ಉಡಪಿ : ಮಲ್ವೆ ಸೈಂಟ್ ಮೇರಿಸ್ ಐಲ್ಯಾಂಡ್ ನಲ್ಲಿ ಪ್ರವಾಸಕ್ಕೆಂದು ಆಗಮಿಸಿದ್ದ ಕೇರಳ ಮೂಲದ ಮೂವರು ವಿದ್ಯಾರ್ಥಿಗಳು ಸಮುದ್ರ ಪಾಲಾಗಿದ್ದು, ಇಬ್ಬರ ಮೃತದೇಹ ಪತ್ತೆಯಾಗಿದೆ.
ಇನ್ನೊಬ್ಬರ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಮೃತರನ್ನು ಕೇರಳದ ಕೊಟ್ಟಾಯಂನ ಮಂಗಳA ಇಂಜಿನಿಯರಿAಗ್ ಕಾಲೇಜಿನ ಅಲೆನ್ ರೇಜಿ (22), ಅಮಲ್ ಸೀ ಅನಿಲ್ (22) ಮತ್ತು ಆ್ಯಂಟನಿ ಶೆಣೈ(21) ಎಂದು ಗುರುತಿಸಲಾಗಿದೆ.
ಅವರು ಕೊಟ್ಟಾಯಂನಿAದ 42 ಮಂದಿ ವಿದ್ಯಾರ್ಥಿಗಳು ಮತ್ತು ಇಬ್ಬರು ಪ್ರಾಧ್ಯಾಪಕರ ಜೊತೆ ಪ್ರವಾಸಕ್ಕೆ ಬಂದಿದ್ದು, ಸೈಂಟ್ ಮೇರಿಸ್ ನ ಅಪಾಯಕಾರಿ ಸಮುದ್ರ ಭಾಗದಲ್ಲಿ ನೀರಿನಲ್ಲಿ ಆಟವಾಡಲು ಇಳಿದಾಗ ಆಕಸ್ಮಿಕವಾಗಿ ಮುಳಗಡೆಯಾಗಿದ್ದಾರೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment