ಕಾರವಾರ:ಸಾವಿನ ನಂತರವೂ ತಮ್ಮ ಸೇವೆ ಸಲ್ಲಿಕೆಗಾಗಿ ನಿವೃತ್ತ ಅಧಿಕಾರಿಯೊಬ್ಬರು ಪತ್ನಿಯೊಂದಿಗೆ ದೇಹದಾನ ನೊಂದಣಿ ಮಾಡಿಸಿದ್ದಾರೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಒತ್ತು ನೀಡುವ ಸಲುವಾಗಿ ಮರಣಾ ನಂತರ ದೇಹದಾನ ನಡೆಸುವದಾಗಿ ಅವರ್ಸಾದ ಕಮಲಾಕರ ನಾಯಕ (75) ಹಾಗೂ ಸೌಭಾಗ್ಯ (56) ದಂಪತಿಗಳು ಹೇಳಿದ್ದು, ಜಿಲ್ಲಾ ವೈದ್ಯಕೀಯ ವಿಜ್ಞಾನ ಶಿಕ್ಷಣ ಸಂಸ್ಥೆ ತಮ್ಮ ದೇಹವನ್ನು ಒಪ್ಪಿಸುವದಾಗಿ ತಿಳಿಸಿದ್ದಾರೆ. ನಿವೃತ್ತ ಬಂದರು ಉಪ ಸಂರಕ್ಷಣಾಧಿಕಾರಿಯಾಗಿರುವ ಕಮಲಾಕರ ನಾಯಕ … [Read more...] about ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ,ದೇಹದಾನ
ಕಾರವಾರ
ಡಾಲ್ಪಿನ್‍ವೊಂದರ ಮೃತ ದೇಹ ಪತ್ತೆ
ಕಾರವಾರ:ರವೀಂದ್ರನಾಥ ಕಡಲ ಕಿನಾರೆಯಲ್ಲಿ ಸೋಮವಾರ ಸಂಜೆ ಡಾಲ್ಪಿನ್‍ವೊಂದರ ಮೃತ ದೇಹ ಪತ್ತೆಯಾಗಿದೆ. ಈ ಪ್ರಬೇಧವನ್ನು ಹಂಪ್ ಬ್ಯಾಕ್ ಡಾಲ್ಪಿನ್ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ವೈದ್ಯಾಧಿಕಾರಿಗಳು ಅದರ ಮರಣೋತ್ತರ ಪರೀಕ್ಷೆ ನಡೆಸಿದರು. ಸಮುದ್ರದ ಅಬ್ಬರದ ಅಲೆಗಳೊಂದಿಗೆ ತೇಲಿಬಂದ ಡಾಲ್ಪಿನ್‍ನ ಮೃತದೇಹ ಇಲ್ಲಿನ ಹಳೆ ಉದ್ಯಾನವನ ಸಮೀಪ ಬಿದ್ದಿದ್ದು, ಅದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ತೀರಕ್ಕೆ ಡಾಲ್ಪಿನ್ … [Read more...] about ಡಾಲ್ಪಿನ್‍ವೊಂದರ ಮೃತ ದೇಹ ಪತ್ತೆ
ಬೃಹತ್ ಉದ್ಯೋಗಮೇಳ
ಕಾರವಾರ:ಮೇ 28 ರಂದು ಧಾರವಾಡದಲ್ಲಿ ರಾಜ್ಯ ಮಟ್ಟದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿ ನೇಮಕಾತಿಗಾಗಿ ಬೃಹತ್ ಉದ್ಯೋಗಮೇಳ ಹಮ್ಮಿಕೊಳ್ಳಲಾಗಿದೆ ಎಂದು ಧಾರವಾಡದ ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಸಮಿತಿ ರಾಜ್ಯಾಧ್ಯಕ್ಷ ನಾಗರಾಜ ಎಚ್.ಎನ್ ಲಿಂಗಸೂಗೂರು ಹೇಳಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಕರ ಅರ್ಹತೆ ಇರುವ ಅಭ್ಯರ್ಥಿಗಳು ಸರಿಯಾಗಿ ಉದ್ಯೋಗವಿಲ್ಲದೇ ಪರದಾಡುತ್ತಿದ್ದಾರೆ. ಸರಕಾರಿ … [Read more...] about ಬೃಹತ್ ಉದ್ಯೋಗಮೇಳ
ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ ವಿಷಯದಲ್ಲಿ 3 ವರ್ಷದ ಡಿಪ್ಲೊಮಾ ಕೋರ್ಸ್‍ಗಳಿಗೆ ಅರ್ಜಿ ಆಹ್ವಾನ
ಕಾರವಾರ:2017-18 ನೇ ಸಾಲಿನ ಶೈಕ್ಷಣಿಕ ಅವಧಿಗೆ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ ವಿಷಯದಲ್ಲಿ 3 ವರ್ಷದ ಡಿಪ್ಲೊಮಾ ಕೋರ್ಸ್‍ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಇಂಗ್ಲೀಷ್‍ನ್ನು ಒಂದು ವಿಷಯವಾಗಿ ಅಭ್ಯಸಿಸಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಜೂನ್ 10ರ ಒಳಗಾಗಿ ಅರ್ಜಿ ಸಲ್ಲಿಸಬಹುದು. 1 ಜುಲೈ 2017 ಕ್ಕೆ ಅನ್ವಯಿಸುವಂತೆ ಸಾಮಾನ್ಯ ವರ್ಗದ ಅಭ್ಯರ್ಥಿಗಳು 15 ರಿಂದ 23 ರ ವಯೋಮಿತಿ ಹಾಗೂ ಪರಿಶಿಷ್ಟ ಜಾತಿ ಮತ್ತು … [Read more...] about ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ ವಿಷಯದಲ್ಲಿ 3 ವರ್ಷದ ಡಿಪ್ಲೊಮಾ ಕೋರ್ಸ್‍ಗಳಿಗೆ ಅರ್ಜಿ ಆಹ್ವಾನ
ಕರೂರು ಮೈದಾನದಲ್ಲಿ ಮರಳು ದಾಸ್ತಾನು
ಕಾರವಾರ:ಅಗತ್ಯಕ್ಕಿಂತ ಹೆಚ್ಚಿನ ಮರಳು ದಾಸ್ತಾನು ಮಾಡಿದಲ್ಲಿ ಅದನ್ನು ಮುಟ್ಟುಗೋಲು ಹಾಕಿಕೊಳ್ಳುವದಾಗಿ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಆದರೆ, ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲಿನ ಕರೂರು ಮೈದಾನದಲ್ಲಿಯೇ ಸರ್ಕಾರಿ ಕೆಲಸಕ್ಕೆ ಎಂದು ಲೋಡ್ ಗಟ್ಟಲೆ ಮರಳನ್ನು ಶೇಖರಣೆ ಮಾಡಲಾಗುತ್ತಿದೆ. ಮರಳಿನ ಕೊರತೆ, ಹೆಚ್ಚಿದ ದರದ ನಡುವೆ ಜಿಲ್ಲಾಡಳಿ ಸರಕಾರದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವ ದೃಷ್ಟಿಯಿಂದ ಜಿಲ್ಲಾಡಳಿತದ ಪಕ್ಕದ ಕರೂರ್ ಮೈದಾನದಲ್ಲಿ ಮರಳನ್ನು … [Read more...] about ಕರೂರು ಮೈದಾನದಲ್ಲಿ ಮರಳು ದಾಸ್ತಾನು



