ಹೊನ್ನಾವರ:ಟಾಟಾ ಎಸ್ ವಾಹನದಲ್ಲಿ ಅಕ್ರಮವಾಗಿ ದನಗಳನ್ನು ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿ ವಾಹನ ಸಮೇತ ಜಾನುವಾರುಗಳನ್ನು ವಶಪಡಿಸಿಕೊಂಡ ಘಟನೆ ತಾಲೂಕಿನ ಮಾಗೋಡದ ದಾಸ್ಗೋಡದಲ್ಲಿ ನಡೆದಿದೆ. ಮಾಗೋಡ ನಿವಾಸಿಗಳಾದ ನರಸಿಂಹ ವೆಂಕಪ್ಪ ನಾಯ್ಕ, ಸುಹೇಲ್ ಫಾರುಕ್ ಸಾಬ್ ಹಾಗೂ ವಾಹನ ಚಾಲಕ ಜಾಪರ್ ಸಾದೀಕ್ ಅಕ್ರಮವಾಗಿ ದನಗಳನ್ನು ಸಾಗಾಟ ಮಾಡಲು ಯತ್ನಿಸಿದ ಆರೋಪಿಗಳು. ಈ ಮೂವರು ಶನಿವಾರ ರಾತ್ರಿ ತಮ್ಮ ಟಾಟಾ ಎಸ್ ವಾಹನದಲ್ಲಿ ಹಿಂಸಾತ್ಮಕವಾಗಿ … [Read more...] about ಅಕ್ರಮ ದನ ಸಾಗಾಟ;ಮೂವರ ಬಂಧನ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ದಾಂಡೇಲಿಯಲ್ಲಿ ರೂ. 500 ಕೋಟಿ ವೆಚ್ಚದಲ್ಲಿ ಶ್ರೇಷ್ಠತಾ ಕೇಂದ್ರದ ಸ್ಥಾಪನೆ : ಆರ್‍ವಿಡಿ
ದಾಂಡೇಲಿ :ನಗರದ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ)ವನ್ನು ರಾಜ್ಯ ಸರ್ಕಾರದ ಹಾಗೂ ಬೆಂಗಳೂರಿನ ಸೀಮೆನ್ಸ್ ಇಂಡಸ್ಟೀ ಸಾಫ್ಟವೇರ್ ಉದ್ಯಮದ ಸಹಯೋಗದಲ್ಲಿ ಶ್ರೇಷ್ಠತಾ ಕೇಂದ್ರವಾಗಿ ಅಭಿವೃದ್ಧಿಗೊಳಿಸಲಾಗುವುದೆಂದು ಸಚಿವ ಆರ್.ವಿ ದೇಶಪಾಂಡೆ ನುಡಿದರು. ಅವರು ನಗರದಲ್ಲಿ ಸ್ಥಳೀಯ ಜಿಟಿಟಿಸಿ ಕೇಂದ್ರದಲ್ಲಿ ಸಂಸ್ಥೆಯ ಹಿರಿಯ ಅಧಿಕಾರಿಗಳು ಹಾಗೂ ಸೀಮನ್ಸ್‍ನ ಉನ್ನತ ಉತ್ಪಾದನಾ ಘಟಕದ ಮುಖ್ಯಸ್ಥರೊಂದಿಗೆ ಶ್ರೇಷ್ಠತೆ ಕೇಂದ್ರ ಸ್ಥಾಪನೆಯ ಪ್ರಗತಿ … [Read more...] about ದಾಂಡೇಲಿಯಲ್ಲಿ ರೂ. 500 ಕೋಟಿ ವೆಚ್ಚದಲ್ಲಿ ಶ್ರೇಷ್ಠತಾ ಕೇಂದ್ರದ ಸ್ಥಾಪನೆ : ಆರ್‍ವಿಡಿ
ಜೂನ್: 21 ಕ್ಕೆ ಯೋಗ ಕಾರ್ಯಕ್ರಮ
ದಾಂಡೇಲಿ;ಅಂತರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ತ ನಗರದ ಅರಿವು ಫೌಂಡೇಶನ್ ಆಶ್ರಯದಲ್ಲಿ ಜೂನ್: 21 ರಂದು ಬೆಳಿಗ್ಗೆ 6.30 ರಿಂದ 8 ಗಂಟೆಯವರೆಗೆ ಸ್ಥಳೀಯ ಸುಭಾಸ ನಗರದಲ್ಲಿರುವ ಒಳ ಕ್ರೀಡಾಂಗಣದಲ್ಲಿ ಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾಗದ ಕಾರ್ಖಾನೆಯ ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ ಎಸ್.ಎನ್.ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಅಂಕಣಕಾರ ಹಾಗೂ ಉಪನ್ಯಾಸಕ ಡಾ: ಆರ್.ಜಿ.ಹೆಗಡೆ, ಡಿವೈಎಸ್ಪಿ ಡಿ.ಎಸ್.ಪವಾರ್, ಹಿರಿಯ ವಕೀಲ … [Read more...] about ಜೂನ್: 21 ಕ್ಕೆ ಯೋಗ ಕಾರ್ಯಕ್ರಮ
