ಯಲ್ಲಾಪುರ: ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಬೈಕ್ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟು, ಇನ್ನೋರ್ವ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಪಟ್ಟಣದ ಮುಂಡಗೋಡ ರಸ್ತೆಯಲ್ಲಿ ನಡೆದಿದೆ.ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ತಾಲೂಕಿನ ಹುಣಶೆಟ್ಟಿಕೊಪ್ಪ ಸಮೀಪದ ಬಸಳೇಬೈಲಿನ ಶ್ರೀಕಾಂತ ಈಶ್ವರ ಚೋಗಲೆ (30)ಹಾಗೂ ಗಾಯಗೊಂಡ ವ್ಯಕ್ತಿಯನ್ನು ಕಿರಣ ನಾಗೇಶ ಬೋವಿವಡ್ಡರ್ ಗುರುತಿಸಲಾಗಿದೆ.ಪಟ್ಟಣದ ಮುಂಡಗೋಡ ರಸ್ತೆಯ ಬಿ.ಎಸ್.ಎನ್.ಎಲ್. … [Read more...] about ಎರಡು ಬೈಕ್‍ಗಳ ನಡುವೆ ಡಿಕ್ಕಿ:ಸವಾರ ಸಾವು
Yellapur
24.63 ಲಕ್ಷ ಲಾಭದಲ್ಲಿ ಶ್ರೀ ಮಾತಾ ಸಹಕಾರಿ ಸಂಸ್ಥೆ
ಯಲ್ಲಾಪುರ : ನಮ್ಮ ಸಹಕಾರಿಯ 17ನೇ ವರ್ಷ ಪೂರೈಸಿದ್ದು, ಹಾಗೂ ಸದರಿ ವರ್ಷ 24.63 ಲಕ್ಷ ನಿಕ್ಕಿ ಲಾಭ ಆಗಿದ್ದು,ಈ ವರ್ಷ ಒಟ್ಟೂ 62 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಲಾಗಿದೆ ಎಂದು ಶ್ರೀ ಮಾತಾ ವಿವಿದೋದ್ದೇಶಗಳ ಸೌಹಾರ್ದ ಸಹಕಾರಿ ಸಂಸ್ಥೆಯ ಅಧ್ಯಕ್ಷ ಜಿ.ಎನ್. ಹೆಗಡೆ ಹಿರೇಸರ ಹೇಳಿದರು.ಅವರು ಶನಿವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ ಮಾರ್ಚ-2021 ಕ್ಕೆ 88.60 ಲಕ್ಷ ಶೇರು ಬಂಡವಾಳವನ್ನು ಹೊಂದಿದ್ದು, ಹಾಗೂ 4886 ಸದಸ್ಯರನ್ನು ಹೊಂದಿದೆ ಇತರೇ ನಿಧಿಗಳು ಹಾಗೂ … [Read more...] about 24.63 ಲಕ್ಷ ಲಾಭದಲ್ಲಿ ಶ್ರೀ ಮಾತಾ ಸಹಕಾರಿ ಸಂಸ್ಥೆ
ಭೂಮಿ ಎಂದರೆ ಬರೀ ಮಣ್ಣಲ್ಲ; ದೇವಿ:ಸ್ವರ್ಣವಲ್ಲೀ ಶ್ರೀ
ಯಲ್ಲಾಪುರ: ಭೂಮಿ ಎಂದರೆ ಬರೀ ಮಣ್ಣಲ್ಲ; ದೇವಿ. ಪ್ರಾಚೀನ ಕಾಲದಿಂದಲೂ ಭೂದೇವಿಯನ್ನು ಪೂಜಿಸುವುದು ನಮ್ಮ ಪದ್ಧತಿ. ಅದು ಸದಾ ಮುಂದುವರಿಯಬೇಕು. ಇಂದಿನ ಸಮಾಜ ಅಧರ್ಮ ದತ್ತ ಸಾಗುತ್ತಿದೆ. ಸಹಜವಾಗಿ ಜೀವನ ಪದ್ಧತಿಯೇ ಆ ದಾರಿಯಲ್ಲಿ ಕ್ರಮಿಸುತ್ತಿದೆ ಅದುವೇ ಸನ್ನಿವೇಶಗಳು ವಿಪ್ಲವಕ್ಕೆ ಕಾರಣವಾಗುತ್ತಿದೆ ಎಂದು ಶ್ರೀ ಸೋಂದಾ ಸ್ವರ್ಣವಲ್ಲೀ ಮಠಾಧೀಶ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನುಡಿದರು.