
ಯಲ್ಲಾಪುರ: ಗೃಹಿಣಿಯರು ಕುಟುಂಬವನ್ನು ನಿರ್ವಹಿಸುವದು ಒಂದು ಸಾಧನೆಯೇ .ಎಲ್ಲ ಮಹಿಳೆಯರು ಸಾಧಕರೇ ಅವರ ಪ್ರತೀಕವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಮಾಜಿಕವಾಗಿ ವಿಶೇಷ ಕಾರ್ಯಗಳಿಂದ ಗುರುತಿಸಿಕೊಂಡವರಿಗೆ ಸನ್ಮಾನ ಮಾಡುವ ಮೂಲಕ ಇಡೀ ಮಹಿಳಾಕುಲಕ್ಕೆ ಗೌರವ ಸಲ್ಲಿಸುವ ಮೂಲಕ ಮಹಿಳಾದಿನಾಚಾರಣೆಯನ್ನು ಔಚಿತ್ಯಪೂರ್ಣವಾಗಿಸುತ್ತದೆ. ಸದಾ ಸಹಕರಿಸುವ ಕುಟುಂಬಕ್ಕೆ,ಸೇವೆ ಮಾಡಲು ಅವಕಾಶ ನೀಡಿರುವ ಸಮಾಜಕ್ಕೆ ಈ ಸನ್ಮಾನ ಗೌರವ ಸಮರ್ಪಣೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹೀಮವತಿ ಭಟ್ ಹೇಳಿದರು ಅವರು ಪಟ್ಟಣದ ಅಡಿಕೆಭವನದಲ್ಲಿಯಲ್ಲಾಪುರ ತಾಲೂಕ ಬಿಜೆಪಿ ಮಹಿಳಾ ಮೋರ್ಚಾವತಿಯಿಂದ ಹಮ್ಮಿಕೊಂಡಿದ್ದ ಅಂತರಾಷ್ಟಿçÃಯ ಮಹಿಳಾ ದಿನಾಚಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ,ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಬಿಜೆಪಿ ರಾಜ್ಯಾ ಕರ್ಯಕಾರಿಣಿ ಸದಸ್ಯೆ ರೇಖಾ ಹೆಗಡೆ ಕಂಪ್ಲಿ ಬದುಕಿನ ಎಲ್ಲ ಸವಾಲುಗಳನ್ನು ಎದುರಿಸುವ ಗಟ್ಟಿಗಿತ್ತಿ ಹೆಣ್ಣು.ಎಷ್ಟೆ ನೊಂದುಬೆAದರೂ ಹೊರಪ್ರಪಂಚಕ್ಕೆ ಗೊತ್ತಾಗದ ಹಾಗೆ ಉತ್ಸಾಹದ ಬುಗ್ಗೆಯಂತೆ ಚಟುವಟಿಕೆಯಿಂದ ಕಾರ್ಯನಿರ್ವಹಿಸುವ ಶಕ್ತಿಯಿರುವದು ಮಹಿಳೆಯರಲ್ಲಿಯೆಂದರೆ ಅತಿಶಯೋಕ್ತಿಯಾಗಲಾರದು ಎಂದರು.
ತಾಲೂಕಾ ಆಸ್ಪತ್ರೆಯ ತಜ್ಞ ವೈದ್ಯೆ ಡಾ ಸೌಮ್ಯಾ ಭಟ್ಟ ಸನ್ಮಾನ ಸ್ವೀಕರಿಸಿ ಹಾಗೂ ಮೆನೋಪಾಸ್ ನಂತರ ಮಹಿಳೆಯರ ಮನೋಸ್ಥಿತಿ ಕುರಿತು ಉಪನ್ಯಾಸನೀಡಿ ಮಹಿಳಾದಿನಾಚಾರಣೆ ಎಂದರೆ ಪುರುಷ ದ್ವೇಷಿ ಎಂಬುದಲ್ಲ ಅವರು ನಮ್ಮ ಬೆಳಣಿಗೆಗೆ ಪ್ರೇರಕರಾಗಿದ್ದಾರೆ. ಮಹಿಳೆಯರು ಹಿಂದೆAದಿಗಿAತಲೂ ಇಂದು ಮೆನೋಪಾಸದಿಂದ ಖಿನ್ನತೆಯಿಂದ ಬಳಲುವದು ಜಾಸ್ತಿಯಾಗುತ್ತಿದೆ ಮಾನಸಿಕ ಒತ್ತಡದಿಂದ ಹೊರಬಂದು ಉತ್ತಮ ಹವ್ಯಾಸ ಸಂವಹನ ,ಯೋಗ ಪ್ರಾಣಯಾಮ ಮಾಡುವ ಮೂಲಕ ಆರೋಗ್ಯದ ಕುರಿತು ಕಾಳಜಿವಹಿಸಬೇಕು ಎಂದರು.
