ಯಲ್ಲಾಪುರ: ಜೀವನಾವಶ್ಯಕ ವಸ್ತುಗಳ ಬೆಲೆಏರಿಕೆ ಯಿಂದಾಗಿ ಬಡಜನರಿಗೆ ಬದುಕು ದುಸ್ತರವಾಗುತ್ತಿದೆ.ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವಲ್ಲಿಯೂ ಭ್ರಷ್ಟಾಚಾರ ನಡೆದಿದೆ. ಇದರಿಂದ ಇಲ್ಲಿ ಕಲುಷಿತ ( ಮಣ್ಣು ಮಿಶ್ರಿತ) ನೀರು ಬರುತ್ತಿದೆ. ಮೇಲಿನಿಂದ ತಳಹಂತದವರೆಗೂ ಒಂದೇ ಪಕ್ಷದ ಸರಕಾರವಿದ್ದರೂ ಮೂಲಭೂತ ಸೌಲಭ್ಯಗಳನ್ನು ನೀಡಲಾಗದಂತಹ ನಾಯಕನನ್ನು ಆರಿಸಿ ತಂದು ನೀವೆಲ್ಲರೂ ಪರಿತಪಿಸುವಂತಾಗುತ್ತಿದೆ.ಎAದು ಕೆಪಿಸಿಸಿ ಸದಸ್ಯ , ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಪ್ರಶಾಂತ ದೇಶಪಾಂಡೆ ಹೇಳಿದರು.
ಅವರು ಪಟ್ಟಣದ ಗೋಸಾವಿಗಲ್ಲಿಯಲ್ಲಿ ಸದಸ್ಯತ್ವ ಅಭಿಯಾನ ಹಾಗೂ ಗೋಸಾವಿ ಸಮುದಾಯದವರಿಗಾಗಿ ಹÀಮ್ಮಿಕೊಂಡಿದ್ದ ರಂಗೋಲಿ ,ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಆಸೆ ಆಮಿಷಗಳಿಗೆ ಬಲಿಯಾಗಿ ಅಮೂಲ್ಯವಾದ ಮತವನ್ನು ನೀಡಬೇಡಿ. ಕಾಂಗ್ರೆಸ್ ಜೈ ಎನ್ನದಿದ್ರು ಬಿಜೆಪಿಗೆ ಧಿಕ್ಕಾರ ಹೇಳಿ.ಬಿಜೆಪಿ ಭಾವನೆಗಳೊಡನೆ ರಾಜಕಾರಣ ಮಾಡುತ್ತಿದೆ ಇದರಿಂದ ಆರ್ಥಿಕಾಭಿವೃದ್ದಿ ಕುಂಠಿತವಾಗುತ್ತಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್ ಭಟ್, ಮಾತನಾಡಿ ಗೋಸಾವಿ ಸಮುದಾಯದವರು ಮುಗ್ಧರು ಕಡುಬಡವರು ಆಗಿದ್ದಾರೆ.ಯಾವ ನಾಯಕರಿಗೆ ಬಡವರ ಮೇಲೆ ಕಾಳಜಿಯಿಂದ ಅವರನ್ನು ಮುಖ್ಯವಾಹಿನಿಗೆ ತರಲು ಪ್ರೋತ್ಸಾಹ ನೀಡುವವರೇ ನಿಜವಾದ ನಾಯಕ ಅಂತಹವರ ಸಾಲಿನಲ್ಲಿ ಪ್ರಶಾಂತ ದೇಶಪಾಂಡೆಯವರಿದ್ದಾರೆ ಎಂದರೆ ಉತ್ಪೆçಕ್ಷೇಯಲ್ಲ. ಗೋಸಾವಿಗಲ್ಲಿಯವರ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳಿಗೆ ಕಾಳಜಿಯಿಲ್ಲ. ಶುದ್ಧವಾದ ಕುಡಿಯುವ ನೀರು ಒದಗಿಸಲು ಅವರಿಂದಾಗುತ್ತಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಗೋಸಾವಿಗಲ್ಲಿ ಗಣಪತಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಅಲ್ಲಿನ ಪ್ರಮುಖರು ಮನವಿ ನೀಡಿದರು. ಪ್ರಮುಖರಾದ ಟಿ.ಸಿ ಗಾಂವ್ಕರ, ಎನ್.ಕೆ ಭಟ್ಟ, ಉಲ್ಲಾಸ ಶಾನಭಾಗ,ದಿಲೀಪ ರೋಖಡೆ,ರಾಮದಾಸ ಮಹಿಳಾ ಸಮಿತಿ ಅಧ್ಯಕ್ಷೆ ಪೂಜಾ ನೇತ್ರೆಕರ,ಜಿಲ್ಲಾ ಕಾರ್ಯದರ್ಶಿ ಸರಸ್ವತಿ ಗುನಗಾ,ಮುಶರತ್,ರವಿಚಂದ್ರ ನಾಯ್ಕ, ಎನ .ಎನ ಹೆಬ್ಬಾರ,ಅನಿಲ ನಾಯ್ಕ ಮುಂತಾದವರು ಇದ್ದರು.
Leave a Comment