ಕಳೆದ ಮೂರು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಶುಕ್ರವಾರ ಕೊಂಚ ಬಿಡುವು ನೀಡಿದೆ. ಕರಾವಳಿ ಭಾಗದಲ್ಲಿ ಮೋಡ ಮುಸುಕಿದ ವಾತಾವರಣ ಕಂಡು ಬಂದಿದ್ದು, ಮೊದಲಿನಂತೆ ಮಳೆ ಸುರಿದಿಲ್ಲ. ಕುಮಟಾ ಹೊನ್ನಾವರ ಹಾಗೂ ಭಟ್ಕಳದ ಕೆಲ ಭಾಗದಲ್ಲಿ ಕೊಂಚ ಮಳೆಯಾಗಿದೆ. ಕಳೆದ ಎರಡು ದಿನಗಳಿಂದ ರಭಸ ಮಳೆ ಸುರಿದಿದ್ದ ಕಾರಣ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖಗೊಂಡಿದ್ದು, ಶುಕ್ರವಾರ ಅಲ್ಲಲ್ಲಿ ಬಿಸಿಲು ಕಾಣಿಸಿದ್ದರಿಂದ ಗೋಕರ್ಣ ಹಾಗೂ ಮುರ್ಡೇಶ್ವರ ಕಡಲ ತೀರಗಳಲ್ಲಿ … [Read more...] about ಧಾರಾಕಾರ ಸುರಿಯುತ್ತಿದ್ದ ಮಳೆ;ಕೊಂಚ ಬಿಡುವು
ಕರಾವಳಿ
ಭಾರೀ ಪ್ರಮಾಣದ ಮಳೆ ;ಅಪಾರ ಪ್ರಮಾಣದ ಹಾನಿ
ಕಾರವಾರ:ಕಳೆದ ಮೂರು ದಿನಗಳಿಂದ ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾರೀ ಪ್ರಮಾಣದ ಮಳೆ ಸುರಿಯುತ್ತಿದೆ. ಪರಿಣಾಮ ಹಲವು ಸಾವು ನೋವುಗಳು ಸಂಭವಿಸಿದೆ. ಮಂಗಳವಾರ ಬಿಣಗಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಆಕಾರದ ಮರ ಬಿದ್ದ ಪರಿಣಾಮ ಎರಡು ಗಂಟೆಗಳ ಕಾಲ ವಾಹನ ಸಂಚಾರ ಹದಗೆಟ್ಟಿತ್ತು. ಬುಧವಾರ ಸಂಜೆ ನಗರದಲ್ಲಿ ತೆರೆದ ಚರಂಡಿಯಲ್ಲಿ ಬಿದ್ದು ವ್ಯಕ್ತಿಯೋರ್ವ ಸಾವನಪ್ಪಿದ ಘಟನೆ ನಡೆದಿದೆ. ಭಾರೀ ಮಳೆ ಇದ್ದ ಕಾರಣ ಈ ಪ್ರಕರಣ ಮರುದಿನ ಬೆಳಕಿಗೆ ಬಂದಿದೆ. ಗುರುವಾರ ಕಾರವಾರದ … [Read more...] about ಭಾರೀ ಪ್ರಮಾಣದ ಮಳೆ ;ಅಪಾರ ಪ್ರಮಾಣದ ಹಾನಿ
ಪ್ರವಾಹ ವಿಕೋಪ ರಕ್ಷಣಾ ತರಬೇತಿ ಶಿಬಿರ
ಕಾರವಾರ:ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದ ಸಂದರ್ಭದಲ್ಲಿ ಅಗತ್ಯ ರಕ್ಷಣಾ ಕಾರ್ಯ ಕೈಗೊಳ್ಳಲು ಸಾಧ್ಯವಾಗುವಂತೆ ಜಿಲ್ಲೆಯ ಆಯ್ದ ಗ್ರಾಮ ಲೆಕ್ಕಿಗರಿಗೆ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ನಾಲ್ಕು ದಿನಗಳ ಪ್ರವಾಹ ವಿಕೋಪ ರಕ್ಷಣಾ ತರಬೇತಿ ಶಿಬಿರದಲ್ಲಿ 