವೆ. ಅಲ್ಲಿನ ಸರಕಾರಗಳೇ ಇಂತಹ ಶಕ್ತಿಗಳಿಗೆ ಪ್ರಚೋದನೆ ನೀಡುತ್ತಿದ್ದಾರೆ. ದೇವಸ್ಥಾನಗಳನ್ನು ಧ್ವಂಸ ಮಾಡುತ್ತಿದ್ದಾರೆ. ಹಿಂದುಗಳ ಬಲವಂತದ ಮತಾಂತರ ಆಗುತ್ತಿದೆ. ಒಪ್ಪದವರನ್ನು ದೇಶ ಬಿಟ್ಟು ಓಡಿಸಲಾಗುತ್ತಿದೆ. ಹಿಂದುಗಳೇ ಬಹುಸಂಖ್ಯಾತರಿರುವ ನಮ್ಮ ದೇಶದಲ್ಲಿಯೂ ಅನೇಕ ಕಡೆಗಳಲ್ಲಿ ಪರಿಸ್ಥಿತಿ ಭಿನ್ನವಾಗಿಲ್ಲ. ಇಡೀ ಜಮ್ಮು ಕಾಶ್ಮೀರ ಸಹಿತ ಪ.ಬಂಗಾಳ, ಕೇರಳ, ತಮಿಳುನಾಡು, ಆಂಧ್ರ, ಈಶಾನ್ಯದ ಕೆಲ ರಾಜ್ಯಗಳಲ್ಲಿ ಹಿಂದು ವಿರೋಧಿ ಶಕ್ತಿಗಳು ಮತ್ತೇ ತಲೆ ಎತ್ತುತ್ತಿವೆ. ಹಿಂದು ಧಾರ್ಮಿಕ ಕೇಂದ್ರಗಳನ್ನು ನಾಶ ಮಾಡಲು ಯೋಜನೆ ಹಾಕಲಾಗುತ್ತಿದೆ. ಹಿಂದು ಹಬ್ಬ ಹರಿದಿನಗಳನ್ನು, ವಿಶೇಷವಾಗಿ ನಾವು ಸಾಮೂಹಿಕವಾಗಿ ಆಚರಿಸುವ ಗಣೇಶ ಚತುರ್ಥಿ, ದಸರಾ,ದೀಪಾವಳಿ, ಯುಗಾದಿ ಇತ್ಯಾದಿ ಹಬ್ಬಗಳ ಚಟುವಟಿಕೆಗಳನ್ನು ನಿಯಂತ್ರಿಸಲು ಪ್ರಯತ್ನಿಸಲಾಗುತ್ತಿದೆ. ಮತಾಂತರ, ಲವ್ ಜೀಹಾದ ಪ್ರಕರಣಗಳು ಹೆಚ್ಚಾಗುತ್ತಿವೆ. ಅವ್ಯಾಹತವಾಗಿ ಗೋ ಹತ್ಯೆ ನಡೆಯುತ್ತಿದೆ. ಪ್ರತಿಭಟಿಸಿದವರ ಮೇಲೆ ಮಾರಣಾಂತಿಕ ಹಲ್ಲೆ ಮಾಡುತ್ತಿದ್ದಾರೆ. ಇತ್ತೀಚಿನ ತುಮಕೂರು ಘಟನೆಯೇ ಇದಕ್ಕೊಂದು ಸಾಕ್ಷಿಯಾಗಿದೆ. ಇದು ಇದೇ ರೀತಿ ಮುಂದುವರೆದರೆ, ಮುಂದೊAದು ದಿನ ಹಿಂದುಸ್ತಾನದಲ್ಲಿಯೇ ಹಿಂದುಗಳು ಅಲ್ಪಸಂಖ್ಯಾತರಾಗುವುದು ನಿಶ್ಚಿತ. ನಮ್ಮ ದೇಶ, ನಮ್ಮ ಧರ್ಮ, ನಮ್ಮ ಕುಟುಂಬದ ರಕ್ಷಣೆಗಾಗಿ, ನಮ್ಮ ದನ ಕರುಗಳ ರಕ್ಷಣೆಗಾಗಿ, ನಾವು ಜಾಗೃತರಾಗಲೇಬೇಕು. ಇವುಗಳನ್ನು ಹತ್ತಿಕ್ಕಲು ದಿಟ್ಟ ಹೆಜ್ಜೆ ಇಡುವಂತಹ ಕಾಲ ಸನ್ನಿಹಿತವಾಗಿದೆ ಎಂದು ಎಚ್ಚರಿಕೆಯೊಂದಿಗೆ ಕಳವಳ ವ್ಯಕ್ತಪಡಿಸಿದ್ದಾರೆ. ನೂರಾರು ಸಂಖ್ಯೆಯಲ್ಲಿ ಹಿಂದೂಗಳು ಕೇಸರಿ ಶಾಲು ಹೊದ್ದು ಭಗವಾದ್ವಜ ಹಿಡಿದು ಪ್ರತಿಭಟನಾ ಜಾಥಾದಲ್ಲಿ ಭಾಗವಹಿಸಿದ್ದರು. ಪ್ರಮುಖರಾದ ರಾಮಚಂದ್ರ ಚಿಕ್ಯಾನಮನೆ ,, ಆದಿತ್ಯ ಗುಡಿಗಾರ ನರಸಿಂಹ ಕೋಣೆಮನೆ,ರಾಘವೇಂದ್ರ ಭಟ್, ರವಿ ಕೈಟ್ಕರ್,ಪ್ರದೀಪ ಯಲ್ಲಾಪೂರಕರ, ತಾಲೂಕಿನ ಕಿರವತ್ತಿ, ಮದನೂರ ಶಿವಾಜಿ ಸೇನೆಯ ಪ್ರಮುಖರು, ಮುಂತಾಧವರು ಭಾಗವಹಿಸಿದ್ದರು.
Leave a Comment