ಹೊನ್ನಾವರ; ಪಟ್ಟಣದ ಬಿಕಾಸಿನತಾರಿಯಲ್ಲಿ ಸ್ಥಳೀಯ ಬೋಟ್ ಮಾಲೀಕರಿಂದ ಹೆಚ್ಚಿನ ಪ್ರಮಾಣದ ಹಣ ಪಡೆದು ಸೂಕ್ತ ಮುಂಜಾಗ್ರತೆ ಕ್ರಮವಿಲ್ಲದೇ ಪ್ರವಾಸಿಗರನ್ನು ಕರೆದೊಯ್ಯಲಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಕ್ರಮ ಕೈಗೊಗ್ಳುವಂತೆ ಆಗ್ರಹಿಸಿದರು.
ಪಟ್ಟಣದ ಚರ್ಚೆ ರಸ್ತೆಯ ಬಿಕಾಸಿತಾರಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೊರಜಿಲ್ಲೆಯ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಪ್ರೀ ವೆಡ್ಡಿಂಗ್ ಶೂಟಿಂಗ್ ಸೇರಿದಂತೆ ಇತರೆ ಚಾರಣಕ್ಕಾಗಿ ಆಗಮಿಸುತ್ತಿದ್ದಾರೆ. ಶರಾವತಿ ನದಿಯಲ್ಲಿ ಬೋಟ್ ಮೂಲಕ ದ್ರೋಣ್ ಕ್ಯಾಮರಾ ಬಳಸಿ ನದಿಯ ಮಧ್ಯೆ ಎಡ ಬಲದಂಡೆಯ ಚಿತ್ರಣ ನಡೆಸಲಾಗುತ್ತದೆ.

ಇದಕ್ಕೆ ಹಲವಾರು ಬೋಟ್ ನವರು ಅವರಿಗೆ ಬೇಕಾದ ರೀತಿಯ ದರ ನಿಗದಿಮಾಡಿ ಸೂಲಿಗೆ ಮಾಡುತ್ತಿದ್ದಾರೆ. ಪ್ರತಿ ದಿನ ಸ್ಥಳೀಯರಿಗೆ ಪಯಣಿಸಲು ಬೋಟ ಗಳಲ್ಲಿದೇ ನಿತ್ಯವು ಪರದಾಟ ಶುರುವಾಗಿದೆ. ಕಳೆದ ಹಲವು ದಿನಗಳಿಂದ ಪ್ರತಿನಿತ್ಯ ಜಗಳವಾಗುತ್ತಿದೆ. ಇದು ಸಾರ್ವಜನಿಕರಿಗೆ ಪ್ರವಾಸಿಗರಿಗೆ ಕಿರಿಕಿರಿಯಾಗುತ್ತಿದೆ. ಇದಲ್ಲದೇ ಬೋಟ್ ಗಳಲ್ಲಿ ಯಾವುದೇ ಪ್ರವಾಸಿಗರ ಸುರಕ್ಷತೆಗೆ ಲೈಫ್ ಜಾಕೇಟು ಮತ್ತಿತರ ಸುರಕ್ಷತಾ ಪರಿಕರಗಳು ಇರುವುದಿಲ್ಲ.
ಕಳೆದ ಬಾರಿ ಕಾರವಾರದ ಕೂರ್ಮಗಡದಲ್ಲಿ ನಡೆದಂತೆ ಅವಗಡ ಇಲ್ಲಿಯೂ ಸಂಭವಿಸಿದರೂ ಅಚ್ಚರಿ ಇಲ್ಲ. ಇಂತಹ ಅನಾಹುತ ಸಂಭವಿಸುವ ಮೊದಲು ಈ ಬಗ್ಗೆ ಜಾಗೃತಿವಹಿಸಬೇಕಿದೆ. ಇದನ್ನು ಗಂಭೀರವಾಗಿ ಪರಿಗಣಸಿ ಸೂಕ್ತ ದರ ನಿಗದಿ ಮಾಡುವ ಜೊತೆ ಪ್ರವಾಸಿಗರಿಗೆ ಭದ್ರತೆ ಸ್ಥಳಿಯರ ಸಂಚಾರಕ್ಕೆ ಸಮಸ್ಯೆ ಆಗದಂತೆ ನೋಡಿಕೊಳ್ಳುವಂತೆ ಮನವಿ ಸಲ್ಲಿಸಿದರು.
ಕರವೇ ಅಧ್ಯಕ್ಷ ಉದಯರಾಜ ಮೇಸ್ತ ಮಾತನಾಡಿ ವಿವಿಧಡೆ ನಡೆಯುವ ಬೋಟ್ ದುರಂತದಿಂದ ಸಾವು ನೋವು ಸಂಭವಿಸುತ್ತಿದೆ. ನಮ್ಮಲ್ಲಿ ಅಂತಹ ದುರಂತ ನಡೆಯುವ ಮೊದಲು ಎಚ್ಚೆತ್ತುಕೊಳ್ಳಬೇಕಿದೆ. ಪಟ್ಟಣ ಪಂಚಾಯತಕ್ಕೆ ಸೇರಿದ ಜಾಗದಲ್ಲಿ ಕೆಲವರು ಪ್ರವಾಸಿಗರ ವಾಹನದಿಂದ ಪಾರ್ಕಿಂಗ್ ಶುಲ್ಕವನ್ನು ಅನಿಧಿಕೃತವಾಗಿ ವಸೂಲು ಮಾಡುತ್ತಿದ್ದಾರೆ. ಇದರಿಂದ ಹೊನ್ನಾವರದ ಬಗ್ಗೆ ಪ್ರವಾಸಿಗರಲ್ಲಿ ತಪ್ಪು ಕಲ್ಪನೆ ಬರುವ ಸಾಧ್ಯತೆ ಇದೆ.
ಈ ಪ್ರದೇಶದಲ್ಲಿ ಪ್ರವಾಸಿಗರಿಗೂ ಸೂಕ್ತ ಸುವ್ಯವಸ್ಥೆ – ಭದ್ರತೆ ಒದಗಿಸಬೇಕು. ಪ್ರವಾಸೋದ್ಯಮಕ್ಕೆ ಪೂರಕ ಸ್ಥಳೀಯರಿಗೆ ಉದ್ಯೋಗ ಅವಕಾಶ ಒದಗಿಸಬೇಕು ಎಂದು ಒತ್ತಾಯಿಸಿದರು.ಈ ವೇಳೆ ಕಾರ್ಯಧ್ಯಕ್ಷ ಸುರೇಶ ಮೇಸ್ತ, ಉಪಾಧ್ಯಕ್ಷ ಶ್ರೀಕಾಂತ ಮೇಸ್ತ, ಕಾರ್ಯದರ್ಶಿ ಪ್ರದೀಪ ಆಚಾರ್ಯ, ವಕ್ತಾರ ರಮೇಶ ರಾಯ್ಕರ್, ಸದಸ್ಯರಾದ ಸಂದೀಪ ಮೇಸ್ತ, ರಾಹುಲ್ ಮೇಸ್ತ, ಸಂತೋಷ ಮೇಸ್ತ, ಜಯೇಶ ಮೇಸ್ತ ಮತ್ತಿತರರು ಹಾಜರಿದ್ದರು
Leave a Comment