ಭಟ್ಕಳ: ಮಳೆಗಾಲ ಮುಗಿಯುತ್ತಿದ್ದಂತೆಯೇ ಭಟ್ಕಳ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಗೆ ವೇಗವನ್ನು ನೀಡಲಾಗಿದೆ. ಅಧಿಕಾರಿಗಳು ಸ್ಥಳಕ್ಕೆ ತೆರಳಿ ಭೂಸ್ವಾಧೀನ ಪ್ರಕ್ರಿಯೆಯನ್ನು ಮುಗಿಸಲು ಮುಂದಾದರು. ತಾಲೂಕಿನ ರಂಗಿಕಟ್ಟೆಯಿಂದ ಸಂಶುದ್ದೀನ್ ಸರ್ಕಲ್‍ಗೆ ಮುಖಮಾಡಿ ಮುಂದಕ್ಕೆ 45ಮೀ. ಅಗಲದ ರಸ್ತೆಯನ್ನು ನಿರ್ಮಿಸಲು ಸಿದ್ಧತೆ ನಡೆದಿದ್ದು, ಫ್ಲೈಓವರ್ ಕಾರಣಕ್ಕಾಗಿ ಸಂಶುದ್ದೀನ್ ಸರ್ಕಲ್‍ನಲ್ಲಿಯೇ ಅಂಡರ್ ಪಾಸ್ ನಿರ್ಮಾಣವಾಗಲಿದೆ. ಭಟ್ಕಳ ಪಟ್ಟಣದಲ್ಲಿ … [Read more...] about ಭಟ್ಕಳ ಪಟ್ಟಣದಲ್ಲಿ ಹೆದ್ದಾರಿ ಅಗಲೀಕರಣ: ಅಧಿಕಾರಿಗಳ ಭೇಟಿ ಪರಿಶೀಲನೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಕಡುಬಿನ ಕನವರಿಕೆಯಲ್ಲಿ ಮೊಗೆ ಕಾಯಿಗಳಿಗೆ ಬಲು ಬೇಡಿಕೆ
ದೀಪಾವಳಿ ಅಂದ ತಕ್ಷಣ ಹಳ್ಳಿ ಅಡುಗೆಯ ರುಚಿ ಬಲ್ಲವರಿಗೆ ಥಟ್ಟನೆ ಮೊಗೆ ಕಾಯಿ ಅಕ್ಕಿ ಬಳಸಿ ಮಾಡುವ ಕಡುಬು ನೆನಪಾಗುತ್ತದೆ. ಒಂದರ್ಥದಲ್ಲಿ ಕಡುಬಿಲ್ಲದ ದೀಪಾವಳಿ ಹಬ್ಬದ ಆಚರಣೆಯನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲವೇನೋ ಅನ್ನುವಷ್ಟು ಗ್ರಾಮೀಣ ಭಾಗದಲ್ಲಿ ಕಡುಬು ಹಬ್ಬದ ಆಚರಣೆಯಲ್ಲಿ ಹಾಸುಹೊಕ್ಕಾಗಿದೆ. ಇದೇ ಕಾರಣಕ್ಕಾಗಿಯೇ ದೀಪಾವಳಿ ಸಮಯದಲ್ಲಿ ವ್ಯರ್ಥ ಚರ್ಚೆಗೆ ಕಾರಣವಾಗಿರುವ ಪಟಾಕಿ ನಿಷೇದದ ಬಗ್ಗೆ ಯಾವುದೇ ತಲೆ ಕೆಡಿಸಿಕೊಳ್ಳದ ಮಂದಿ ಹಬ್ಬದ ತಯಾರಿಗೆ ಬೇಕಾದ … [Read more...] about ಕಡುಬಿನ ಕನವರಿಕೆಯಲ್ಲಿ ಮೊಗೆ ಕಾಯಿಗಳಿಗೆ ಬಲು ಬೇಡಿಕೆ
ಊರಿಗೆ ದಾರಿದೀಪವಾದ ಉತ್ಸಾಹಿ ಯುವಕರು
ನಡೆಯುವ ಹಾದಿಯಲ್ಲಿ ಮುಳ್ಳು ಬಿದ್ದಿದ್ದರೆ ಬದಿಗೆ ಸರಿದು ಹೋಗುವುದು ಬುದ್ಧಿವಂತಿಕೆ ಅದೇ ಮುಳ್ಳನ್ನು ಎತ್ತಿ ಬದಿಗೆ ಹಾಕಿ ಹೋಗುವುದು ಹೃದಯವಂತಿಕೆ ಅನಿಸಿಕೊಳ್ಳುತ್ತದೆ ಎನ್ನುವ ಮಾತಿದೆ. ಹೊನ್ನಾವರ ತಾಲೂಕಿನ ಹಳದಿಪುರ ಗ್ರಾಮದ ಗೌಡಕುಳಿ ಭಾಗದಲ್ಲಿ ಸ್ಮಶಾನಕ್ಕೆ ಹೋಗುವ ರಸ್ತೆ ಹಾಗೂ ದಾರಿದೀಪ ಹಾಳಾಗಿದ್ದು ಅದನ್ನು ದುರಸ್ಥಿಮಾಡಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದರಾದರೂ ಸ್ಥಳಿಯಾಡಳಿತ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಜನಪ್ರತಿನಿಧಿಗಳನ್ನು ದೂರಿ … [Read more...] about ಊರಿಗೆ ದಾರಿದೀಪವಾದ ಉತ್ಸಾಹಿ ಯುವಕರು
