ಹಳಿಯಾಳ :-ಇತ್ತೀಚೆಗೆ ಮಹಾರಾಷ್ಟ್ರದ ಪೂನಾದಲ್ಲಿ ನಡೆದ ಸಬ್ ಜೂನಿಯರ್ ಕುಸ್ತಿ ಸ್ಪರ್ದೆಯಲ್ಲಿ 65 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಪಡೆದ ಹಳಿಯಾಳ ತಾಲೂಕಿನ ದುಸಗಿ ಗ್ರಾಮದ ಯುವ ಕುಸ್ತಿ ಪಟು ಮಂಜುನಾಥ ನಾಗೇಂದ್ರ ಗೌಡಪ್ಪನ್ನವರ ಮುಂದೆ ನಡೆಯಲಿರುವ ಏಷಿಯನ್ ಮತ್ತು ವಿಶ್ವ ಕುಸ್ತಿ, ರಾಷ್ಟ್ರೀಯ ಕುಸ್ತಿ ಶಿಬಿರಕ್ಕೆ ಆಯ್ಕೆ ಆಗಿದ್ದಾನೆ. ಹಳಿಯಾಳ ತಾಲೂಕಿನ ದುಸಗಿ ಗ್ರಾಮದ ಮಂಜುನಾಥ ಗೌಡಪ್ಪನ್ನವರ ಪ್ರಸ್ತುತ ಬೆಳಗಾವಿಯ ಕ್ರೀಡಾಶಾಲೆಯಲ್ಲಿ ಹಿರಿಯ ಕುಸ್ತಿ … [Read more...] about ಹಳಿಯಾಳ ತಾಲೂಕಿನ ದುಸಗಿ ಗ್ರಾಮದ ಮಂಜುನಾಥ ರಾಷ್ಟ್ರೀಯ ಕುಸ್ತಿ ಶಿಬಿರಕ್ಕೆ ಆಯ್ಕೆ.
ಆಯ್ಕೆ
ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ
ಹಳಿಯಾಳ:- ಕಳೆದ 34 ವರ್ಷಗಳಿಂದ ಹಳಿಯಾಳ ಪತ್ರಿಕಾರಂಗದಲ್ಲಿ ವಿವಿಧ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಪತ್ರಕರ್ತ ಬಿ.ಆರ್.ವಿಭೂತೆ ಅವರಿಗೆ 2017ನೇ ಸಾಲಿನಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ಈ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 1983ರಲ್ಲಿ ಅಂದಿನ ಜನಪ್ರೀಯ “ ನವನಾಡು” ದಿನಪತ್ರಿಕೆಯ ಮೂಲಕ ಪತ್ರಿಕಾ ಜೀವನ ಪ್ರಾರಂಭಿಸಿದ ಅವರು ಹಲವಾರು ಕನ್ನಡ, ಮರಾಠಿ ಹಾಗೂ ಆಂಗ್ಲ ಪತ್ರಿಕೆಗಳಿಗೆ … [Read more...] about ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ನಾಡಿನ ಹಿರಿಯ ಸಾಹಿತಿ ಡಾ. ಆರ್.ಪಿ.ಹೆಗಡೆ ಸೂಳಗಾರ ಆಯ್ಕೆ
ಕಾರವಾರ: ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಪ್ರಸಕ್ತ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ನಾಡಿನ ಹಿರಿಯ ಸಾಹಿತಿ ಡಾ. ಆರ್.ಪಿ.ಹೆಗಡೆ ಸೂಳಗಾರ ಆಯ್ಕೆ ಆಗಿದ್ದಾರೆ. ಜಿಲ್ಲಾ ರಾಜ್ಯೋತ್ಸವ ಯುವ ಕೃತಿ ಪುರಸ್ಕಾರಕ್ಕೆ ಹೊನ್ನಾವರದ ಪ್ರಶಾಂತ ಹೆಗಡೆ ಮೂಡಲಮನೆ, ಯಲ್ಲಾಪುರದ ನಾಗರಾಜ ಹುಡೇದ, ಶಿರಸಿಯ ಗಾಯತ್ರಿ ರಾಘವೇಂದ್ರ, ದಾಂಡೇಲಿಯ ನರೇಶ ನಾಯ್ಕ ಆಯ್ಕೆ ಆಗಿದ್ದಾರೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಆದ ಹಿರಿಯ ಸಾಹಿತಿ … [Read more...] about ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ನಾಡಿನ ಹಿರಿಯ ಸಾಹಿತಿ ಡಾ. ಆರ್.ಪಿ.ಹೆಗಡೆ ಸೂಳಗಾರ ಆಯ್ಕೆ
ಗುಣವಂತೆ ಶಾಲೆ “4” ಭಾರಿ ವಿಭಾಗಮಟ್ಟಕ್ಕೆ ಆಯ್ಕೆ
ಹೊನ್ನಾವರ : ಅಂಕೋಲಾದ ಶೆಟಗೇರಿಯಲ್ಲಿ ನಡೆದ ಪ್ರಾಥಮಿಕ ಶಾಲೆಗಳ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಸರಕಾರಿ ಮಾ.ಹಿ.ಪ್ರಾ. ಗುಣವಂತೆ ಶಾಲೆಯ ವಿದ್ಯಾರ್ಥಿಗಳು ಹೆಣ್ಣುಮಕ್ಕಳ ಕಬಡ್ಡಿ ಪಂದ್ಯಾಟದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ನಾಲ್ಕನೇ ಬಾರಿಗೆ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ತೇಜಸ್ವಿನಿ ಗೌಡ (ನಾಯಕಿ) ಸಂಜನಾ ಗೌಡ, ಮಹಾಲಕ್ಷ್ಮಿ ಗೌಡ, ಕವನಾಗೌಡ, ಕವಿತಾ ಗೌಡ,ನಮನಾ ಗೌಡ, ಚಂದನಾ ಪಟಗಾರ, ನಂದಿತಾ ಗೌಡ, ಚೈತ್ರಾ ಗೌಡ, ಅನುಷಾ ಗೌಡ, ಸಿಂಚನಾ ಗೌಡ, ಪ್ರಿಯಾಂಕಾ … [Read more...] about ಗುಣವಂತೆ ಶಾಲೆ “4” ಭಾರಿ ವಿಭಾಗಮಟ್ಟಕ್ಕೆ ಆಯ್ಕೆ
ಕ್ರೀಡಾಕೂಟದಲ್ಲಿ ಭಾಗವಹಿಸುವ ತಂಡಗಳ ಆಯ್ಕೆ ಪ್ರಕ್ರಿಯೆ ಅ. 20ರಂದು
ಕಾರವಾರ: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯಲ್ಲಿ ನಡೆಯುವ ಕರ್ನಾಟಕ ರಾಜ್ಯ ಅಥ್ಲೆಟಿಕ್ ಬಾಲಕ ಬಾಲಕಿಯರ ಕ್ರೀಡಾಕೂಟದಲ್ಲಿ ಭಾಗವಹಿಸುವ ತಂಡಗಳ ಆಯ್ಕೆ ಪ್ರಕ್ರಿಯೆ ಅ. 20ರಂದು ಬೆಳಗ್ಗೆ 9.30ಕ್ಕೆ ಕಾರವಾರದ ಮಾಲಾದೇವಿ ಮೈದಾನದಲ್ಲಿ ನಡೆಯಲಿದೆ. 14ರಿಂದ 20 ವಯಸ್ಸಿನ ಸ್ಪರ್ಧಿಗಳ ಆಯ್ಕೆ ನಡೆಸಲಾಗುತ್ತದೆ. ಆಸಕ್ತರು 9448014307ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ. … [Read more...] about ಕ್ರೀಡಾಕೂಟದಲ್ಲಿ ಭಾಗವಹಿಸುವ ತಂಡಗಳ ಆಯ್ಕೆ ಪ್ರಕ್ರಿಯೆ ಅ. 20ರಂದು