ಹೊನ್ನಾವರ: ಸಿನಿಪ್ರೀಯ ತಾಲೂಕಿನ ಜನತೆಗೆ ಶುಕ್ರವಾರ ಡಬಲ್ ಧಮಾಕ್ ಬಾರಿಸಿದ್ದು, ತಾಲೂಕಿನ ಕಲಾವಿದರ ಎರಡು ಸಿನಿಮಾ ಒಮ್ಮೆಲ್ಲೆ ಪ್ರದರ್ಶನಗೊಳ್ಳುತ್ತಿದೆ. ಕೋರೋನಾ ಸಂಕಷ್ಟದಿಂದ ಕಳೆದ ಎರಡು ವರ್ಷದಿಂದ ಚಿತ್ರಮಂದಿರಗಳು ಹೆಚ್ಚಿನ ಸಮಯ ಬಾಗಿಲು ಮುಚ್ಚಿತ್ತು.
ಬಹು ನಿರೀಕ್ಷೆಯಲ್ಲಿದ್ದ ಎರಡು ಸಿನಿಮಾ ಪದ್ಮಾಂಜಲಿ ಚಿತ್ರ ಮಂದಿರದಲ್ಲಿ ಒಂದೇ ದಿನ ಬಿಡುಗಡೆಗೊಂಡಿದೆ. ಹೊನ್ನಾವರ ತಾಲೂಕಿನ ಅನಿಲಗೋಡ ಹರೀಶ ನಿರ್ದೇಶನದಲ್ಲಿ ನಿಮಾಣಗೊಂಡ “ಬೈ ಓನ್ ಗೇಟ್ ಒನ್ ಪ್ರೀ” ಚೊಚ್ಚಲ ಸಿನಿಮಾ ಬಿಡುಗಡೆಯಾದಂತಾಗಿದೆ. ಎಸ್.ಬಿ.ಎಸ್.ಸಿ ಕ್ರೀಯೇಶನ್ ಅಡಿಯಲ್ಲಿ ಮೂಡಿಬಂದಿರುವ ಇ ಚಿತ್ರ ಕರಾವಳಿ ಸುತ್ತಮುತ್ತ ಮೈಸೂರು, ಬೆಂಗಳೂರು ಭಾಗದಲ್ಲಿ ಚಿತ್ರಿಕರಣಗೊಂಡಿದೆ.
ಚಿತ್ರದಲ್ಲಿ ಥಿಲ್ಲರ್ ಜೊತೆಜೊತೆಗೆ ಹಾರರ್ ಸನ್ನಿವೇಶ ಕೂಡಿದೆ. ಕನ್ನಡದಲ್ಲಿ ಮೊದಲ ಬಾರಿಗೆ ಅವಳಿ ಸಹೋದರಾದ ಮಧು ಮಿಲನ್ ಹಾಗೂ ಮಧು ಮಿಥುನ್ ನಾಯಕರಾಗಿ ನಟಿಸಿರುವುದು ಈ ಚಿತ್ರದ ವಿಶೇಷವಾಗಿದೆ. ಎóಷಿತ್ ಮಲ್ನಾಡ್ ರೋಷಿಸಿ ತೆಲ್ಕರ್ ನಾಯಕಿಯಾಗಿ ನಟಿಸಿದ್ದು, ಪೇಕ್ಷಕರ ಮನಸೂರೆಗೊಳ್ಳಲು ಸಜ್ಜಾಗಿದೆ.
ತಾಲೂಕಿನ ಚಿತ್ರಮಂದಿರಲ್ಲಿ ಚಿತ್ರ ಪ್ರದರ್ಶನಕ್ಕೂ ಮೊದಲು ಮಾಜಿ ಶಾಸಕ ಮಂಕಾಳ ವೈದ್ಯ, ಮಾಜಿ ಜಿ.ಪಂ.ಸದಸ್ಯ ಕೃಷ್ಣ ಗೌಡ, ಮಂಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗೋವಿಂದ ನಾಯ್ಕ, ರವಿ ಶೆಟ್ಟಿ ಕವಲಕ್ಕಿ ಅಣ್ಣಯ್ಯ ನಾಯ್ಕ ಗಿರೀಶ ನಾಯ್ಕ ಹಡಿಕಲ್ ಮತ್ತಿತರರು ಸಿನಿಮಾ ಯಶ್ವಸಿಯಾಗಲಿ ಎಂದು ಶುಭ ಕೋರಿದರು.