ಅವರು ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯತ … [Read more...] about ಭೂಮಿ ಎಂದರೆ ಬರೀ ಮಣ್ಣಲ್ಲ; ದೇವಿ:ಸ್ವರ್ಣವಲ್ಲೀ ಶ್ರೀ
ಉಮ್ಮಚಗಿಯಲ್ಲಿ ಸಸ್ಯೋದ್ಯಾನ ನಿರ್ಮಾಣ
ಯಲ್ಲಾಪುರ : ಸೊಪ್ಪಿನಬೆಟ್ಟದಲ್ಲಿ ಅರಣ್ಯ ಬೆಳೆಸಲು ಇಲಾಖೆಯಿಂದ ಸಹಾಯ ನೀಡಲಾಗುತ್ತದೆ ಅದನ್ನು ಬಳಸಿಕೊಳ್ಳಲು ರೈತರು ಮುಂದಾಗಬೇಕು ಎಂದು ಸಿ.ಸಿ. ಎಫ್ ಡಿ.ಯತೀಶಕುಮಾರ ಹೇಳಿದರು.ಅವರು ತಾಲೂಕಿನ ಉಮ್ಮಚಗಿಯಲ್ಲಿ ನಂದನವನ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ಸಸ್ಯೋದ್ಯಾನ ಉದ್ಘಾಟಿಸಿ ಮಾತನಾಡಿ ಸತೀಶ ಹೆಗಡೆ ಸಸ್ಯೋದ್ಯಾನ ನಿರ್ಮಿಸಿ ಮಾದರಿಯಾಗಿದ್ದಾರೆ, ಪರಿಸರ ಹಾಳಾಗುತ್ತಿದೆ ಎಂದು ಆರೋಪಿಸಿ ಕಾಲಹರಣ ಮಾಡುವುದರಿಂದ ಪ್ರಯೋಜನ ಇಲ್ಲ, ಬದಲಿಗೆ ಪರಿಸರ ಬೆಳೆಸಲು … [Read more...] about ಉಮ್ಮಚಗಿಯಲ್ಲಿ ಸಸ್ಯೋದ್ಯಾನ ನಿರ್ಮಾಣ
ಮಂಚಿಕೇರಿ ಪಶು ಆಸ್ಪತ್ರೆಗೆ ವೈದ್ಯರನ್ನು ನೇಮಕಕ್ಕೆ ಒತ್ತಾಯ
ಯಲ್ಲಾಪುರ: ಕಂಪ್ಲಿ ಮಂಚಿಕೇರಿಯಲ್ಲಿ ಪಶು ಆಸ್ಪತ್ರೆ ಇದ್ದೂ ಪ್ರಯೋಜನವಿಲ್ಲದಂತಾಗಿದೆ. ಪಶು ಆಸ್ಪತ್ರೆಗೆ ವೈದ್ಯರಿಲ್ಲದೆ ಅನಾರೋಗ್ಯಕ್ಕೊಳಗಾದ ಗೋವುಗಳಿಗೆ ಸರಿಯಾದ ಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಿದ್ದು, ಪಶುವೈದ್ಯರ ನೇಮಕಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.ಈ ಹಿಂದೆ ಇದ್ದ ಪಶು ವೈದ್ಯರು ಬೇರೆಡೆಗೆ ವರ್ಗ ಮಾಡಿಸಿ ಕೊಂಡು ಹೋದ ಮೇಲೆ ಎಲ್ಲದಕ್ಕೂ ತಾಲೂಕಾಸ್ಪತ್ರೆಗೆ ಹೋಗಬೇಕು. ಸಾಮಾಜಿಕ ಕಾರ್ಯಕರ್ತ ವಿನೋದ ನಾಯಕ ಮನೆಯಲ್ಲಿ ಜರ್ಸಿ ಆಕಳು ಮತ್ತು ಕರು … [Read more...] about ಮಂಚಿಕೇರಿ ಪಶು ಆಸ್ಪತ್ರೆಗೆ ವೈದ್ಯರನ್ನು ನೇಮಕಕ್ಕೆ ಒತ್ತಾಯ




