ಯಲ್ಲಾಪುರ : ಪಟ್ಟಣದ ನ್ಯಾಯಲಯದಲ್ಲಿ ಮೆಗಾ ಲೋಕ ಅದಾಲತ್ ನಡೆದಿದ್ದು, ಒಟ್ಟೂ 464 ಪ್ರಕರಣಗಳು ಇತ್ಯರ್ಥವಾಗಿವೆ.
ಹಿರಿಯ ಸಿವಿಲ್ ನ್ಯಾಯಾಧೀಶರಾದ ನಾಗಮ್ಮ ಎಂ. ಇಚ್ಚಂಗಿ ಅವರ ಜೆ.ಎಮ್.ಎಫ್.ಸಿ. ನ್ಯಾಯಾಲಯದಲ್ಲಿ ದಾಖಲಾದ 117 ಪ್ರಕರಣಗಳ ಪೈಕಿ 17 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಸರ್ಕಾರಕ್ಕೆ ಒಟ್ಟೂ 12,15,746 ರೂ. ಗಳು ಭರಣವಾಯಿತು.
ಸಿವಿಲ್ ನ್ಯಾಯಾಧೀಶರಾದ ಓಂಕಾರಮೂರ್ತಿ ಎಚ್. ಅವರ ಜೆ.ಎಮ್.ಎಫ್.ಸಿ. ನ್ಯಾಯಾಲಯದಲ್ಲಿ ದಾಖಲಾದ 655 ಪ್ರಕರಣಗಳ ಪೈಕಿ 447 ಪ್ರಕರಣಗಳು ಇತ್ಯರ್ಥಗೊಂಡು, ಸರ್ಕಾರಕ್ಕೆ ಒಟ್ಟೂ 28,50,039 ರೂ. ಗಳು ಭರಣವಾಯಿತು.ಈ ಸಂಧರ್ಭ ದಲ್ಲಿ ಮಾತನಾಡಿ ಮೆಗಾ ಅದಾಲತ್ ದಿಂದ ಕಕ್ಷಿದಾರರ ಅಲೆದಾಟ ತಪ್ಪಿ ಹಣ ಹಾಗೂ ಸಮಯ ಉಳಿತಾಯ ವಾಗುತ್ತದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಸರಕಾರಿ ಸಹಾಯಕ ಅಭಿಯೋಜಕಿ ಝೀನತ್‌ಬಾನು ಶೇಖ್, ಪ್ರಶಾಂತ್ ಜೆ. ಚೌಹಾಣ್ ಸಂದಾನಕರಾಗಿ ಕಾರ್ಯನಿರ್ವಹಿಸಿದರು.
Leave a Comment