• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ವಿಚಿತ್ರ ರೋಗಕ್ಕೆ ಇಬ್ಬರು ಬಾಲಕರು ಬಲಿಯಾದ ಬಳಿಕ ನಾಲವಾರದಲ್ಲಿ ಹೆಚ್ಚಿದ ಆತಂಕ

February 4, 2022 by Deepika Leave a Comment

ವಾಡಿ: ಕುಟುಂಬ ಸದಸ್ಯರನ್ನು ಕಾಡಿದ ಚಿಕನ್ ಫಾಕ್ಸ್ ರೋಗ ಲಕ್ಷಣದ ಕಲೆಗಳು ಇಬ್ಬರು ಬಾಲಕರನ್ನು ಬಲಿ ಪಡೆದ ನಂತರ ನಾಲವಾರ ಗ್ರಾಮದ ಸ್ಟೇಷನ್ ಬಡಾವಣೆಯ ಜನರು ಜೀವ ಭಯ ಎದುರಿಸುತ್ತಿದ್ದಾರೆ. ಪಟೇಲ ಕುಟುಂಬದ ಮೂವರು ಇದೇ ಮಹಾಮಾರಿ ಕಾಯಿಲೆಯಿಂದ ಬಳಲಿ ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇತ್ತ ಓಣಿಯ ಜನರು ಮಕ್ಕಳನ್ನು ಮನೆಯಿಂದ ಹೊರಗಡೆ ಕಳಿಸಲು ಹೆದರುತ್ತಿದ್ದಾರೆ.

  • WhatsApp Image 2022 02 03 at 22.21.06
  • WhatsApp Image 2022 02 03 at 22.21.05 1
  • WhatsApp Image 2022 02 03 at 22.21.05


ಮಾರಣಾಂತಿಕವಲ್ಲದ ಚಿಕನ್ ಫಾಕ್ಸ್ ರೋಗ ಗ್ರಾಮಸ್ಥರ ಎದೆ ನಡುವಂತೆ ಮಾಡಿದ್ದು, ಬಾಲಕರಾದ ಇಮ್ರಾನ್ (೯) ಮತ್ತು ರೆಹಮಾನ್ (೧೬) ದೇಹವನ್ನು ವ್ಯಾಪಿಸಿದ್ದ ಕಪ್ಪು ಮತ್ತು ರಕ್ತ ರೂಪದ ಕೆಂಪು ಕಲೆಗಳಿಂದ ಬಳಲಿ ಮೃತಪಟ್ಟ ಘಟನೆಗೆ ಇಡೀ ಊರು ಬೆಚ್ಚಿಬಿದ್ದಿದೆ. ತಾಯಿ ಹಫೀಜಾಬೇಗಂ ಮತ್ತು ಇವರ ಇನ್ನಿಬ್ಬರು ಮಕ್ಕಳಿಗೂ ರೋಗ ಅಂಟಿಕೊಂಡಿದ್ದು, ಆರೋಗ್ಯ ಇಲಾಖೆಯ ಅಧಿಕಾರಿಗಳ ನಿದ್ದೆಗೆಡಿಸಿದೆ.

  • WhatsApp Image 2022 02 03 at 22.21.08
  • WhatsApp Image 2022 02 03 at 22.21.07 1
  • WhatsApp Image 2022 02 03 at 22.21.07

ಅದೃಷ್ಠವಶಾತ್ ಆಸ್ಪತ್ರೆಗೆ ದಾಖಲಾದ ಬಳಿಕ ಮೃತ ಬಾಲಕರ ತಾಯಿ ಮತ್ತು ಸಹೋದರ-ಸಹೋದರಿಯ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಹತ್ತೇ ದಿನದಲ್ಲಿ ಇಬ್ಬರು ಮಕ್ಕಳನ್ನು ದಫನ್ ಮಾಡಿ ಆಸ್ಪತ್ರೆಯಲ್ಲಿ ತಾಯಿ ಗೋಳಾಡುತ್ತಿದ್ದರೆ, ಮೂರು ತಿಂಗಳ ಹಿಂದಷ್ಟೇ ದುಡಿಯಲು ದುಭೈ ದೇಶಕ್ಕೆ ಹೋಗಿರುವ ಹಫೀಜಾಬೇಗಂ ಅವರ ಪತಿ ಮಹೆಬೂಬ ಪಟೇಲ್, ಮರಳಿ ಭಾರತಕ್ಕೆ ಬರಲಾಗದೆ ಹೆಂಡತಿ ಮಕ್ಕಳ ದುರಂತ ಕಥೆ ಕೇಳಿ ಮನದಲ್ಲೇ ಮಮ್ಮಲ ಮರುಗುತ್ತಿದ್ದಾರೆ.

  • WhatsApp Image 2022 02 03 at 22.21.08 2
  • WhatsApp Image 2022 02 03 at 22.21.08 1
  • WhatsApp Image 2022 02 03 at 22.21.06 1


ಓಣಿ ಜನರ ಆರೋಗ್ಯ ತಪಾಸಣೆ ಆರಂಭ: ಪಟೇಲ ಕುಟುಂಬ ಸದಸ್ಯರ ನಂತರ ಬಡಾವಣೆಯ ಇತರ ಕುಟುಂಬಗಳಿಗೂ ಈ ವಿಚಿತ್ರ ರೋಗ ಹರಡುತ್ತಿರುವುದು ಪರೀಕ್ಷೆಯಿಂದ ದೃಢಪಟ್ಟಿದ್ದು, ಇದು ವೈದ್ಯಲೋಕಕ್ಕೆ ಸವಾಲಾಗಿ ಪರಿಣಮಿಸಿದೆ. ಜ.೩೧ ರಂದು ಕಾಯಿಲೆ ಮರಣಮೃದಂಗ ಭಾರಿಸಿದ ಬಳಿಕ ಎಚ್ಚೆತ್ತ ತಾಲೂಕು ಆರೋಗ್ಯ ಇಲಾಖೆ, ರೋಗ ಲಕ್ಷಣ ಇರುವವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದೆ.

