ಯಲ್ಲಾಪುರ: ಪಟ್ಟಣದ ಬಸವೇಶ್ವರ ವೃತ್ತದ ಬಳಿಯಿರುವ ಬಸವೇಶ್ವರ ದೇವಸ್ಥಾನದಲ್ಲಿ ಕಾರ್ತೀಕ ಮಾಸದ ಪ್ರಯುಕ್ತ ಶಿವನಿಗೆ ವಿಶೇಷ ಆಭರಣ ಅಲಂಕಾರ ,ಹೂವಿನಿಂದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಿ ಕಾರ್ತಿಕೋತ್ಸವವನ್ನು ಸಂಭ್ರಮ ದಿಂದ ಆಚರಿಸಲಾಯಿತು. .
ದೇವಾಲಯದ ಆವಾರದಲ್ಲಿ ಅರ್ಚಕ ವೇ. ಶಿವಯ್ಯ ನವರು ಬಿಡಿಸಿದ ಆಕರ್ಷಕವಾದ ಹೂವಿನ ರಂಗೋಲಿ, ದೀಪಗಳ ಅಲಂಕಾರ ಭಕ್ತರ ಕಣ್ಮನ ಸೂರೆಗೊಂಡಿತು. ದೇವಾಲಯಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವಿಶೇಷ ಪೂಜೆ ಹಣ್ಣು ಕಾಯಿ ಸೇವೆ ಸಲ್ಲಿಸಿ ಶಿವನ ಕೃಪೆ ಗೆ ಪಾತ್ರರಾದರು.
ಉತ್ಸಾಹದಿಂದ ದೀಪಗಳನ್ನು ಬೆಳಗಿಸಿ ದೀಪೋತ್ಸವದಲ್ಲಿ ಪಾಲ್ಗೋಂಡರು.ನಂತರ ಮಹಾ ಮಂಗಳಾರತಿ,ಪ್ರಸಾದ ವಿತರಣೆ ನಡೆಯಿತು
Leave a Comment