ಹೊನ್ನಾವರ: ತಾಲೂಕಿನ ಮೂರುಕಟ್ಟೆ ಬಳಿ ಮಂಗಳವಾರ ತಡ ರಾತ್ರಿ ಬೈಕ್ ಮತ್ತು ಆಲ್ಟೊ ಕಾರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ವಲ್ಕಿಯ ಅನ್ಸಾರ್ ಅಬ್ದುಲ್ ರೆಹಮಾನ್ ಬೊಂಗ್ಯಾ ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ.ಅನ್ಸಾರ್ ಮತ್ತು ಪಾಜಿಲ್ ಇಕ್ಬಾಲ್ ಎಂಬವರು ಬೈಕ್ ಅಲ್ಲಿ ಹೊನ್ನಾವರದಿಂದ ವಲ್ಕಿ ಕಡೆಗೆ ಹೋಗುತ್ತಿದ್ದಾಗ ಮೂರುಕಟ್ಟೆ ಬಳಿ ಎದುರಿನಿಂದ ಬರುತ್ತಿದ್ದ ಆಲ್ಟೊ ಕಾರ … [Read more...] about ಬೈಕ್ ಮತ್ತು ಆಲ್ಟೊ ಕಾರ್ ನಡುವೆ ಮುಖಾಮುಖಿ ಡಿಕ್ಕಿ ; ಬೈಕ್ ಸವಾರ ಸಾವು
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
23ರಂದು ಶಾಸಕರ ಕೆಡಿಪಿ ಸಭೆ
ಹೊನ್ನಾವರ: ಶಾಸಕ ಸುನೀಲ ನಾಯ್ಕ ಅಧ್ಯಕ್ಷತೆಯಲ್ಲಿ ಶಾಸಕ ದಿನಕರ ಶೆಟ್ಟಿ ಇವರ ಉಪಸ್ಥಿತಿಯಲ್ಲಿ ತಾಪಂ ಸಭಾಭವನದಲ್ಲಿ ತಾಲೂಕಾಮಟ್ಟದ ತೈಮಾಸಿಕ ಕೆಡಿಪಿ ಸಭೆ ಆ.23 ರಂದು ಬೆಳಗ್ಗೆ 11ಕ್ಕೆ ನಡೆಯಲಿದ್ದು ಎಲ್ಲಾ ಅನುಷ್ಠಾನಾಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಲು ತಾಲೂಕ ಕಾರ್ಯನಿರ್ವಾಹಣಾಧಿಕಾರಿ ಸುರೇಶ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. … [Read more...] about 23ರಂದು ಶಾಸಕರ ಕೆಡಿಪಿ ಸಭೆ
ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಭೂಮಿಕಾ ಕೃಷ್ಣ ನಾಯ್ಕ್
ಹೊನ್ನಾವರ; ತಾಲೂಕಿನ ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಸಂಘ ಹ ಇವರ ವತಿಯಿಂದ ಎಸ್.ಎಸ್.ಎಲ್.ಸಿಯಲ್ಲಿ ಪರೀಕ್ಷೆಯಲ್ಲಿ ರ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಭೂಮಿಕಾ ಕೃಷ್ಣ ನಾಯ್ಕ್ ಗೆರುಸೊಪ್ಪಾ ಹಾಗೂ ಶೇಕಡ ೯೯ .೩೬ ಸಾಧನೆ ಮಾಡಿ ರಾಜ್ಯಕ್ಕೆ ೪ ನೇ ಸ್ಥಾನ ಪಡೆದಗಳಿಸಿದ ದೀಕ್ಷಿತಾ ಮಾಹಾದೇವ್ ನಾಯ್ಕ್ ಗೆರುಸೊಪ್ಪಾ ಇವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಬಿ.ಎಸ್.ಎನ್.ಡಿ ಪಿ ತಾಲುಕ ಅಧ್ಯಕ್ಷ ಧನಂಜಯ್ ನಾಯ್ಕ್ ರಾಯಲಕೇರಿ, … [Read more...] about ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಭೂಮಿಕಾ ಕೃಷ್ಣ ನಾಯ್ಕ್
