ಯಲ್ಲಾಪುರ : ಪಟ್ಟಣದ ಶ್ರೀ ಗ್ರಾಮದೇವಿ ದೇವಸ್ಥಾನದಲ್ಲಿ ವಿಶ್ವ ಹಿಂದು ಪರಿಷತ್, ವಿ.ಹಿಂ.ಪ. ಮಾತೃ ಮಂಡಳಿ ವತಿಯಿಂದ ಇಂದು ( ಅ ೨೪ ) ರಂದು ಸಂಜೆ ೩ ಗಂಟೆಗೆ ೧೫ ನೇ ವರ್ಷದ ಶ್ರಾವಣ ಮಾಸದ ಸಾಮೂಹಿಕ ಅರಶಿಣ ಕುಂಕುಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಮುಖ್ಯ ವಕ್ತಾರರಾಗಿ ಉಮ್ಮಚಗಿಯ ಸಂಸ್ಕೃತ ವಿದ್ಯಾಲಯ ನಿವೃತ್ತ ಪ್ರಾಚಾರ್ಯೆ ವಿದುಷಿ ಶರಾವತಿಭಟ್ಟ ಇವರು ಆಗಮಿಸಲಿದ್ದಾರೆ. ಇದೆ ಸಂದರ್ಭದಲ್ಲಿ ನೂರಾರು ಹೆರಿಗೆ ಮಾಡಿಸಿರುವ ಸೂಲಗಿತ್ತಿ ಶಕುಂತಲಾ ಶಂಕರ ಬೇಟಗೇರಿ ಅವರನ್ನು ಸನ್ಮಾನಿಸಲಾಗುವದು. ಎಂದು ಮಾತೃಮಂಡಳಿ ಸಮಿತಿಯವರು ತಿಳಿಸಿದ್ದಾರೆ
Leave a Comment