ಗೋಕರ್ಣದಲ್ಲಿ ಮಾನಸಿಕ ರೋಗಿಗಳ ಹಾವಳಿ: ನಿಲ್ಲಿಸಿಟ್ಟ ವಾಹನಗಳಿಗೆ ಹಾನಿ
ಗೋಕರ್ಣ: ಕಡಲ ತೀರದ ಬಳಿ ಇರುವ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿಟ್ಟ 6 ಕಾರುಗಳಿಗೆ ಮಾನಸಿಕ ರೋಗಿಯೊಬ್ಬ ಕಾಲಿನಿಂದ ಒದ್ದು ಹಾನಿ ಮಾಡಿದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.
ಲಕ್ಷಾಂತರ ಹಣ್ಣಕೊಟ್ಟು ಖರೀದಿಮಾಡಿದ ಕಾರುಗಳಿಗೆ ಈ ತರಹದ ಹಾನಿಯಾದಾಗ ಕಾರಿನ ಮಾಲಿಕರು ಪರಿತಪಿಸುವದು ಸರ್ವೇ ಸಾಮಾನ್ಯ. ಇದ್ದಕಿದ್ದಂತೇ ಗೋಕರ್ಣದಲ್ಲಿ ಬಹಳಷ್ಟು ಮಾನಸಿಕ ರೋಗಿಗಳು ಕಂಡುಬಂದು ಇದಕ್ಕಿದ್ದಂತೆ ನಾಪತ್ತೆಯಾಗುತ್ತಾರೆ.
ಓರ್ವ ಮಾನಸಿಕ ಮಹಿಳೆಯಂತೂ ಸಿಕ್ಕ ವಾಹನದ ಮೇಲೆ ಗೋಡೆಗಳ ಮೇಲೆ ಸಂಖ್ಯೆಯನ್ನ ಗೀಚುತ್ತಿದ್ದರೆ, ಇನ್ನೊಬ್ಬಳು ರಸ್ತೆ ಮೇಲೆ ಕಲ್ಲನ್ನು ಇಟ್ಟು ಬೈಕ್ ಸವಾರರು ಸಿಡ್ಡಾಗಿ ಬೀಳುತ್ತಿರುವ ಘಟನೆಯೂ ನಡೆಯುತ್ತಿದೆ.
ಹಾಗೆ ತೆಲಂಗಾಣ ಮೂಲದವರ 22 ಲಕ್ಷದ ಕಾರಿಗೆ ಓರ್ವ ಮಾನಸಿಕರೋಗಿ ಕಲ್ಲನ್ನು ಎಸೆದು ಗ್ಲಾಸ್ ಒಡೆದ ಘಟನೆ ಕೂಡಾ ನಡೆದಿದೆ. ಇಂಥವರು ಯಾವ ಕಡೆಯಿಂದ ಬರುತ್ತಾರೆ ಎನ್ನುವುದನ್ನು ಪರಿಶೀಲಿಸಲಾಗಿ ಲಾರಿಯ ಮೂಲಕ ಕರೆತಂದು ಹೆದ್ದಾರಿಯ ಮೇಲೆ ಅಥವಾ ಜನರಿಲ್ಲದ ಸ್ಥಳದಲ್ಲಿ ಇಳಿಸಿ ಲಾರಿಯ ಚಾಲಕರು ಪರಾರಿಯಾಗುತ್ತಾರೆ ಎನ್ನುವುದು ತಿಳಿದುಬಂದಿದೆ.
ಇಂಥ ಅಹಿತಕರ ಘಟನೆ ಮರುಕಳಿಸುತ್ತಿದ್ದು ಮುಂದಾಗುವ ಅನಾಹುತವನ್ನು ತಪ್ಪಿಸುವ ನಿಟ್ಟಿನಲ್ಲಿ ಮಾನಸಿಕ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯವರು ಅಥವಾ ಸಂಬಂಧ ಪಟ್ಟ ಇಲಾಖೆಯವರು ಗಮನಹರಿಸ ಬೇಕಾಗಿದೆ.
Leave a Comment