ಕಾರವಾರ:ಭಗತ್ ಸಿಂಗ್ ಕೋಶ್ಯಾರಿ ಸಮಿತಿ ಶಿಫಾರಸ್ಸಿನಂತೆ ಮಾಸಿಕ ಪಿಂಚಣಿ ಮತ್ತು ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡುವಂತೆ ಆಗ್ರಹಿಸಿ ವಾ.ಕ.ರ.ಸಾ.ಸಂ. ನಿವೃತ್ತ ನೌಕರರ ಸಂಘದವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿ, ನಂತರ ಅಪರ ಜಿಲ್ಲಾಧಿಕಾರಿ ಮುಖಾಂತರ ಪ್ರಧಾನಮಂತ್ರಿಯವರಿಗೆ ಮನವಿ ಸಲ್ಲಿಸಿದರು. ಭಗತ್ ಸಿಂಗ್ ಕೋಶ್ಯಾರಿ ಸಮಿತಿ ಸಂಸತ್ಗೆ ನೀಡಿದ ವರದಿಯನ್ನು ಜಾರಿಗೊಳಿಸಲು ಸರ್ಕಾರಕ್ಕೆ ಆರ್ಥಿಕ ಹೊರೆಯಾಗುತ್ತಿಲ್ಲ. 21 ಸಾವಿರ … [Read more...] about ವಾ.ಕ.ರ.ಸಾ.ಸಂ ನಿವೃತ್ತ ನೌಕರ ಪ್ರತಿಭಟನೆ
ಕಾರವಾರ
ಅಂಚೆ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ
ಕಾರವಾರ:ಬೈತಖೋಲ್ ಅಂಚೆ ಕಚೇರಿಯಲ್ಲಿ ಹಂಗಾಮಿ ಕೆಲಸ ನಿರ್ವಹಿಸುತ್ತಿದ್ದ ಕಡವಾಡದ ಲಕ್ಷ್ಮಣ ಗೋವಿಂದ್ ನಾಯ್ಕ ಎಂಬಾತ ಗ್ರಾಹಕರು ಉಳಿತಾಯ, ಆರ್ಡಿ, ಚಾಲ್ತಿ ಹೀಗೆ ವಿವಿಧ ಖಾತೆಗೆ ತುಂಬಲು ನೀಡಿದ್ದ ಹಣವನ್ನು ಖಾತೆಗೆ ತುಂಬದೆ ಮೋಸ ಮಾಡಿ ಪರಾರಿಯಾದ ಬಗ್ಗೆ ದೂರು ದಾಖಲಾಗಿತ್ತು. ಮೋಸ ಮಾಡಿ ಕಣ್ಮರೆಸಿಕೊಂಡಿರುವ ಆರೋಪಿ ಈವರೆಗೂ ಪತ್ತೆಯಾಗಿಲ್ಲ. ಇದರಿಂದ ಕಷ್ಟಪಟ್ಟು ಲಕ್ಷಾಂತರ ರೂ ಸಂಪಾದಿಸಿ ಅಂಚೆ ಕಚೇರಿಯಲ್ಲಿ ತುಂಬಲು ನೀಡಿದ್ದ ಜನರು ಹಣ ಕಳೆದುಕೊಳ್ಳುವ … [Read more...] about ಅಂಚೆ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ
ಮಾದಕ ವಸ್ತುಗಳ ಸೇವನೆ ವಿರೋಧಿ ದಿನಾಚರಣೆ
ಕಾರವಾರ:ಜಿಲ್ಲಾ ಕಾರಾಗೃಹದಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ಮಾದಕ ವಸ್ತು ಸೇವನೆಯಿಂದ ಆರೋಗ್ಯ ಹಾಳಾಗುವುದರೊಂದಿಗೆ ಸಮಾಜದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಹೀಗಾಗಿ ಮಾದಕ ವಸ್ತುಗಳಿಗೆ ದಾಸರಾಗದೇ ಸಮಾಜದ ಮುಖ್ಯ ವಾಹಿನಿಗೆ ಬಂದು ಗೌರವಯುತ ಬಾಳ್ವೆ ನಡೆಸುವಂತೆ ಹಿರಿಯ ಸಿವಿಲ್ ನ್ಯಾಯಾಧೀಶ ಟಿ. ಗೋವಿಂದಯ್ಯ ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿವಾಜಿ ಶಿಕ್ಷಣ … [Read more...] about ಮಾದಕ ವಸ್ತುಗಳ ಸೇವನೆ ವಿರೋಧಿ ದಿನಾಚರಣೆ
ಸಾಗವಾನಿ ಮರ ಕಡಿದು ಸಾಗಿಸುತ್ತಿದ್ದ ವೇಳೆ ದಾಳಿ;ಆರೋಪಿ ಬಂಧನ
ಕಾರವಾರ:ಸಾಗವಾನಿ ಮರ ಕಡಿದು ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕಟ್ಟಿಗೆ ಜತೆ ಆರೋಪಿಯೊಬ್ಬನನ್ನು ಬಂಧಿಸಿದ ಘಟನೆ ಕದ್ರಾದಲ್ಲಿ ನಡೆದಿದೆ. ಮಲ್ಲಾಪುರದ ಹಿಂದುವಾಡದ ದಿಲೀಪ್ ಮನೋಹರ್ ಬಾಂದೇಕರ್ ಬಂಧಿತ ಆರೋಪಿ. ಇನ್ನೊಬ್ಬ ದೀಪಕ್ ಸುಬ್ರಾಯ್ ಬಾಂದೇಕರ್ ಎಂಬಾತರು ತಪ್ಪಿಸಿಕೊಂಡಿದ್ದಾರೆ. 3 ಸಾಗವಾನಿ ಹಾಗೂ 2 ಕಿಂದಳ ಮರಗಳನ್ನು ಕಡಿದು ಸಾಗಿಸುತ್ತಿದ್ದಾಗ ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಕಟ್ಟಿಗೆಯನ್ನು ವಶಕ್ಕೆ … [Read more...] about ಸಾಗವಾನಿ ಮರ ಕಡಿದು ಸಾಗಿಸುತ್ತಿದ್ದ ವೇಳೆ ದಾಳಿ;ಆರೋಪಿ ಬಂಧನ
ವ್ಯಕ್ತಿಯೊಬ್ಬರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ
ಕಾರವಾರ;ವ್ಯಕ್ತಿಯೊಬ್ಬರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಭದ್ರಾ ಹೋಟೆಲ್ ಮುಂಭಾಗ ನಡೆದಿದೆ. ನಂದನಗದ್ದಾದ ರಾಹುಲ್ ನಾಯ್ಕ ಮೇಲೆ ಮೂವರು ಅಪರಿಚತರು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ತಲೆಯ ಮೇಲೆ ತೀವೃ ಗಾಯವಾಗಿದ್ದರಿಂದ ರಾಹುಲರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಗರಠಾಣಾ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. … [Read more...] about ವ್ಯಕ್ತಿಯೊಬ್ಬರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