ಯಲ್ಲಾಪುರ: . ಸಂವಿಧಾನದಲ್ಲಿ ಎಲ್ಲರ ರಕ್ಷಣೆಗೆ ಸಮಾನ ಅವಕಾಶವಿದೆ. ಆದರೆ ನಾವು ಕೇವಲ ಹಕ್ಕುಗಳನ್ನು ಮಾತ್ರ ಚಲಾಯಿಸಲು ಮುಂದಾಗದೇ ನಮ್ಮ ಕರ್ತವ್ಯಗಳನ್ನು ಅರಿತು ಪಾಲಿಸಬೇಕು ಪ್ರತಿಯೊಬ್ಬರೂ ರಾಷ್ಟಿçÃಯ ಭದ್ರತೆಗೆ, ಐಕ್ಯತೆಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು ಎಂದು ಪೋಲಿಸ್ ನಿರೀಕ್ಷಕ ಸುರೇಶ ಯಳ್ಳೂರ ಹೇಳಿದರು.ಅವರು ಪಟ್ಟಣದ ತಾಲೂಕಾ ಪಂಚಾಯತ ಸಭಾಭವನದಲ್ಲಿ ತಾಲೂಕಾಡಳಿತ ಹಾಗೂ ಪೋಲಿಸ್ ಇಲಾಖೆಯ ಸಹಯೋಗದಲ್ಲಿ ರಾಷ್ಟಿçÃಯ ಭಾವೈಕ್ಯತಾ ಸಪ್ತಾಹದಂಗವಾಗಿ ಹಮ್ಮಿಕೊಂಡಿದ್ದ ಸರ್ವಧರ್ಮಿಯರ ಮುಖಂಡರ ಸಭೆಯನ್ನುದ್ದೇಶಿಸಿ ಮಾತನಾಡಿ
ಎಲ್ಲ ಧರ್ಮದಲ್ಲಿ ಯೂ ಕೆಟ್ಟವರು , ಒಳ್ಳೆಯವರು ಇದ್ದೇ ಇರುತ್ತಾರೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿರುವ ಒಳ್ಳೆಯವರು ಬೆರಳೆಣಿಕೆಯಷ್ಟಿರುವ ಸಮಾಜ ಘಾತುಕರನ್ನು ಖಂಡಿಸದೇ ತಮಗೇಕೆ ಇಲ್ಲದ ಉಸಾಬರಿ ಎಂದು ನಿಷ್ಕಿçÃಯತೆ ತಾಳುವದು ಅಷ್ಟೇ ಅಪಾಯಕಾರಿ ಬೆಳವಣಿಗೆ ಎಂದರಲ್ಲದೇ ಮೂರು ಧರ್ಮಗಳಲ್ಲಿರುವ ಕಿಡಿಗೇಡಿಗಳ ಮಾಹಿತಿ ನಮ್ಮಲ್ಲಿದೆ. ನಾವು ಅವರನ್ನು ಮಟ್ಟಹಾಕುತ್ತೇವೆ. ದೇಶದ ವಿಷಯದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಸಮನ್ವಯತೆಯಿಂದ ಒಂದಾಗಬೇಕು. ಮುಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ರಾಷ್ರೀಯ ಭಾವೈಕ್ಯತಾ ಜಾಗೃತಿಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು.
ಎಂದರು. ತಹಶೀಲ್ದಾರ ಶ್ರೀಕೃಷ್ಣ ಕಾಮಕರ ಅಧ್ಯಕ್ಷತೆ ವಹಿಸಿ ಮಾತನಾಡಿ ಸಭೆ ನಡೆಸಿ ರಾಷ್ಟಿçÃಯ ಐಕ್ಯತೆ ಮೂಡಿಸುವ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳುವಂತಾಗಿರುವದು ಆತಂಕಕಾರಿ ಬೆಳವಣಿಗೆ, ಅತಿಯಾದ ತಂತ್ರಜ್ಞಾನ, ಬುದ್ದಿವಂತಿಕೆ ಇಂದು ಯುವ ಪೀಳಿಗೆಯವರಲ್ಲಿ ಒಳ್ಳೆಯದಕ್ಕಿಂತ ಸ್ವಾರ್ಥಕ್ಕಾಗಿ ಬಳಕೆವಾಗುತ್ತಿರುವದು ವಿಪರ್ಯಾಸವೇ ಸರಿ .ಬಾಲ್ಯದಿಂದಲೇ ಮಕ್ಕಳಿಗೆ ಮನೆಯಲ್ಲಿ ಉತ್ತಮ ಸಂಸ್ಕಾರ, ಶಿಕ್ಷಣ ನೀಡಿದರೆ ಐಕ್ಯತೆಗಾಗಿ ಹೋರಾಟ ಮಾಡುವಂತಾಗದೇ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.
ಪ್ರಮುಖರಾದ ಈಶÁðದ ಮಾತನಾಡಿ ಸ್ಥಳಿಯವಾಗಿ ಸರ್ವಧರ್ಮದ ಮುಖಂಡರನ್ನೋಳಗೊAಡ ಸಮಿತಿ ರಚಿಸಿ ಅಹಿತಕರ ಘಟನೆಗೆ ಕಾರಣರಾದವರು ಯಾವದೇ ಧರ್ಮದವರಾಗಿದ್ದರೂ ಅದನ್ನು ಖಂಡಿಸಿ ವಿಕೋಪಕ್ಕೆ ಹೋಗದಂತೆ ಸೌಹಾರ್ಧಯುತವಾಗಿ ಬಗೆಹರಿಸುವಂತಾಗಬೇಕು ಎಂದು ಸಲಹೆ ನೀಡಿದರು. ಪತ್ರಕರ್ತರಾದ ,ಪ್ರಭಾವತಿ ಗೋವಿ , ಕೇಬಲ್ ನಾಗೇಶ ಮುಖಂಡರಾದ ಉಲ್ಲಾಸ ಶಾನಭಾಗ , ನಾರಾಯಣ ನಾಯ್ಕ , ಹಾಸಣಗಿ ರಾಮಣ್ಣಾ ,ಅಕ್ಬರ ಶೇಖ , ಮುಂತಾದವರು ತಮ್ಮ ಅಭಿಪ್ರಾಯ ಮಂಡಿಸಿದರು.ಪೋಲಿಸ ಇಲಾಖೆಯ ನಾಗಪ್ಪಾ ಲಮಾಣಿ ನಿರ್ವಹಿಸಿದರು.
Leave a Comment