• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಾರ್ಮಿಕ ಸಂಘದವರು ಪ್ರತಿಭಟಿಸಿ,ಜಿಲ್ಲಾಧಿಕಾರಿಗಳಿಗೆ ಮನವಿ

May 24, 2017 by Sachin Hegde Leave a Comment

ಕಾರವಾರ:

ನಗರ ಸ್ಥಳೀಯ ಸಂಸ್ಥೆಗಳಲ್ಲಿ ದುಡಿಯುವ ಕಾರ್ಮಿಕರಿಗೆ ಕನಿಷ್ಟ ವೇತನ, ಭವಿಷ್ಯ ನಿಧಿ ಸೌಲಭ್ಯ ಹಾಗೂ ಇನ್ನಿತರ ಸವಲತ್ತುಗಳನ್ನು ಕಲ್ಪಿಸುವಂತೆ ಆಗ್ರಹಿಸಿ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದವರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು. ಇವರ ದರಣಿಗೆ ಚಿಂತನ ಉತ್ತರ ಕನ್ನಡ, ಸಹಯಾನ ಹಾಗೂ ಹಲವು ಸಾಹಿತಿಗಳು ಬೆಂಬಲ ನೀಡಿದರು. ನಂತರ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನರ ಮೂಲಕ ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು.
ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಗಳಲ್ಲಿ ಹಲವು ವರ್ಷಗಳಿಂದ ನೂರಾರು ಕಾರ್ಮಿಕರು ಸ್ವಚ್ಚತಾ ಕೆಲಸದಲ್ಲಿ ನಿರತರಾಗಿದ್ದಾರೆ. ಕಾವಲುಗಾರರು, ನೀರು ಸರಬರಾಜು ಮಾಡುವವರು, ಕಂಪ್ಯುಟರ್ ಆಪರೇಟರಗಳು ಸೇರಿದಂತೆ ಹಲವು ಕೆಲಸಗಳಲ್ಲಿ ಕಾರ್ಮಿಕರನ್ನು ದುಡಿಸಿಕೊಳ್ಳಲಾಗುತ್ತಿದೆ. ಇವರೆಲ್ಲರೂ ತಳಮಟ್ಟದ ಶೋಷಿತ ಸಮುದಾಯದವರಾಗಿದ್ದು, ಅವರ ಬೇಡಿಕೆ ಪೂರ್ಣಗೊಂಡಿಲ್ಲ ಎಂದು ಪ್ರತಿಭಟನಾಕಾರರು ದೂರಿದರು. 2016ರ ಎಪ್ರಿಲ್‍ನಲ್ಲಿ ಜಿಲ್ಲಾಡಳಿತ ಸಭೆ ನಡೆಸಿ 11 ಅಂಶಗಳ ಮೇಲೆ ಚರ್ಚೆ ನಡೆಸಿದಾಗ ತಿಂಗಳ ಒಳಗೆ ಕಾರ್ಮಿಕರ ಎಲ್ಲಾ ಸಮಸ್ಯೆ ಬಗೆಹರಿಸುವ ಭರವಸೆ ನೀಡಿತ್ತು. ಆದರೆ, ಇಂದಿಗೂ ಭರವಸೆ ಈಡೇರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಲ್ಲಾ ವಿಭಾಘದ ಕಾರ್ಮಿಕರಿಗೆ 5ನೇ ತಾರಿಕಿನ ಒಳಗೆ ವೇತನ ನೀಡಬೇಕು. ಭವಿಷ್ಯ ನಿಧಿಯ ಬಗ್ಗೆ ಮಾಹಿತಿ ಸಿಗಬೇಕು. ಗುರುತಿನ ಪತ್ರ ಒದಗಿಸಬೇಕು ಎಂದು ಆಗ್ರಹಿಸಿದರು.
