
ಯಲ್ಲಾಪುರ: ಯುಗಾದಿ ಉತ್ಸವ ಸಮಿತಿಯಿಂದ ನವವರ್ಷಾಚರಣೆಯಾದ ಯುಗಾದಿಯನ್ನು ಎರಡುದಿನಗಳ ಕಾಲ ವಿಜೃಂಭಣೆಯಿAದ ಆಚರಿಸಲು ನಿರ್ಧರಿಸಿದೆ. ಕಳೆದೆರಡು ವರ್ಷಗಳ ಅವಧಿಯಲ್ಲಿ ಕೊರೊನಾ ಕಂಟಕದಿAದಾಗಿ ಶೋಭಾಯಾತ್ರೆ ಸಾಧ್ಯವಾಗದೇ ಕೇವಲ ಪಂಚಾAಗ ಪಠಣವನ್ನು ಮಾತ್ರ ನಡೆಸಿ ಸಂಪ್ರದಾಯವನ್ನು ಪಾಲಿಸಲಾಗಿತ್ತು. ಎಂದು ಯುಗಾದಿ ಉತ್ಸವ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಗಾಂವಕರ್ ಹೇಳಿದರು. ಪಟ್ಟಣದ ವೆಂಕಟರಮಣ ಮಠದ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಉತ್ಸವದ ಕರಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿ ಉತ್ಸವದ ಜಾಗೃತಿಗಾಗಿ ಮಾ. ೩೦ರಂದು ಮಹಿಳೆಯರಿಗೆ ಹಾಗೂ ಪುರುಷರಿಗೆ ಬೃಹತ್ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದ್ದು ಸಂಜೆÀ ೪.೧೫ ಕ್ಕೆ ಪಟ್ಟಣದ ಶ್ರೀ ಕಾಳಮಾದೇವಿ ದೇವಸ್ಥಾನ ಬಳಿ ಚಾಲನೆ ನೀಡಲಾಗುವದು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಲಿದೆ. ಮಹಿಳೆಯರು ಶ್ವೇತ ವರ್ಣದ ಚೂಡಿದಾರ ಹಾಗೂ ಕೇಸರಿ ದುಪ್ಪಟ್ಟಾ ಧರಿಸಿ ಬೈಕ್ ರ‍್ಯಾಲಿಯ ಶೋಭೆಯನ್ನು ಹೆಚ್ಚಿಸಲಿದ್ದಾರೆ.
ನಂತರ ಏ.೨ ರಂದು ಮಧ್ಯಾಹ್ನ ೩.೧೫ ರಿಂದ ಕೋಟೆಕರಿಯಮ್ಮ ದೇವಸ್ಥಾನದಿಂದ ಭವ್ಯ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದು. ಅಂಬೇಡ್ಕರ ನಗರ, ಗಾಂಧಿ ಚೌಕ, ಕಾರವಾರ ರಸ್ತೆ ,ಬಸವೇಶ್ವರ ವೃತ್ತ, ತಿಲಕಚೌಕಗಳಲ್ಲಿ ಸಾಗಿ ಗ್ರಾಮದೇವಿ ದೇವಸ್ಥಾನದಲ್ಲಿ ಸಂಪನ್ನಗೊಳ್ಳಲಿದೆ.ಶೋಭಾಯಾತ್ರೆಯಲ್ಲಿ
ಝಾಂಜ್ ಪತಾಕ್, ಚಂಡೆ ವಾದ್ಯ ಹಾಗೂ ಸುಮಾರು ೨೫ ಸ್ಥಬ್ಧಚಿತ್ರಗಳು ಪ್ರದರ್ಶನಗೊಳ್ಳುವ ನಿರೀಕ್ಷೆಯಿದೆ. ಸಿದ್ದಿ, ಗೌಳಿ, ಮರಾಠಿ ಸಮುದಾಯದವರ ನೃತ್ಯ ಕಲಾತಂಡಗಳು ಭಾಗವಹಿಸಲಿವೆ.ಸಂಜೆ ೭-೩೦ಕ್ಕೆ ಸಭಾ ಕಾರ್ಯಕ್ರಮದಲ್ಲಿ ವೇ.ಮೂ. ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಪಂಚಾAಗ ಪಠಣ ನೆರವೇರಿಸಲಿದ್ದು, ಅತಿಥಿಗಳಾಗಿ ಗ್ರಾಮದೇವಿ ದೇವಸ್ಥಾನದ ಟ್ರಸ್ಟಿ ನಾಗೇಶ ಭಾಗ್ವತ, ಗೌಳಿ ಸಮಾಜದ ಪ್ರಮುಖ ಕೋಯಾ ಶೆಂಡಗೆ ಮಾದೇವಕೊಪ್ಪ, ವೈಶ್ಯವಾಣಿ ಸಮಾಜದ ಪ್ರಮುಖ ಅಶೋಕ ಕಿತ್ತೂರು ಆಗಮಿಸುವರು ಎಂದರು.
ಎ.೩ರಂದು ಸಂಜೆ ೫ಗಂಟೆಗೆ ಗ್ರಾಮದೇವಿ ದೇವಸ್ಥಾನದ ಸಭಾಭವನದಲ್ಲಿ ಧರ್ಮಜಾಗೃತಿ ಉಪನ್ಯಾಸ ಏರ್ಪಡಿಸಲಾಗಿದ್ದು, ಶ್ರೀರಾಮಸೇನಾ ಸಂಸ್ಥಾಪಕ ಪ್ರಮೋದ ಮುತಾಲಿಕ್ ವೀರ ಸಂದೇಶ ನೀಡುವರು. ಅತಿಥಿಗಳಾಗಿ ಗ್ರಾಮದೇವಿ ದೇವಸ್ಥಾನದ ಟ್ರಸ್ಟಿ ರಾಜೇಂದ್ರಪ್ರಸಾದ ಭಟ್ಟ, ಭಾರತೀಯ ಸೇನೆಯ ನಿವೃತ್ತ ಸುಬೇದಾರ್ ಮೇಜರ್ ತುಳಸಿದಾಸ ನಾಯ್ಕ, ಸ್ವರ್ಣವಲ್ಲೀ ಸಂಸ್ಥಾನದ ಸಿದ್ದಿ ಸೀಮಾ ಪರಿಷತ್ ಅಧ್ಯಕ್ಷ ನಾರಾಯಣ ಸಿದ್ದಿ ಪಾಲ್ಗೊಳ್ಳುವರು .ಸಭಾ ಕಾರ್ಯಕ್ರಮದ ನಂತರ ಪುತ್ತೂರು ನರಸಿಂಹ ನಾಯಕ ಮತ್ತು ಸಂಗಡಿಗರಿAದ ಭಕ್ತಿ ಸಂಗೀತ ಕಾರ್ಯಕ್ರಮವಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಉತ್ಸವ ಸಮಿತಿ ಸಂಚಾಲಕ ಜಗದೀಶ ಪೂಜಾರಿ, ಉಪಾಧ್ಯಕ್ಷೆನಮಿತಾ ಬೀಡಿಕರ್, ಖಜಾಂಚಿ ಪ್ರದೀಪ ಯಲ್ಲಾಪುರಕರ್ ಪದಾಧಿಕಾರಿಗಳಾದ ಆದಿತ್ಯ ಗುಡಿಗಾರ, ಸುಧೀರ ಆಚಾರ್ಯ, ಶ್ರೀನಿವಾಸ ಗಾಂವಕರ್ ಉಪಸ್ಥಿತರಿದ್ದರು.
Leave a Comment