ಯಲ್ಲಾಪುರ : ಲಯನ್ನ ಕ್ಲಬ್ ವತಿಯಿಂದ ಶ್ರೀ ವೆಂಕಟರಮಣ ಮಠದ ವೇದ ವ್ಯಾಸ ಸಭಾ ಭವನದಲ್ಲಿ ಇಂದು ಶನಿವಾರ ಸಂಜೆ 4.00 ಗಂಟೆಗೆ ಪುಟಾಣಿ ಮಕ್ಕಳಿಗಾಗಿ ಬಾಲಗೋಪಾಲ ಹಾಗೂ ಕೃಷ್ಣ ರಾಧೆ ವೇಷ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಅತಿಥಿ ಗಳಾಗಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುನಂದಾ ದಾಸ್, ಉಪಾಧ್ಯಕ್ಷೆ ಶ್ಯಾಮಿಲಿ ಪಾಠಣಕರ, ತಾಲೂಕಾ ಆಸ್ಪತ್ರೆಯ ವೈದ್ಯೆ ಡಾ ಸೌಮ್ಯ ಕೆ. ವಿ ಪಾಲ್ಗೊಳ್ಳಲಿದ್ದಾರೆ.
ಬಾಲಗೋಪಾಲಸ್ಪರ್ಧೆಯು 6 ವರ್ಷದ ವರೆಗಿನ (ಎಲ್.ಕೆ.ಜಿ. ಮತ್ತು ಯು.ಕೆ.ಜಿ. ಮತ್ತು ಅಂಗನವಾಡಿ ) ಮಕ್ಕಳಿಗಾಗಿ
ರಾಧೆ ಕೃಷ್ಣ ಸ್ಪರ್ಧೆ ಯಲ್ಲಿ 6 ವರ್ಷ ಮೇಲ್ಪಟ್ಟ 8 ವರ್ಷ ದೊಳಗಿನ ಮಕ್ಕಳುಭಾಗವಹಿಸಲು ಅವಕಾಶವಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀಧರ ಶೆಟ್ಟಿ ತಿಳಿಸಿದ್ದಾರೆ.
Leave a Comment