ಮೀನುಗಾರಿಕೆಗೆ ತೆರಳಿದ್ದಾಗ ಸಮುದ್ರ ಪಾಲಾಗಿದ್ದ ಕುಮಟಾದ ಯುವಕನ ಶವ ಪತ್ತೆ
ಹೊನ್ನಾವರ : ಬೋಟ್ ಅಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ವೇಳೆ ದಿನಾಂಕ14-08-2021 ರಂದು ಅರಬ್ಬೀ ಸಮುದ್ರದಲ್ಲಿರುವ ಬಸವರಾಜ ದುರ್ಗದ ಸಮೀಪ ಆಕಸ್ಮಿಕವಾಗಿ ಕಾಲು ಜಾರಿ ಬೋಟ್ ಒಳಗಿಂದ ನೀರಲ್ಲಿ ಬಿದ್ದು ನಾಪತ್ತೆಯಾಗಿದ್ದ ಉತ್ತರಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಕಲ್ಲಬ್ಬೆ ಕಂದವಳ್ಳಿಯ ಗೋಪಾಲ ಗೌಡ (32) ಎಂಬಾತನ ಶವ ಇಂದು ಸಮುದ್ರ ತೀರದಲ್ಲಿ ಪತ್ತೆಯಾಗಿದೆ.ಗೋಪಾಲ ಗೌಡ ಮೀನುಗಾರಿಕೆಗೆ ತೆರಳಿದ್ದಾಗ ಅಗಷ್ಟ್ 14 ರ ಸಂಜೆ 7-30 ರ ಸುಮಾರಿಗೆ ಕಾಲು ಜಾರಿ … [Read more...] about ಮೀನುಗಾರಿಕೆಗೆ ತೆರಳಿದ್ದಾಗ ಸಮುದ್ರ ಪಾಲಾಗಿದ್ದ ಕುಮಟಾದ ಯುವಕನ ಶವ ಪತ್ತೆ
೩೦ ಅಡಿ ಬಾವಿಯಲ್ಲಿ ಬಿದ್ದ ಹಸುವಿನ ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿಗಳು
ಹೊನ್ನಾವರ ತಾಲೂಕಿನ ಹಡಿನಬಾಳ ಗ್ರಾಮದ ಕಡಿಗೇರಿಯ ನಾರಾಯಣ ನಾಯ್ಕರವರ ಮನೆಯ ಸುಮಾರು 30 ಅಡಿ ಆಳ 08 ಅಡಿ ನೀರಿರುವ ಬಾವಿಯಲ್ಲಿ ಆಕಳೊಂದು ಆಯತಪ್ಪಿ ಬಿದ್ದಿತ್ತು. ರಕ್ಷಣೆಗಾಗಿ ಹೊನ್ನಾವರ ಅಗ್ನಿಶಾಮಕದಳಕ್ಕೆ ಕರೆ ಮಾಡಿದಾಗ ಕೂಡಲೇ ಸ್ಪಂದಿಸಿದ ಸಿಬ್ಬಂದಿಯವರು ರಕ್ಷಣಾ ಉಪಕರಣಗಳ ಸಹಾಯದಿಂದ ಬಾವಿಯಲ್ಲಿ ಬಿದ್ದಿರುವ ಹಸುವನ್ನು ಸುರಕ್ಷಿತವಾಗಿ ಮೇಲಕ್ಕೆ ಎತ್ತುವ ಮೂಲಕ ರಕ್ಷಣೆ ಮಾಡಿದ್ದಾರೆ. ಕಾರ್ಯಚರಣೆಯಲ್ಲಿ ಠಾಣಾಧಿಕಾರಿ ಜಯಾನಂದ ಎನ್. ಪಟಗಾರ … [Read more...] about ೩೦ ಅಡಿ ಬಾವಿಯಲ್ಲಿ ಬಿದ್ದ ಹಸುವಿನ ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿಗಳು



