ಯಲ್ಲಾಪುರ :ಕಾರ್ಮಿಕ ಇಲಾಖೆಯಲ್ಲಿ ಕಡತ ಯಜ್ಞ ಮುಂದುವರೆದಿದ್ದು ಸಚಿವ ಶಿವರಾಂ ಹೆಬ್ಬಾರ್ ಕಚೇರಿ ಕಡತ ವಿಲೇವಾರಿ ಶೇ.90ರಷ್ಟಕ್ಕೇರಿದೆ.ಸಚಿವ ಶಿವರಾಂ ಹೆಬ್ಬಾರ್ ಅವರು ಹಳೇ ಪ್ರಕರಣಗಳು ಮತ್ತು ಕಡತಗಳ ವಿಲೇವಾರಿಗೆ ಮಹತ್ವ ನೀಡುವ ಕೆಲಸ ಮಾಡಿದ್ದು, ಕಡತಗಳ ತ್ವರಿತ ವಿಲೇವಾರಿಗೆ ಅನುವಾಗುವಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದರ ಪರಿಣಾಮ ಇಲಾಖೆಯಲ್ಲಿಯೂ ಕಡತ ವಿಲೇವಾರಿ ಕಾರ್ಯ ಚುರುಕುಗೊಂಡಿದೆ.ಇಲಾಖೆ ಕಡತ ವಿಲೇವಾರಿಗೆ ಒತ್ತು ನೀಡಿರುವ ಸಚಿವ ಹೆಬ್ಬಾರ್ ಅವರು, … [Read more...] about ಕಾರ್ಮಿಕ ಸಚಿವರ ಕಚೇರಿ ಕಡತ ವಿಲೇವಾರಿ ಪ್ರಮಾಣ ಶೇ.90
Other
ವಿಶ್ವದರ್ಶನ ಶಾಲೆಯಲ್ಲಿ ಸೈಬರ್ ಅಪರಾಧ ತಡೆ ಕಾರ್ಯಕ್ರಮ
ಯಲ್ಲಾಪುರ: ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ಮೋಸ ಮಾಡುವವರ ಸಂಖ್ಯೆ ಈಚೆಗೆ ಹೆಚ್ಚಾಗಿದ್ದು ಜನ ಜಾಗೃತರಾಗಿರಬೇಕು ಎಂದು ಯಲ್ಲಾಪುರ ಪೊಲೀಸ್ ಠಾಣೆಯ ಪಿ.ಎಸ್.ಐ ಪ್ರಿಯಾಂಕ ನ್ಯಾಮಗೌಡ ಹೇಳಿದರು. ಅವರು ವಿಶ್ವದರ್ಶನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಸೈಬರ್ ಅಪರಾಧ ತಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈಚೆಗೆ ಆನ್ ಲೈನ್ ಮೂಲಕ ವಂಚಿಸುವವರ ಸಂಖ್ಯೆ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣಗಳನ್ನು ದುರುಪಯೋಗ ಪಡಿಸಿಕೊಂಡು ಕೆಲವರು ವಂಚನೆ ಮಾಡುತ್ತಿದ್ದಾರೆ. … [Read more...] about ವಿಶ್ವದರ್ಶನ ಶಾಲೆಯಲ್ಲಿ ಸೈಬರ್ ಅಪರಾಧ ತಡೆ ಕಾರ್ಯಕ್ರಮ
ಪೊಲೀಸ್ ಠಾಣೆ ಗೆ ಸಿಸಿ ಟಿವಿ ಕ್ಯಾಮರಾ ಕೊಡುಗೆ
ಯಲ್ಲಾಪುರ : ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ತಾಲೂಕಿನ ಸವಣಗೇರಿಯ ಗಣೇಶ ಶ್ರೀಪಾದ್ ಹೆಗಡೆ (ಶ್ರೀ ಎಂಟರ್‌ಪ್ರೆöÊಸಸ್) ಅವರು ಯಲ್ಲಾಪುರ ಪೊಲೀಸ್ ಠಾಣೆಗೆ ಸುಮಾರು ೬೦,೦೦೦ ಸಾವಿರ ರೂಪಾಯಿ ಮೌಲ್ಯದ ಸಿಸಿ ಟಿವಿ ಕ್ಯಾಮರಾವನ್ನು ಕೊಡಗೆಯಾಗಿ ನೀಡಿದ್ದಾರೆ. ಅವರ ಈ ಕಾರ್ಯಕ್ಕೆ ಸಿ.