• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ದಂಡಿನ ದುರ್ಗಾ ದೇವಸ್ಥಾನದ ಮೇಲೆ ಸಣ್ಣ ಕಲ್ಲುಗಳ ಎಸೆದ ಕಿಡಿಗೇಡಿಗಳು

January 27, 2022 by bkl news Leave a Comment

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಭದ್ರತೆ ನೀಡಿದ ನಗರ ಠಾಣೆ ಪೊಲೀಸರು

ಭಟ್ಕಳ: ಪದೇ ಪದೇ ಒಂದಾಲ್ಲೊAದು ರೀತಿಯಲ್ಲಿ ಅಪಚಾರ ಮಾಡುವ ಉದ್ದೇಶದಿಂದ ಕಿಡಿಗೇಡಿಗಳು
ನಗರದ ಕೋಟೇಶ್ವರ ನಗರದ ಶ್ರೀ ದಂಡಿನ ದುರ್ಗಾ ದೇವಸ್ಥಾನಕ್ಕೆ ಹಾನಿ ಹಾಗೂ ಅಪಚಾರಮಾಡುತ್ತಾ ಬಂದಿದ್ದು ಈಗ ಮತ್ತೆ ಸುದ್ದಿಯಲ್ಲಿದ್ದು ಕಾರಣ ಯಾರೋ ಕಿಡಿಗೇಡಿಗಳು ಕಳೆದ ೩ ದಿನಗಳಿಂದ ಸಣ್ಣ ಕಲ್ಲುಗಳನ್ನು ಎಸೆಯುತ್ತಿರುವ ಬಗ್ಗೆ ಮಾಹಿತಿ ನೀಡಿದ್ದ ಕಮಿಟಿ ಅವರು ಕಿಡಿಗೇಡಿಗಳ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು ಆರೋಪಿಗಳ ಪತ್ತೆಗೆ ಠಾಣೆ ಮೆಟ್ಟಿಲೇರಿದ್ದಾರೆ.

ನಗರ ಭಾಗದಲ್ಲಿನ ಪ್ರಮುಖ ದೇವಸ್ಥಾನದಲ್ಲಿ ಒಂದಾದ ದಂಡಿನ ದುರ್ಗಾ ದೇವಸ್ಥಾನವನ್ನು ಪದೇ ಪದೇ ಮಲಿನ, ದೇವರ ಡಬ್ಬಿ ಕಳ್ಳತನ ಹೀಗೆ ಅನೇಕ ವಿಚಾರದಲ್ಲಿ ಸುದ್ದಿಯಲ್ಲಿತ್ತು. ಆದರೆ ಈಗ ಅವೆಲ್ಲ ಘಟನೆಗಳನ್ನು ಮೀರಿಸುವಂತೆ ಕಾಶ್ಮೀರದ ದೇವಸ್ಥಾನದ ಮೇಲೆ ಯಾವ ರೀತಿ ಕಲ್ಲು ಎಸೆಯುವ ಘಟನೆ ನಡೆಯುತ್ತಿದ್ದವೋ ಅಂತಹ ದುಸ್ಸಾಹಸಕ್ಕೆ ಕಿಡಿಗೇಡಿಗಳು ಕೈಹಾಕಿದ್ದಾರೆ.

wp 1643305975955
wp 1643305954208

ಜನವರಿ ೨೨ ರಿಂದ ೨೪ ರವರೆಗೆ ಅಷ್ಟಬಂಧ ಪುನರ್ ಪ್ರತಿಷ್ಠಾಪನಾ ಮಹೋತ್ಸವವನ್ನು ಶ್ರದ್ದಾ ಭಕ್ತಿಯಿಂದ ಭಕ್ತರು ಸಂಭ್ರಮದಿAದ ಆಚರಿಸಿದ್ದರು. ಈ ಪೈಕಿ ಜನವರಿ ೨೩,೨೪ ಹಾಗೂ ೨೫ ರಂದು ಸತತ ಮೂರು ದಿನಗಳ ಕಾಲ ಬೆಳಿಗ್ಗೆ ಮತ್ತು ಮಧ್ಯಾಹ್ನದ ವೇಳೆಗೆ ದೇವಸ್ಥಾನದ ಎಡಬಾಗದಿಂದ ಸಣ್ಣ ಕಲ್ಲುಗಳನ್ನು ಎಸೆಯಲಾಗಿತ್ತು.

ಈ ವೇಳೆಗೆ ಅಲ್ಲಿದ್ದ ಭಕ್ತರಿಗೆ ಹಾಗೂ ಕಮಿಟಿಯ ಸದಸ್ಯರಿಗೆ ಅಷ್ಟಾಗಿ ಗಮನ ಹರಿಸದೇ ಇದ್ದ ಕಾರಣ ಅಲ್ಲಿದೆ ಅದು ಮುಗಿತ್ತು ಆದರೆ ಇದು ಮತ್ತೆ ಮಂಗಳವಾರದAದು ಮಧ್ಯಾಹ್ನ ವೇಳೆ ದೇವಸ್ಥಾನದ ಅರ್ಚಕರು ದೇವಸ್ಥಾನದ ಹಿಂಬದಿಯ ಕಲ್ಲು ಚಾವಡಿಗೆ ಬಂದು ಬಿದ್ದಿದ್ದು ಇದರಿಂದ ಗಾಬರಿಗೊಂಡ ಅವರು ತಕ್ಷಣ ಮಾಹಿತಿ ನೀಡಿದ್ದಾರೆ.