ಇನ್ನೊಂದಡೆ ಹೊನ್ನಾವರ ಬಳ್ಕೂರಿನ ಬೃಂದಾ ಆಚಾರ್ಯ ನಾಯಕ ನಟಿಯಾಗಿ ಅಭಿನಯಿಸಿರುವ “ಪ್ರೇಮಂ ಪೂಜ್ಯಂ” ಸಿನಿಮಾ ಕೂಡಾ ಬಿಡುಗಡೆಯಗಿರುವುದು ವಿಶೇಷವಾಗಿದೆ. ಲವ್ಲಿ ಸ್ಟಾರ್ ಪ್ರೇಮ್ ಅವರ 25 ನೇ ಚಿತ್ರವಾಗಿರುದು ಇನ್ನೊಂದು ವಿಶೇಷವಾಗಿದೆ. ಇವರೊಡನೆ ಹಿರಿ ಕಿರಿಯ ಕಲಾವಿದರ ಸಮಾಗಮದ ಮೂಲಕ ಚಿತ್ರಿಕರಣ ಮುಗಿಸಿ ಪೇಕ್ಷಕರ ಮನಗೆಲ್ಲಲು ಬಿಡುಗಡೆಯಾಗಿದೆ.
ಈ ಚಿತ್ರ ವಿಶೇಷವೆಂದರೆ ಚಿತ್ರದಲ್ಲಿ 16 ಹಾಡುಗಳಿದ್ದು, ರಾಘವೇಂದ್ರ ಇವರೇ ಸಂಯೊಜನೆ ಮಾಡಿದ್ದಾರೆ. ಸರಿಸುಮಾರು 20 ವರ್ಷದ ಹಿಂದಿನ ಪ್ರೇಮಕಥೆ ಆಧರಿಸಿರುವ ಚಿತ್ರ ಇದಾಗಿದ್ದು, ಕಾಮಿಡಿ ಸೆಂಟಿಮೆಂಟ್ ಎಲ್ಲವು ಒಳಗೊಂಡಿರುವುದು ವಿಶೇಷವಾಗಿದೆ. ಚಿತ್ರದ ನಾಯಕ ನಟಿ ಹೊನ್ನಾವರದ ಬಳ್ಕೂರಿನವರಾಗಿದ್ದು, ನಿವೃತ್ತ ಶಿಕ್ಷಕ ದಂಪತಿಗಳಾದ ಆನಂದ ಆಚಾರ್ಯ, ಮಹದೇವಿ ಆಚಾಯ ಇವರ ಪುತ್ರಿಯಾಗಿದ್ದಾಳೆ. ಬೃಂದಾ ಇವರು ಇಂಜನಿಯರಿಂಗ್ ಪದವಿ ಪಡೆದಿದ್ದು, ಐಟಿ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಈ ಹಿಂದೆ ಕಲರ್ಸ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಮಹಾಕಾಳಿ ಧಾರವಾಹಿಯಲ್ಲಿ ರತಿ ಪಾತ್ರ, ಶನಿ ಧಾರವಾಹಿಯಲ್ಲಿ ಧಾಮಿನಿ ಪಾತ್ರವನ್ನು ಯಶ್ವಸಿಯಾಗಿ ನಿರ್ವಹಿಸುವ ಮೂಲಕ ಮನೆಮಾತಾಗಿದ್ದರು. ಕಿರುತರೆಯಿಂದ ಬೆಳ್ಳಿತೆರೆಯಲ್ಲಿ ನಾಯಕ ನಟಿಯಾಗಿ ನಟಿಸಿ ಬಿಡುಗಡೆಗೊಂಡ ಚೊಚ್ಚಲ ಸಿನಿಮಾ ಇದಾಗಿದೆ. ಒಂದು ವರ್ಷದಿಂದ ಚಿತ್ರದ ಟೈಲರ್ ಹಾಗು ಹಾಡು ತನ್ನದೇ ಆದ ಟೆಂಡ್ ಹುಟ್ಟುಹಾಕಿದ್ದು, ಪೇಕ್ಷಕರು ಚಿತ್ರ ವಿಕ್ಷಣೆಗಾಗಿ ಕಾತುರದಿಂದ ಕಾಯುತ್ತಿದ್ದರು.
ಚಿತ್ರ ಬಿಡುಗಡೆಯ ಹಿನ್ನಲೆಯಲ್ಲಿ ಬೃಂದಾ ಇವರ ಕುಟುಂಬ ಸದಸ್ಯರು, ತಾಲೂಕಿನ ವಿವಿಧ ಸಂಘಟಕರು ಚಿತ್ರಮಂದಿರಕ್ಕೆ ಒಟ್ಟಾಗಿ ಆಗಮಿಸಿ ಚಿತ್ರ ವಿಕ್ಷಿಸಿದರು. ಚಿತ್ರ ಪ್ರದರ್ಶನಕ್ಕೂ ಮೊದಲು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
shri devaki krishna wash point karki naka honavar contact; sachin mesta 9538529046,8310014860
Leave a Comment