80ಮಂದಿಗೆ ತರಬೇತಿ ನೀಡಲಾಗಿದೆ. ಶುಕ್ರವಾರ ಈ ಪ್ರಾಯೋಗಿಕ ತರಬೇತಿ ಶಿಬಿರಕ್ಕೆ ಚಾಲನೆ ನೀಡಲಾಗಿದ್ದು, ಎರಡು ಬ್ಯಾಚ್‍ಗಳಲ್ಲಿ ಒಟ್ಟು 80ಮಂದಿಗೆ ತರಬೇತಿಯನ್ನು ನೀಡಲಾಗಿದೆ. ಈಜು, ಕಯಾಕ್ ಮತ್ತು … [Read more...] about ಪ್ರವಾಹ ವಿಕೋಪ ರಕ್ಷಣಾ ತರಬೇತಿ ಶಿಬಿರ
ಕೃಷಿ ಅಭಿಯಾನಕ್ಕೆ ಶಾಸಕಿ ಶಾರದಾ ಶೆಟ್ಟಿ ರಥಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ
ಹೊನ್ನಾವರ:ಹಳದೀಪುರ ಸಾಲಿಕೇರಿಯ ಶ್ರೀ ಗಣಪತಿ ದೇವಸ್ಥಾನದಲ್ಲಿ ನಡೆದ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಶಾರದಾ ಶೇಟ್ಟಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು `ಆಹಾರ ಭದ್ರತೆ ಕಾಪಾಡಲು ರೈತ ಬಾಂಧವರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಕೃಷಿ ಇಲಾಖೆ ಮತ್ತು ಕೃಷಿ ಸಂಬಂಧಿತ ಇಲಾಖೆಯವರು ಪ್ರತಿ ಗ್ರಾಮ ಪಂಚಾಯಿತಿಗೆ ತೆರಳಿ ಕೃಷಿ ಉತ್ಪಾದನೆ ಹೆಚ್ಚಿಸುವ ತಾಂತ್ರಿಕತೆಗಳನ್ನು ಮತ್ತು ಇಲಾಖಾ ಯೋಜನೆಗಳನ್ನು … [Read more...] about ಕೃಷಿ ಅಭಿಯಾನಕ್ಕೆ ಶಾಸಕಿ ಶಾರದಾ ಶೆಟ್ಟಿ ರಥಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ
ಲಂಗರು ಹಾಕಿದ ಮೀನುಗಾರಿಕಾ ಬೋಟ್‍ಗಳು
ಕಾರವಾರ:ಜೂನ್ 1ರಿಂದ ಕರಾವಳಿಯಲ್ಲಿ ಯಾಂತ್ರಿಕ ಮೀನುಗಾರಿಕೆ ನಿಷೇಧಿಸಲಾಗಿದ್ದು, ಮೇ ಅಂತ್ಯದಲ್ಲಿ ಮೀನುಗಾರಿಕಾ ಬೋಟ್‍ಗಳು ದಡದಲ್ಲಿ ಲಂಗರು ಹಾಕಿವೆ. ಸರಕಾರದ ಆದೇಶದಂತೆ ಕರಾವಳಿ ತೀರದುದ್ದಕ್ಕೂ ಮಳೆಗಾಲದ ಜೂನ್ 1 ರಿಂದ ಜುಲೈ 31ರವರೆಗೆ ಮೀನುಗಾರಿಕೆಗೆ ನಿಷೇಧ ಹೇರಿದೆ. ಜಿಲ್ಲೆ ಸೇರಿದಂತೆ ಹೊರ ರಾಜ್ಯಗಳಲ್ಲಿಯ ಮೀನುಗಾರರು ತಮ್ಮ ಬೋಟ್‍ಗಳನ್ನು ಲಂಗರು ಹಾಕತೊಡಗಿವೆ. ಇನ್ನು ಕೆಲವು ಮೀನುಗಾರರು ಅವಧಿ ಮೀರುವ ಮುನ್ನ ದೋಣಿಗಳನ್ನು ಸುರಕ್ಷಿತ ಪ್ರದೇಶಗಳಲ್ಲಿ … [Read more...] about ಲಂಗರು ಹಾಕಿದ ಮೀನುಗಾರಿಕಾ ಬೋಟ್‍ಗಳು