ಆಶಾ ಕರ‍್ಯರ‍್ತೆಯರು ಹಾಗೂ ಆರೋಗ್ಯ ಸಿಬ್ಬಂದಿಗಳು ನಾಲವಾರ ಸ್ಟೇಷನ್ ಬಡಾವಣೆಯ ಜನರ ಮನೆ ಮನೆಗೆ ತೆರಳಿ ರಕ್ತದ ಸ್ಯಾಂಪಲ್ ಸಂಗ್ರಹ ಮಾಡಿದ್ದಾರೆ. ಬಡಾವಣೆಯ ನಿವಾಸಿಗಳ ರೋಗದ ಲಕ್ಷಣದ ಮೇಲೆ ನಿಗಾವಹಿಸಿರುವ ಆಶಾ-ಆರೋಗ್ಯ ಕರ‍್ಯರ‍್ತರು, ಪ್ರತಿದಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಒಟ್ಟಾರೆ ಎರಡು ಎಳೆಯ ಜೀವಗಳು ರೋಗಕ್ಕೆ ಬಲಿಯಾದ ಬಳಿಕ ಆರೋಗ್ಯ ಇಲಾಖೆಯಿಂದ ಜನರ ಆರೋಗ್ಯದ ಕಾಳಜಿ ಹೆಚ್ಚಾಗಿದೆ. ರೋಗ ಹರಡಿದ ತಕ್ಷಣ ಆಸ್ಪತ್ರೆಗೆ ಹೋಗದೇ ಮೌಢ್ಯಾಚರಣೆಗೆ ಮುಂದಾಗಿ ಕಾಲಹರಣ ಮಾಡುವ ಪದ್ಧತಿ ಇಲ್ಲಿನ ಜನರಲ್ಲಿದೆ ಎಂಬುದು ವಿಶ್ವಾಸರ‍್ಹ ಮೂಲಗಳ ಆರೋಪವಾಗಿದೆ.

“ಇಬ್ಬರು ಮಕ್ಕಳು ಮೃತಪಟ್ಟು ಇನ್ನೂ ಮೂವರು ಆಸ್ಪತ್ರೆಗೆ ದಾಖಲಾದ ಬಳಿಕ ನಾಲವಾರ ಗ್ರಾಮದ ಸ್ಟೇಷನ್ ಬಡಾವಣೆಯ ನಿವಾಸಿಗಳ ರಕ್ತ ಮಾದರಿ ಸಂಗ್ರಹಿಸಲಾಗುತ್ತಿದೆ. ಆಶಾ ಕರ‍್ಯರ‍್ತೆಯರು ಮತ್ತು ಆರೋಗ್ಯ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಆರೋಗ್ಯ ಪರೀಕ್ಷೆ ನಡೆಸುತ್ತಿದ್ದಾರೆ. ಚಿಕನ್ ಪಾಕ್ಸ್ ಕಾಯಿಲೆ ಪತ್ತೆಗಾಗಿ ಪರೀಕ್ಷೆ ನಡೆಯುತ್ತಿದೆ. ಕುಟುಂಬಕ್ಕೆ ವ್ಯಾಪಿಸಿ ಇಬ್ಬರ ಬಲಿ ಪಡೆದ ರೋಗ ಯಾವೂದು ಎಂಬುದು ಪ್ರಯೋಗಾಲಯದ ವರಿದಿ ಬಂದ ನಂತರ ಬಹಿರಂಗ ಪಡಿಸುತ್ತೇವೆ. ಐದಾರು ದಿನದಲ್ಲಿ ಇದು ಬೆಳಕಿಗೆ ಬರಲಿದೆ”
-ಡಾ//ಅಮರದೀಪ ಪವಾರ
THO ಚಿತ್ತಾಪುರ

  • ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ
  • ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025
  • ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ
  • ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025
  • ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

  • ಹಳಿಯಾಳ : ಮತ್ತಿಬ್ಬರು ಯುವತಿಯರಲ್ಲಿ ಕೊರೊನಾ ಸೊಂಕು ಪತ್ತೆ ? – ಸೊಂಕಿತರ ಸಂಖ್ಯೆ 10ಕ್ಕೆ ಏರಿಕೆ ???
    Date
    June 25, 2020
  • ಹಳಿಯಾಳ ಸಕ್ರಿಯ ಕೊರೊನಾ ಸೊಂಕಿತರ ಸಂಖ್ಯೆ95 ! ಶನಿವಾರ 12 ಜನ ಗುಣಮುಖರಾಗಿ ಬಿಡುಗಡೆ.
    Date
    July 26, 2020
  • ಹುಬ್ಬಳ್ಳಿ ಜನತೆ ನಿದ್ದೆಯಲ್ಲಿದ್ದಾಗ ನಡೆಯಿತು ಡಬಲ್ ಮರ್ಡರ್ ಬೆಚ್ಚಿಬಿದ್ದ ಟ್ವಿನ್ ಸಿಟಿ ಜನತೆ.
    Date
    August 27, 2020

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Filed Under: Canara News, Karnataka News

Explore More:

About Deepika

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,039 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...