ಪತ್ರಕರ್ತೆ ಪ್ರಭಾವತಿ ಗೋವಿ ಸನ್ಮಾನ ಸ್ವೀಕರಿಸಿ ಮಾತನಾಡಿ .ಕೆಲವೊಮ್ಮೆ ಸನ್ಮಾನವೆಂಬುದು ಅನುಮಾನದಿಂದ ನೋಡುವಂತಾಗುತ್ತದೆ. ಆದರೆ ಮಹಿಳೆಯರಿಂದ ಮಹಿಳೆಯರು ಗೌರವಿಸಲ್ಪಟ್ಟಾಗ ಆಗುವ ಸಂತಸ ಅಷ್ಟಿಷ್ಟಲ್ಲ. ಹೆಣ್ಣು ಜಾಗೃತಳಾದರೆ ಸಮಾಜ ಜಾಗೃತವಾಗುತ್ತದೆ. ಕುಟುಂಬದ ಕಣ್ಣಾದ ಹೆಣ್ಣು ಹೆಚ್ಚಿನ ಶಿಕ್ಷಣ ಪಡೆದು, ಸ್ವಾವಲಂಭಿ ಆಗುವದರೊಂದಿಗೆ ಮಹಿಳೆಯರು ಮಹಿಳೆಯ ದನಿಯಾಗಬೇಕು. ಯಾವದಕ್ಕೂ ಪೂರ್ವಾಪರ ಯೋಚಿಸಿ ಧೃಡ ಹಜ್ಜೆಇಡಬೇಕು. ನಮಗಿತ್ತ ಸನ್ಮಾನದಿಂದ ಇನ್ನು ಹೆಚ್ಚಿನ ಶ್ರದ್ಧೆಯಿಂದ ಕಾರ್ಯ ನಿರ್ವಹಿ¸ಲುಪ್ರೇರಕಶಕ್ತಿಯಾಗಿದೆಂದರು.À
Àಪಟ್ಟಣ ಪಂಚಾಯತ ಉಪಾಧ್ಯಕ್ಷೆ ಶ್ಯಾಮಿಲಿ ಪಾಠಣಕರ ಮಾತನಾಡಿ .ಶಿವಾಜಿ ಮಹಾರಾಜ ಅವರಿಗೆ ಪ್ರೇರಣೆಯಾಗಿ ನಿಂತವರು ಅವರ ತಾಯಿ ಜೀಜಾಬಾಯಿ ಹೀಗೆ ಂiÀiಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ.ಮಹಿಳಾಶಕ್ತಿ ಅಗಾಧವಾದ್ದು ನಮ್ಮ ನಡುವೆ ಇರುವ ಇಂತಹ ಸಾಧಕರನ್ನು ಗುರುತಿಸಿದರೆ ಮತ್ತೊಬ್ಬರಿಗೆ ಮೇಲ್ಪಂಕ್ತಿ ಹಾಕಿದಂತಾಗಿ ಪ್ರೇರಣೆ ಸಿಗುತ್ತದೆ ಎಂದರು. ತಾಲೂಕಾ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಗಾವಂಕರ ಮಾತನಾಡಿ ಮಹಿಳೆಯರಿಗೆ ಭಾರತೀಯ ಪರಂಪರೆಯಲ್ಲಿ ಗೌರವ ಸ್ಥಾನವಿದೆ. ನಮ್ಮ ಪಕ್ಷದ ಸರಕಾg ಮಹಿಳೆಯರಿಗೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದು ಅವರನ್ನು ಸಶಕ್ತಗೊಳಿಸುವ ಕಾರ್ಯ ಮಾಡುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಪತ್ರಕರ್ತೆ ಪ್ರಭಾವತಿ ಗೋವಿ, ತಾಲೂಕಾ ಆಸ್ಪತ್ರೆಯ ವೈದ್ಯೆ ಡಾ.ಸೌಮ್ಯಾ ಕೆ.ವಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹೀಮವತಿ ಭಟ್ಟ ಅವರನ್ನು ಸನ್ಮಾನಿಸಿ ಗೌರವಿಸಿದರು.

ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯದರ್ಶಿ ಚಂದ್ರಕಲಾ ಭಟ್ಟ ಪ್ರಾಸ್ತವಿಕ ಮಾತನಾಡಿದರು.ಜಿಲ್ಲಾ ಮಹಿಳಾಮೊರ್ಚಾ ಉಪಾಧ್ಯಕ್ಷೆ ಕಲ್ಪನಾ ನಾಯ್ಕ ಇದ್ದರು. ತಾಲೂಕಾಧ್ಯಕ್ಷೆ ಶೃತಿ ಹೆಗಡೆ ವಂದೇ ಮಾತರಂ ಹೇಳಿ ನಂತರ ಸ್ವಾಗತಿಸಿದರು. ಕಾರ್ಯದರ್ಶಿ ರೂಪಾ ಬರ್ಮನೆ ನಿರ್ವಹಿಸಿದರು.ಉಪಾಧ್ಯಕ್ಷೆ ಸರಸ್ವತಿ ಪಟಗಾರ ವಂದಿಸಿದರು
Leave a Comment