ಅಬಕಾರಿ ಅಧಿಕಾರಿಗಳಿಂದ ದಾಳಿ ಕಳ್ಳಬಟ್ಟಿ ಸಾರಾಯಿ ಹಾಗೂ ಪರಿಕರಗಳು ಜಪ್ತಿ
ಹೊನ್ನಾವರ ತಾಲೂಕಿನ ಉಪ್ಪೂಣಿ ಗ್ರಾಮದ ಹೆಬ್ಬಾಳದ ರವಿ ಗೋವಿಂದ ನಾಯ್ಕ ಇವರಿಗೆ ಸೇರಿದ ತೋಟದಲ್ಲಿ ಕಳ್ಳಭಟ್ಟಿ ಸಾರಾಯಿ ಹಾಗೂ ತಯಾರಿಕೆ ಬಳಸಿದ ವಸ್ತುಗಳನ್ನು ಹೊನ್ನಾವರ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಜಪ್ತು ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.೧೦ಲೀಟರ್ ಕಳ್ಳಭಟ್ಟಿ ಸಾರಾಯಿಯನ್ನು ತೋಟದಲ್ಲಿ ಸಂಗ್ರಹಿಸಿಟ್ಟ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ನಡೆಸಿದ್ದು ದಾಳಿ ವೇಳೆಯಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಹೊನ್ನಾವರ ವಲಯದ ಅಬಕಾರಿ … [Read more...] about ಅಬಕಾರಿ ಅಧಿಕಾರಿಗಳಿಂದ ದಾಳಿ ಕಳ್ಳಬಟ್ಟಿ ಸಾರಾಯಿ ಹಾಗೂ ಪರಿಕರಗಳು ಜಪ್ತಿ
ಕೆಡಿಸಿಸಿ ಆಯ್ಕೆಯಾದ ತಾಲೂಕಿನ ನಿರ್ದೆಶಕರಿಗೆ ಹೊನ್ನಾವರ ಕೆಡಿಸಿ ಪ್ರಧಾನ ಕಛೇರಿಯಲ್ಲಿ ಸನ್ಮಾನ
ಹೊನ್ನಾವರ: ಜಿಲ್ಲೆಯ ಪ್ರತಿಷ್ಟಿತ ಚುನಾವಣೆ ಎಂದೆ ಬಿಂಬಿತವಾಗಿದ್ದ ಕೆಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮೂರನೇ ಬಾರಿ ಆಯ್ಕೆಯಾದ ಶಿವಾನಂದ ಹೆಗಡೆ ಕಡತೋಕಾ ಹಾಗೂ ಇದೆ ಮೊದಲ ಬಾರಿಗೆ ಆಯ್ಕೆಯಾದ ವಿಶ್ವನಾಥ ಭಟ್ ಇವರನ್ನು ಪ್ರಧಾನ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು.ಪ್ರಧಾನ ವ್ಯವಸ್ಥಾಪಕ ಎನ್.ಆರ್.ನಾಯ್ಕ ಮಾತನಾಡಿ ಇದೆ ಮೊದಲ ಬಾರಿಗೆ ತಾಲೂಕಿನಿಂದ ಇರ್ವರು ನಿರ್ದೆಶಕರು ಆಯ್ಕೆಯಾಗಿರುದರಿಂದ ಬ್ಯಾಂಕಿಗೆ ಅನೂಕೂಲವಾಗಲಿದೆ ಎಂದರು.ಸನ್ಮಾನ ಸ್ವೀಕರಿಸಿದ ಬಳಿಕ … [Read more...] about ಕೆಡಿಸಿಸಿ ಆಯ್ಕೆಯಾದ ತಾಲೂಕಿನ ನಿರ್ದೆಶಕರಿಗೆ ಹೊನ್ನಾವರ ಕೆಡಿಸಿ ಪ್ರಧಾನ ಕಛೇರಿಯಲ್ಲಿ ಸನ್ಮಾನ



