ಕಾರವಾರ:ನಗರ ಸ್ಥಳೀಯ ಸಂಸ್ಥೆಗಳಲ್ಲಿ ದುಡಿಯುವ ಕಾರ್ಮಿಕರಿಗೆ ಕನಿಷ್ಟ ವೇತನ, ಭವಿಷ್ಯ ನಿಧಿ ಸೌಲಭ್ಯ ಹಾಗೂ ಇನ್ನಿತರ ಸವಲತ್ತುಗಳನ್ನು ಕಲ್ಪಿಸುವಂತೆ ಆಗ್ರಹಿಸಿ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದವರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು. ಇವರ ದರಣಿಗೆ ಚಿಂತನ ಉತ್ತರ ಕನ್ನಡ, ಸಹಯಾನ ಹಾಗೂ ಹಲವು ಸಾಹಿತಿಗಳು ಬೆಂಬಲ ನೀಡಿದರು. ನಂತರ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನರ ಮೂಲಕ … [Read more...] about ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಾರ್ಮಿಕ ಸಂಘದವರು ಪ್ರತಿಭಟಿಸಿ,ಜಿಲ್ಲಾಧಿಕಾರಿಗಳಿಗೆ ಮನವಿ
ನೀರು
ಶರಾಬಿ ಹೊಳೆಗೆ ಹರಿಯುತ್ತಿರುವ ಮಲಿನ ನೀರು
ಭಟ್ಕಳ:ಸರಕಾರ ನದಿ, ತೊರೆ, ಕೆರೆಗಳನ್ನು ಸ್ವಚ್ಚವಾಗಿಟ್ಟುಕೊಂಡು ಪರಿಸರವನ್ನು ಉಳಿಸುವಂತೆ ಸದಾ ಕಾಲ ಜಾಗೃತಗೊಳಿಸುತ್ತಿರುತ್ತದೆ. ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆರೆ ಹೂಳೆತ್ತುವುದು, ಸ್ವಚ್ಚತೆಯ ಕಾರ್ಯ ವ್ಯಾಪಕವಾಗಿ ಸರಕಾರದ ನೆರವಿನಿಂದ ಸಾರ್ವಜನಿಕರ ಸಹಕಾರದಿಂದ ನಡೆಯುತ್ತಿರುವುದು ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ. ಇದೇ ಉತ್ತರ ಕನ್ನಡದ ನದಿಯೊಂದು ಒಳಚರಂಡಿ ನೀರಿನಿಂದಾಗಿ ಕಲುಷಿತಗೊಂಡು ರೋಗ ಹರಡುವ ಭೀತಿ ಇದ್ದರೂ ಸರಕಾರವಾಗಲೀ, ಸಂಘ … [Read more...] about ಶರಾಬಿ ಹೊಳೆಗೆ ಹರಿಯುತ್ತಿರುವ ಮಲಿನ ನೀರು
ಹೆದ್ದಾರಿ ಅಗಲೀಕರಣ ಕಾಮಗಾರಿ;ಕೃತಕ ನೆರೆ ಉಂಟಾಗದಿರಲಿ
ಕಾರವಾರ:ಹೆದ್ದಾರಿ ಅಗಲೀಕರಣ ಕಾಮಗಾರಿಯಿಂದಾಗಿ ಮಳೆಯ ನೀರು ಸರಾಗವಾಗಿ ಹರಿದು ಹೋಗದೆ ಕೃತಕ ನೆರೆ ಇತ್ಯಾದಿ ತೊಂದರೆಗಳು ಉಂಟಾಗಬಹುದಾದ ಸ್ಥಳಗಳನ್ನು ಗುರುತಿಸಿ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್.ನಕುಲ್ ಐಆರ್ಬಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಐಆರ್ಬಿ ಸಂಸ್ಥೆ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಮಳೆಗಾಲ ಪೂರ್ವದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ … [Read more...] about ಹೆದ್ದಾರಿ ಅಗಲೀಕರಣ ಕಾಮಗಾರಿ;ಕೃತಕ ನೆರೆ ಉಂಟಾಗದಿರಲಿ
ಸಂಪನ್ನಗೊಂಡ ಶ್ರೀ ವೀರಾಂಜನೇಯ ದೇವಸ್ಥಾನದ ವಾರ್ಷಿಕೋತ್ಸವ
ದಾಂಡೇಲಿ :ನಗರದ ಪಟೇಲ್ ನಗರದ ನೀರು ಶುದ್ದೀಕರಣ ಘಟಕದ ಆವರಣದಲ್ಲಿರುವ ಶ್ರೀ.ವೀರಾಂಜನೇಯ ದೇವಸ್ಥಾನದ 8 ನೇ ವರ್ಷದ ವಾರ್ಷಿಕೋತ್ಸವವು ಗುರುವಾರ ವಿಜೃಂಭಣೆಯಿಂದ ಜರುಗಿತು. ವಿವಿಧ ಪೂಜಾ ಕಾರ್ಯಕ್ರಮಗಳು ನಡೆದ ಬಳಿಕ ಮಧ್ಯಾಹ್ನ ಮಹಾಪ್ರಸಾಧ ವಿತರಣೆ ನಡೆಯಿತು. ಕಾರ್ಯಕ್ರಮದಲ್ಲಿ ನಗರ ಸಭೆಯ ಅಧ್ಯಕ್ಷ ಎನ್.ಜಿ.ಸಾಳೊಂಕೆ, ಪ್ರತಿಪಕ್ಷದ ನಾಯಕ ರಿಯಾಜ ಶೇಖ, ಸದಸ್ಯರುಗಳು, ನಗರ ಸಭೆಯ ಅಧಿಕಾರಿಗಳು, ಸ್ಥಳೀಯ ನಾಗರೀಕರು ಭಾಗವಹಿಸಿದ್ದರು. … [Read more...] about ಸಂಪನ್ನಗೊಂಡ ಶ್ರೀ ವೀರಾಂಜನೇಯ ದೇವಸ್ಥಾನದ ವಾರ್ಷಿಕೋತ್ಸವ
ಶ್ರೀ ವೀರಾಂಜನೇಯ ದೇವಸ್ಥಾನದ ವಾರ್ಷಿಕೋತ್ಸವ
ದಾಂಡೇಲಿ :ನಗರದ ಪಟೇಲ್ ನಗರದ ನೀರು ಶುದ್ದೀಕರಣ ಘಟಕದ ಆವರಣದಲ್ಲಿರುವ ಶ್ರೀ.ವೀರಾಂಜನೇಯ ದೇವಸ್ಥಾನದ 8 ನೇ ವರ್ಷದ ವಾರ್ಷಿಕೋತ್ಸವವು ಇಂದು ಜರಗಲಿದೆ. ವಿವಿಧ ಪೂಜಾ ಕಾರ್ಯಕ್ರಮಗಳು ನಡೆದ ಬಳಿಕ ಮಧ್ಯಾಹ್ನ ಮಹಾಪ್ರಸಾಧ ವಿತರಣೆ ನಡೆಯಲಿದೆ ಎಂದು ಶ್ರೀ ವೀರಾಂಜನೇಯ ಸೇವಾ ಸಮಿತಿ, ನಗರ ಸಭೆ ದಾಂಡೇಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.ದಿನಾಂಕ: 18.05.2017 ರಂದು … [Read more...] about ಶ್ರೀ ವೀರಾಂಜನೇಯ ದೇವಸ್ಥಾನದ ವಾರ್ಷಿಕೋತ್ಸವ