ಇದಲ್ಲದೇ ಕಾರ್ಮಿಕರಿಗೆ ಸಮವಸ್ತ್ರ, ಅಗತ್ಯ ಇರುವ ಬೂಟು, ರೇನ್‍ಕೋಟ್, ಮಾಸ್ಕ, ಹೆಲ್ಮೇಟ್ ಒದಗಿಸಬೇಕು. ಸರ್ಕಾರಿ ರಜಾ ದಿನಗಳಲ್ಲಿ ದುಡಿಸಿಕೊಳ್ಳಬಾರದು. ಗಳಿಕೆ, ಸಾಂದರ್ಭಿಕ ಹಾಗೂ ಪರಿಮಿತ ರಜೆ ಸೌಲಭ್ಯ ಒದಗಿಸಬೇಕು. ಸಮಾನ ಕೆಲಸಕ್ಕೆ ಸಮಾನ ಕೂಲಿ ಪದ್ದತಿ ಜಾರಿಗೆ ತರಬೇಕು ಎಂದು ಹೇಳಿದರು. ಸಂಬಳ ಚೀಟಿ, ಉಪಹಾರ ಸೌಲಭ್ಯ, ತುಟ್ಟಿಭತ್ಯೆಗಳನ್ನು ನೀಡಬೇಕು. ದಾಂಡೇಲಿ ಹಾಗೂ ಶಿರಸಿ ನಗರಸಭೆಯಲ್ಲಿ ಕಸ ವಿಲೆವಾರಿ ವಿಭಾಗ ಹಾಗೂ ಲೋಡರ್ಸಗಳಿಗೆ ನೀಡಲಾಗುತ್ತಿರುವ ವೇತನ ಹಾಗೂ ಕಾರ್ಮಿಕರ ಸಂಖ್ಯೆ ಬಗ್ಗೆ ತನಿಖೆ ನಡೆಯಬೇಕು. ವಾರದ ರಜೆ ಕಡ್ಡಾಯ ಮಾಡಬೇಕು ಎಂದು ಒತ್ತಾಯಿಸಿದರು. ದಾಂಡೇಲಿ ನಗರಸಭೆಯಲ್ಲಿ ಮಹಿಳಾ ಕಾರ್ಮಿಕರಿಗೆ 4ಸಾವಿರ ರಊ ವೇತನ ನೀಡಲಾಗುತ್ತಿದೆ. ಪ್ರಶ್ನಿಸಿದರೆ ಅವ್ಯಾಚ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಗೂ ಮುನ್ನ ನಡೆದ ಜಾಥಾಗೆ ಬನವಾಸಿ ಶಿವಾಜಿ ಚಾಲನೆ ನೀಡಿದರು. ಪ್ರತಿಭಟನೆ ಬೆಂಬಲಿಸಿ ಸಾಹಿತಿ ರೋಹಿದಾಸ ನಾಯ್ಕ, ಆರ್.ಜಿ. ಗುಂದಿ, ಮೋಹನ ಹಬ್ಬು, ಪ್ರಮುಖರಾದ ಜಿ.ಡಿ. ಮನೋಜ, ಅನಂತ ಹುಲಸ್ವಾರ ಮಾತನಾಡಿದರು. ಕಾರ್ಮಿಕ ಸಂಘದ ಸ್ಯಾಮಸನ್, ರಮೇಶ ಬಾಬು, ನಾಗಪ್ಪ ನಾಯ್ಕ, ಯಮೂನಾ

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News, National News Tagged With: ಅಗತ್ಯ, ಆಗ್ರಹಿಸಿ, ಆಪರೇಟರ, ಇರುವ, ಕನಿಷ್ಟ, ಕಂಪ್ಯುಟರ್, ಕಾರ್ಮಿಕ, ಜಿಲ್ಲಾಧಿಕಾರಿ, ನಿಧಿ, ನೀರು, ಪ್ರತಿಭಟಿಸಿ, ಬೂಟು, ಬೇಡಿಕೆ, ಭವಿಷ್ಯ, ಮನವಿ, ಮಾಸ್ಕ, ರೇನ್‍ಕೋಟ್, ವಿವಿಧ, ವೇತನ, ಸಂಘ, ಸಮವಸ್ತ್ರ, ಸರಬರಾಜು, ಸೌಲಭ್ಯ, ಹೆಲ್ಮೇಟ್

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar