ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ಪರಿಸರ ಸಂರಕ್ಷಣಾ ದಿನ:ಪರಿಸರ ತಜ್ಞ ಕಳವೆ ಅವರಿಂದ ಉಪನ್ಯಾಸ
ಪರಿಸರದಿಂದ ಬಹಳಷ್ಟು ಪಾಠಗಳನ್ನು ಕಲಿಯಬಹುದು ಬರದಲ್ಲೂ ಬದುಕುವ ತಾಕತ್ತು ಕೆಲವು ಮುಳ್ಳಿನ ಗಿಡಗಳಿವೆ.ಮಕ್ಕಳು ಬೆಳೆಯುವಾಗ ಪರಿಸರ ನೋಡುತ್ತ ಕಲಿಯುತ್ತಾರೆ. ಆದರೆ ನಂತರ ನಿಸರ್ಗವನ್ನು ಮರೆಯುವ ಪ್ರಸಂಗಗಳು ಎದುರಾಗುತ್ತವೆ. ಎಂದು ಖ್ಯಾತ ಪರಿಸರ ತಜ್ಞ, ಬರಹಗಾರ ಶಿವಾನಂದ ಕಳವೆ ಹೇಳಿದರು.
ಅವರು ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಪರಿಸರ ಸಂರಕ್ಷಣಾ ದಿನದ ಪ್ರಯುಕ್ತ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿ
ಸಸಿ ನೆಟ್ಟು ನೀರಿನ ಕುರಿತು ಯೋಚಿಸುತ್ತೇವೆ.
ಗಿಡಮರಗಳು ತಮ್ಮ ತೋಗಟೆಗಳಲ್ಲಿ ನೀರನ್ನು ಬಹುಕಾಲದವರೆಗೆ ಸಂಗ್ರಹಿಸಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತವೆ. ಬೆಟ್ಟವನ್ನು ಏರಿದಾಗ ನಾನೆಷ್ಟು ಸಣ್ಣವ ಎಂಬ ಅರಿವಾಗುತ್ತದೆ. ಸಣ್ಣ ಸಂಗತಿಗಳನ್ನು ಪ್ರಶ್ನಿಸುತ್ತಾ ಹೋದಾಗ ಪರಿಸರದ ಕುರಿತು ಆಳವಾದ ಅರಿವು ಮೂಡಲು ಸಾಧ್ಯ. ಪ್ರವಾಹದ ವಿರುದ್ಧ ಈಜುವ ದಕ್ಕಿಂತ ಪ್ರವಾಹದ ಜೊತೆ ಹೊಂದಿಕೊಂಡರೆ ಬದುಕು ಸುಲಭವಾಗುತ್ತದೆ. ನಿಮ್ಮಲ್ಲಿ ಪರಿಸರ ಸಂರಕ್ಷಣೆಯ ಜವಾಬ್ದಾರಿ ನಿಜವಾದ ಅರ್ಥದಲ್ಲಿ ಮೂಡಿಬರಬೇಕು ಎಂದರಲ್ಲದೆ ಅನೇಕ ಸಾಕ್ಷ್ಯ ಚಿತ್ರಗಳ ಮೂಲಕ ಮಕ್ಕಳಿಗೆ ಪರಿಸರ ವೈವಿಧ್ಯತೆ ಕುರಿತು ತಿಳಿಸಿದರು.
ಸಂಸ್ಥೆಯ ಗೌರವ ಕಾರ್ಯದರ್ಶಿ
ನರಸಿಂಹ ಕೋಣೆಮನೆ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯಾಧ್ಯಾಪಕಿ
ಮುಕ್ತ ಶಂಕರ್ ಅಧ್ಯಕ್ಷತೆ ವಹಿಸಿದ್ದರು.
ಅನುಷಾ ಪ್ರಭಾತ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕಿ ಖೈರುನ್ ಶೈಖ್ ನಿರ್ವಹಿಸಿದರು. ಗೀತಾ ಹೆಚ್ ವಿ ಸ್ವಾಗತಿಸಿದರು. ಪ್ರೇಮಾ ಗಾಂವ್ಕರ್ ಪರಿಚಯಿಸಿದರು. ಮಹೇಶ ನಾಯ್ಕ ವಂದಿಸಿದರು ವಿವಿಧ ಅಂಗಸಂಸ್ಥೆಗಳ ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.
Leave a Comment