ಹೊನ್ನಾವರ: ಶಾಸಕನಾಗಿ ಆಯ್ಕೆಯಾಗಿರುವುದು ಅಹಂಕಾರ ತೋರಿಸಿ ದರ್ಪ ಮೆರೆಯುದಕ್ಕಲ್ಲ. ಜನತೆಯ ಸಂಕಷ್ಟವನ್ನರಿತು ಸ್ಪಂದಿಸುದಕ್ಕೆ ಎಂದು ಶಾಸಕ ಸುನೀಲ ನಾಯ್ಕ ಹೇಳಿದರು. ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಆಯೋಜಿಸಲಾದ “ ಗ್ರಾಮೀಣ ರಸ್ತೆ ಕಾಮಗಾರಿಗಳ ಪ್ರಾರಂಭೊತ್ಸª’ “ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಸಭಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಕ್ಷೇತ್ರದ ಮತದಾರರು ವಿಶ್ವಾಸವಿಟ್ಟು ಶಾಸಕನಾಗಿ ಆಯ್ಕೆಮಾಡಿದ್ದಾರೆ.
ಚುನಾವಣೆ ಮುಂಚೆ ಕಾರ್ಯಕರ್ತರ ಸಮ್ಮುಖದಲ್ಲಿ ನೀಡಿದ ಭರವಸೆ ಈಡೇರಿಸುವ ಕಾಯಕ ಮಾಡುತ್ತಿದ್ದೇನೆ. ತಾಲೂಕಿಗೆ ಹಲವು ಯೋಜನೆಯ ಮೂಲಕ ಅಭಿವೃದ್ದಿ ಪಡಿಸಲಾಗುತ್ತಿದ್ದು, ಬಹುವರ್ಷದ ಬೇಡಿಕೆಯಾದ ಗುಂಡಿಬೈಲ್ ರಸ್ತೆ, ಗುಂಡಬಾಳ ಚಿಕ್ಕೋಳ್ಳಿ ರಸ್ತೆ ನಿರ್ಮಾಣವಾಗಿದೆ. ಮಾವಿನಕುರ್ವಾ ಸೇತುವೆ ಕಾಮಗಾರಿ ಆರಂಭವಾಗಿದೆ. ಖರ್ವಾ ಮಾವಿನಕುರ್ವಾ ರಸ್ತೆ ಕಾಮಗಾರಿ ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಹಿಂದಿನ ಅವಧಿಯಲ್ಲಿ ಪಿ.ಎಂ.ಜೆ.ಸಿ.ವೈ. ರಸ್ತೆ ಕಾಮಗಾರಿ ಒಂದೇ ಒಂದು ನಡೆದಿರಲಿಲ್ಲ. ಈ ಬಾರಿ ಈ ಯೋಜನೆ ಅಡಿ ಕಾಮಗಾರಿ ನಡೆಯುತ್ತಿದೆ ಎಂದರು. ಕಾರ್ಯಕರ್ತರು ಒಗ್ಗಟ್ಟಾಗಿದ್ದಲ್ಲಿ ಯಶಸ್ಸು ಸಾಧ್ಯ. ವಿರೋಧಿಗಳ ಮಾತು ಸಮರ್ಥನೆ ಮಾಡಿಕೊಂಡು ಅಭಿವೃದ್ದಿ ಕಾರ್ಯದತ್ತ ಗಮನಹರಿಸೋಣ. ಗ್ರಾಮದ ಸಮಸ್ಯೆ ಬಗೆಹರಿಸಿ ಅಭಿವೃದ್ದಿ ಮೂಲಕ ಉತ್ತರ ನೀಡೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
23 ಕೋಟಿಯ 132 ರಸ್ತೆ ನಿರ್ಮಾಣ ಕಾಮಗಾರಿಗೆ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಯಿತು.
ನಿವೃತ್ತ ಉಪನ್ಯಾಸಕ ಡಾ. ಶ್ರೀಪಾದ ಶೆಟ್ಟಿ ಮಾತನಾಡಿ, ಸರಳ ಸಜ್ಜನಿಕೆಯ ಮೂಲಕ ಕ್ಷೇತ್ರದಲ್ಲಿ ಮನೆಮಾತಾಗಿರುವ ಶಾಸಕರು ಅಭಿವೃದ್ದಪರ್ವ ಮಾಡಿದ್ದಾರೆ. ಗ್ರಾಮೀಣ ಭಾಗದ ಮೂಲಭೂತ ಸಮಸ್ಯೆಯಾದ ರಸ್ತೆ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಮೂಲಕ ಈ ಹಿಂದಿನವರಿಂಗಿಂತ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಇನ್ನು ಹೆಚ್ಚಿನ ರಾಜಕೀಯವಾಗಿ ಸ್ಥಾನಮಾನ ದೊರಕಲಿ ಎಂದು ಶುಭ ಹಾರೈಸಿದರು.
shri devaki krishna wash point karki naka honavar contact; sachin mesta 9538529046,8310014860
ಸಭಾ ಕಾರ್ಯಕ್ರಮಕ್ಕೆ ಮೊದಲು ಚಿತ್ರನಟ ಪುನೀತ ರಾಜ್ಕುಮಾರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೌನಾಚರಣೆ ಮೂಲಕ ಗೌರವ ಸಲ್ಲಿಸಲಾಯಿತು.
ಪ.ಪಂ ಅಧ್ಯಕ್ಷ ಶಿವರಾಜ ಮೇಸ್ತ, ಬಿಜೆಪಿ ಮಂಡಲಧ್ಯಕ್ಷರಾದ ರಾಜೇಶ ಭಂಡಾರಿ, ಸುಬ್ರಾಯ ದೇವಾಡಿಗ ಗ್ರಾ.ಪಂ. ಉಪಾಧ್ಯಕ್ಷರಾದ ಕೇಶವ ನಾಯ್ಕ, ಜಿ.ಜಿ.ಶಂಕರ, ನಿಕಟ ಪೂರ್ವ ಜಿ.ಪಂ. ಸದಸ್ಯೆ ಶ್ರೀಕಲಾ ಶಾಸ್ತ್ರಿ, ಸುಬ್ರಾಯ ನಾಯ್ಕ, ಶಾಸಕರ ಅಭಿವೃದ್ದ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಪ.ಪಂ. ಉಪಾಧ್ಯಕ್ಷೆ ಮೇಧಾ ನಾಯ್ಕ, ಗ್ರಾ.ಪಂ. ಅಧ್ಯಕ್ಷರಾದ ಪ್ರಮೋದ ನಾಯ್ಕ, ಮಹೇಶ ನಾಯ್ಕ, ವಿನುತಾ ಪೈ, ಮಂಜುಳಾ ಗೌಡ, ಚೇತನಾ ಮಡಿವಾಳ, ಬಿಜೆಪಿ ಮುಖಂಡರಾದ ಸುರೇಶ ಖಾರ್ವಿ, ಸುರೇಶ ಹರಿಕಂತ್ರ, ತಾ.ಪಂ. ಸದಸ್ಯ ಆರ್.ಪಿ ನಾಯ್ಕ, ಮಾರ್ಕೇಟಿಂಗ್ ಸೋಸೈಟಿ ಅರ್ಧಯಕ್ಷ ಹರಿಯಪ್ಪ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಮಂಜುನಾಥ ನಾಯ್ಕ ಸ್ವಾಗತಿಸಿ ಗಣಪತಿ ನಾಯ್ಕ ಬಿಟಿ ಪ್ರಾಸ್ತವಿಕವಾಗಿ ಮಾತನಾಡಿದರು.
Leave a Comment