ಪಿ.ಐ. ಸುರೇಶ ಯಳ್ಳೂರ್ ಯಲ್ಲಾಪುರ ಸಾರ್ವಜನಿಕರ ಮತ್ತು ಯಲ್ಲಾಪುರ ಠಾಣೆಯ ವತಿಯಿಂದ ಕೃತಜ್ಞತೆ ಗಳನ್ನು ಸಲ್ಲಿಸಿದ್ದಾರೆ. … [Read more...] about ಪೊಲೀಸ್ ಠಾಣೆ ಗೆ ಸಿಸಿ ಟಿವಿ ಕ್ಯಾಮರಾ ಕೊಡುಗೆ
ದಿ.ಗಜಾನನ ಭಟ್ ಅವರ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಸಭೆ
ಯಲ್ಲಾಪುರ : ಉದ್ಯಮಿ, ವೈಟಿಎಸ್‌ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಜಿ ಎಸ್ ಬಿ ಸಮಾಜದ ಪ್ರಮುಖರಾಗಿದ್ದ ದಿ.ಗಜಾನನ ಬಾಬುರಾವ ಭಟ್ ಅವರ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಸಭೆ ರವಿವಾರ ಪಟ್ಟಣದ ವೆಂಕಟ್ರಮಣ ಮಠದ ಸಭಾಭವನದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಹೊನ್ನಾವರ ವೆಂಕಟರಮಣ ದೇÀವಸ್ಥಾನದ ಅರ್ಚಕರಾದ ವೇದ ಮೂರ್ತಿ ಮುಕುಂದ ಭಟ್ಟ ಬ್ಯಾರಳ್ಳಿ, ಮಾತನಾಡಿ ದಿ.ಗಜಾನನ ಭಟ್ಟರವರು ಪ್ರತಿಯೊಬ್ಬರ ಮನಸ್ಸನ್ನು ಗೆದ್ದಿದ್ದಾರೆ. ಮುಂದಿನ ದಿನಗಳಲ್ಲಿ ಮೋಕ್ಷಕ್ಕೆ … [Read more...] about ದಿ.ಗಜಾನನ ಭಟ್ ಅವರ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಸಭೆ
ಬುಟಕಟ್ಟು ಸಂಸ್ಕೃತಿ ಮನುಕುಲದ ವಿಶೇಷತೆಗಳಲ್ಲೊಂದಾಗಿದೆ
ಯಲ್ಲಾಪುರ: ಕಲಾವಿದರನ್ನು ಪೋಷಿಸಬೇಕಾದರೆ ಕಲೆಯನ್ನು ಗೌರವಿಸಬೇಕು. ಜನರಲ್ಲಿ ಆಸಕ್ತಿ ಮತ್ತು ಸಂಸ್ಕೃತಿ ಕುರಿತಾದ ಜ್ಞಾನ ಅವಶ್ಯ. ಸನಾತನ ಪದ್ಧತಿ ಸಂಸ್ಕೃತಿ ಭಾರತೀಯ ಪರಂಪರೆ ನಮ್ಮ ದೇಶದ ಉಳಿವಿಗೆ ಕಾರಣವಾಗಿದೆ. ಬುಟಕಟ್ಟು ಸಂಸ್ಕೃತಿ ಮನುಕುಲದ ವಿಶೇಷತೆಗಳಲ್ಲೊಂದಾಗಿದೆ. ಇದು ಜೀವನ ಆಧಾರವಾಗಿದ್ದು ಮನುಷ್ಯ ನಾಗರೀಕತೆಯ ಒಂದು ವಿಶೇಷ ಅಂಗವಾಗಿ ಬದುಕುತ್ತಿದ್ದಾನೆ. ಇದು ಜ್ಯಾತ್ಯಾತೀತ ರಾಷ್ಟ್ರವಾಗಿರುವಾಗ ನಾವೆಲ್ಲ ಒಂದಾಗಿರಬೇಕು. ನಮ್ಮ ಸಂಸ್ಕೃತಿ ಉಳಿದರೆ ನಮ್ಮ ದೇಶ … [Read more...] about ಬುಟಕಟ್ಟು ಸಂಸ್ಕೃತಿ ಮನುಕುಲದ ವಿಶೇಷತೆಗಳಲ್ಲೊಂದಾಗಿದೆ