ಹಾಗೂ ಕಾರ್ಯಕ್ರಮಕ್ಕೆ ಹಾಕಲಾದ ಶ್ಯಾಮಿಯಾನ ತೆಗೆಯಲು ಬಂದ ವೇಳೆ ಸಣ್ಣ ಕಲ್ಲುಗಳು ದೇವಸ್ಥಾನದ ಚಾವಣಿಯ ಶೀಟ್‌ನ ಮೇಲೆ ಬಿದ್ದಿದ್ದು ಕಮಿಟಿಯ ಸದಸ್ಯರು ನೋಡಿದ್ದಾರೆ. ಅದರು ಸಹ ಚಿಟ್ ಪಿಲ್ ಬಳಸಿ ದೇವಸ್ಥಾನದ ಚಾವಣಿಗೆ ಬೀಳುವ ರೀತಿಯಲ್ಲಿ ಕಲ್ಲು ಎಸೆದಿರುವ ಶಂಕೆ ವ್ಯಕ್ಯವಾಗಿದ್ದು ಈ ಘಟನೆ ಖಂಡನಾರ್ಹ ಎಂದು ಕಮಿಟಿಯ ನಿಕಟಪೂರ್ವ ಅಧ್ಯಕ್ಷ ರಾಮಕೃಷ್ಣ ನಾಯ್ಕ ಆಗ್ರಹಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ ೧೨ ಗಂಟೆಯ ಸುಮಾರಿಗೆ ಸಮಿತಿಯವರು ದೇವಸ್ಥಾನಕ್ಕೆ ಆಗಮಿಸಿ ನೋಡಿದಾಗ ೧೦-೧೨ ಚಿಕ್ಕ ಚಿಕ ಕಲ್ಲುಗಳು ಚಾವಡಿ ಮೇಲೆ ಪತ್ತೆಯಾಗಿದೆ. ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ದಿನವಾದ ಭಾನುವಾರ, ಸೋಮವಾರವೂ ಕಲ್ಲುಗಳ ಶಬ್ದವಾಗಿದ್ದು ಕಾರ್ಯಕ್ರಮದ ಗಡಿಬಿಡಿಯಲ್ಲಿ ಗಮನಹರಿಸಲು ಸಾಧ್ಯವಾಗಿಲ್ಲ ಆದರೆ ಇಂದು ಘಟನೆಯು ಕಲ್ಲೆಸೆತದಿಂದಾಗಿ ಶಬ್ದ ಬಂದಿದೆ ಎಂಬುದನ್ನು ಸಮಿತಿಯವರು ದೃಢಪಡಿಸಿದ್ದಾರೆ.
ಘಟನೆಯ ಕುರಿತಂತೆ ದೇವಸ್ಥಾನದ ಸಮಿತಿಯ ಸದಸ್ಯರು ವಿಸ್ತೃತವಾಗಿ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

  • ಹಿಂದೂಗಳ ಭಾವನೆಗಳನ್ನು ಕೆರಳಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ,ಮೆರವಣಿಗೆ
    Date
    May 26, 2017
  • ದಂಡಿನ ದುರ್ಗಾ ದೇವಸ್ಥಾನ ಕಳ್ಳತನಕ್ಕೆ ವಿಫಲ ಯತ್ನ:ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
    Date
    June 28, 2021
  • ದೇವಸ್ಥಾನದ ಗೋಡೆಗೆ ಅಂಟಿಕೊಂಡ ರಕ್ತದ ಕಲೆ; ಸಾರ್ವಜನಕರಲ್ಲಿ ಕಳವಳ
    Date
    May 17, 2017

ಪದೇ ಪದೇ ದಾಳಿಯ ಪತ್ತೆ ಅಗತ್ಯ:

ಕಳೆದ ೨೨ ವರ್ಷದಿಂದ ಈ ದೇವಸ್ಥಾನದ ಮೇಲೆ ದಾಳಿ, ಮಲಿನಗೊಳಿಸುವುದು ನಿರಂತರವಾಗಿದೆ. ಕೇವಲ ಹಿಂದುಗಳ ದೇವಸ್ಥಾನದ ಮೇಲೆ ಯಾಕೆ ದಾಳಿ, ಮಲಿನ ಗೊಳಿಸುವುದು ನಡೆಯುತ್ತಿದೆ ಎಂಬ ರಹಸ್ಯ ಹೊರಬೀಳಬೇಕಾಗಿದೆ. ದಂಡಿನದುರ್ಗಾ ದೇವಸ್ಥಾನದಿಂದ ಕೆಲ ತಿಂಗಳ ಹಿಂದೆಯಷ್ಟೇ ಕಳವು ಮಾಡಿದ್ದು ಸಿಸಿಟಿವಿ ಕ್ಯಾಮರದಲ್ಲಿ ವೃಕ್ತಿ ಕೃತ್ಯ ನಡೆಸಿ ವಾಪಸ್ ಹೋಗುತ್ತಿರುವುದು ಕಂಡು ಬಂದಿತ್ತು. ಹಾಗೂ ನಂತರ ಆರೋಪಿಯ ಪತ್ತೆ ಕೆಲಸವನ್ನು ಸಹ ಪೋಲೀಸರು ಮಾಡಿದ್ದಾರೆ. ಈಗ ದೇವಸ್ಥಾನಕ್ಕೆ ದೂರದಿಂದ ಚಿಟ್ ಬಿಲ್ ಬಳಸಿ ಕಲ್ಲು ಎಸೆದಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದ್ದು, ಸದ್ಯ ದೇವಸ್ಥಾನಕ್ಕೆ ಪೊಲೀಸ್ ಭದ್ರತೆ ನೇಮಿಸಲಾಗಿದ್ದು ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಬೇಕೆಂದು ಸಮಿತಿಯವರು ಆಗ್ರಹಿಸಿದ್ದಾರೆ.

James -2022

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Filed Under: Bhatkal News, Canara News

Explore More:

About bkl news

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,121 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...