ನೂತನ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಜಗದೀಪ್ ತೆಂಗೇರಿ ನೇಮಕ
ಹೊನ್ನಾವರ :ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ವ್ಯಾಪ್ತಿಯಲ್ಲಿ ಬರುವ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷ ಜಗದೀಪ್ ಎನ್.ತೆಂಗೆರಿಯವರನ್ನು ನೇಮಕ ಮಾಡಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಾ.ಜಿ.ಪರಮೇಶ್ವರವರು ಆದೇಶ ಹೊರಡಿಸಿದ್ದಾರೆ. ಜಗದೀಪ್ ಎನ್.ತೆಂಗೇರಿಯವರು ತಕ್ಷಣ ಹೊನ್ನಾವರ ಬ್ಲಾಕ್ ಕಾಂಗ್ರೆಸ್ಸಿನ ಅಧಿಕಾರ ವಹಿಸಿಕೊಂಡು ಜಿಲ್ಲಾ ಕಾಂಗ್ರೆಸ್ ಮಾರ್ಗದರ್ಶನದಲ್ಲಿ ಮತ್ತು ಸ್ಥಳೀಯ ನಾಯಕರ ಸಹಯೋಗದಲ್ಲಿ ಪಕ್ಷದ … [Read more...] about ನೂತನ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಜಗದೀಪ್ ತೆಂಗೇರಿ ನೇಮಕ
ನೆನೆಗುದಿಗೆ ಬಿದ್ದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ
ಕಾರವಾರ:ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಗೋಟೆಗಾಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ವಿಫಲತೆಯಿಂದಾಗಿ ಇಂದು ತಾಲೂಕಿನ ಅಸ್ನೋಟಿ ಗ್ರಾಪಂ, ಮುಡಗೇರಿ ಪಂಚಾಯತ್ ಭಾಗದ ಜನರು ಹನಿ ನೀರಿಗೂ ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದೆ. ಗೋಟೆಗಾಳಿ ಕುಡಿಯುವ ನೀರಿನ ಯೋಜನೆಯಿಂದ ತಾಲೂಕಿನ ಸಾಕಷ್ಟು ಭಾಗಗಳಿಗೆ ಕುಡಿಯುವ ನೀರು ಸರಬರಾಜಾಗುತ್ತಿದೆ. ಆದರೆ ಅಸ್ನೋಟಿ, ಮುಡಗೇರಿ ಪಂಚಾಯತ್ ವ್ಯಾಪ್ತಿಯ ವಿವಿಧ ಟ್ಯಾಂಕ್‍ಗಳಿಗೆ ಬರುವ ಕುಡಿಯುವ ನೀರು ಸೋರಿಕೆಯಿಂದಾಗಿ ಜನರು … [Read more...] about ನೆನೆಗುದಿಗೆ ಬಿದ್ದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ




