
ಯಲ್ಲಾಪುರ : ಹಿಜಾಬ್ ವಿವಾದ ಶಾಲಾ ಕಾಲೇಜುಗಳಲ್ಲಿ ಧರಿಸುವ ಸಮವಸ್ತ್ರಕ್ಕೆ ಸಂಬAಧಿಸಿದ ವಿಷಯವಾಗಿದೆ. ಈ ವಿವಾದವನ್ನು ಹಿಂದೂ ಧರ್ಮದ ನಂಬಿಕೆ ಹಾಗೂ ಸಂಪ್ರದಾಯಗಳಿಗೆ ಜೋಡಿಸಿ, ಸಮಾಜದಲ್ಲಿ ಅಶಾಂತಿ ಹುಟ್ಟು ಹಾಕಲು ಪ್ರಯತ್ನಿಸುತ್ತಿರುªವರನ್ನು ಬಲವಾಗಿ ಖಂಡಿಸುತ್ತಿದ್ದೇವೆ ಎಂದು ಹಿಂದೂ ಸಂಘಟನೆಗಳ ಪ್ರಮುಖ ರಾಮು ನಾಯ್ಕ ಹೇಳಿದರು.
ಅವರು ಪಟ್ಟಣದ ಶಕ್ತಿ ಗಣಪತಿ ದೇವಸ್ಥಾನದಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿ ಇದು ಕೇವಲ ಹಿಜಾಬ್ ಹಾಗೂ ಸಮವಸ್ತ್ರದ ನಡುವಿನ ವಿವಾದವೇ ಹೊರತು, ಹಿಜಾಬ್ ಮತ್ತು ಕೇಸರಿ ಅಥವಾ ಹಿಂದೂ ಮುಸ್ಲಿಂ ನಡುವಿನ ವಿವಾದವಲ್ಲ. ಮುಸ್ಲಿಂ ವಿದ್ಯಾರ್ಥಿಗಳು, ಇನ್ಯಾರದೋ ಮಾತು ಕೇಳಿ ತಮ್ಮ ಮೂಲಭೂತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್ ಆಯಾ ಶಾಲಾ ಕಾಲೇಜು ಆಡಳಿತ ಮಂಡಳಿಗಳ, ಸರಕಾರದ ಹಾಗೂ ಸದ್ಯ ನ್ಯಾಯಾಲಯದ ಮುಂದಿರುವ ಪ್ರಶ್ನೆಯಾಗಿದೆ, ಹಿಜಾಬ್ ಧರಿಸುವಿಕೆಯ ಕುರಿತು ಸದ್ಯ ಕೋರ್ಟಿಗೆ ಹೋದವರೂ ಸಹ ಮುಸ್ಲಿಂ ವಿದ್ಯಾರ್ಥಿಗಳೇ ಆಗಿದ್ದಾರೆ. ಹೀಗಾಗಿ ನ್ಯಾಯಾಲಯದ ತೀರ್ಪಿಗೆ ಕಾಯಬೇಕಾದವರೂ ಸಹ ಅವರೇ.
, ಕಾನೂನು ಬಾಹೀರವಾಗಿ ರಸ್ತೆಗೆ ಇಳಿಯುವುದನ್ನು ಮುಸ್ಲಿಂ ಸಮುದಾಯ ಕೈ ಬಿಡಬೇಕು. ಬಳೆ, ಕುಂಕುಮ, ಕಾಲುಂಗುರ, ಮಂಗಲಸೂತ್ರ ಇತ್ಯಾದಿಗಳು ಈ ದೇಶದ ಮೂಲಧಾರೆ. ಹಿಂದೂ ಸಂಸ್ಕೃತಿಯ ಪ್ರತೀಕವಾಗಿದೆ. . , ಈ ದೇಶದ ಬಹುಸಂಖ್ಯಾತ ಹಿಂದು ಸಮಾಜ ಸಹ ರಸ್ತೆಗೆ ಇಳಿದರೆ, ಅದರಿಂದಾಗುವ ಪರಿಣಾಮ ಬಹಳ ಭೀಕರ, ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತದೆ.ಎಂದರು.
ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಗೋಪಾಲಕೃಷ್ಣ ಗಾಂವಕರ ಮಾತನಾಡಿ ಹಿಂದುಧರ್ಮದ ಬಗ್ಗೆ ಹಿಂದು ದೇಶದ ಬಗ್ಗೆ ಅಥವಾ ಇನ್ಯಾರದೋ ರಾಜಕೀಯ ತೆವಲಿಗಾಗಿ ಈ ದೇಶದ ಧರ್ಮ, ಪದ್ಧತಿ, ಸಂಪ್ರದಾಯಗಳನ್ನು ಅವಹೇಳನ ಮಾಡುವ ಅಥವಾ ದೇಶದ ಭದ್ರತೆಗೆ ಅಪಾಯ ತರುವ ರೀತಿಯಲ್ಲಿ ಮುಸ್ಲಿಂರ ವರ್ತನೆ ಮುಂದುವರೆದರೆ, ಅದಕ್ಕೆ ತಕ್ಕ ಉತ್ತರ ನೀಡಲು ನಾವು ಸಿದ್ಧರಿದ್ದೇವೆ.ಮೊದಲು ನಾವು ಹಿಂದೂನಂತರ ಪಕ್ಷದ ಪ್ರತಿನಿಧಿ ಹಿಂದೂಗಳ ಭಾವನೆಗಳಿಗೆ ,ಧಕ್ಕೆಯಾದರೆ ಅದನ್ನು ತೀಕ್ಷಣವಾಗಿ ಖಂಡಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಸೋಮೇಶ್ವರ ನಾಯ್ಕ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ನಾರಾಯಣ ನಾಯಕ, ದುರ್ಗಾ ಮಂಡಲದ ಅಧ್ಯಕ್ಷೆ ನಮಿತಾ ಬಿಡಿಕರ್, ಶ್ಯಾಮಿಲಿ ಪಾಟಣಕರ, ಹಿಂದೂ ಸಮುದಾಯದ ಪ್ರಮುಖರಾದ ಅನಂತ್ ಗಾಂವ್ಕರ್, ಸಂತೋಷ ಗುಡಿಗಾರ, ಬಾಬು ಬಾಂದೇಕರ್, ಪ್ರಸಾದ ಹೆಗಡೆ, ಪ್ರದೀಪ್ ಯಲ್ಲಾಪುರಕರ್, ಶ್ರೀರಾಮ ಸೇನೆ ಕಿರವತ್ತಿ ಪ್ರಮುಖ ಪ್ರಭು ಚಿಚಕಂಡಿ ಇದ್ದರು.
Leave a Comment