ಕಾರವಾರ:ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದಾಗಿ ಉಂಟಾಗುತ್ತಿರುವ ಭೂಕುಸಿತ ಹಾಗೂ ಅನಾಹುತಗಳನ್ನು ತಪ್ಪಿಸಲು ವೈಜ್ಞಾನಿಕವಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ (ಎನ್ಎಚ್ಎಐ) ಹಾಗೂ ಐಆರ್ಬಿ ಸಂಸ್ಥೆಯ ಹಿರಿಯ ಅಧಿಕಾರಿಗಳಿಗೆ ತಾಕೀತು ಮಾಡಿದರು. ಕುಮಟಾದ ತಂಡ್ರಕುಳಿಯಲ್ಲಿ ಸಂಭವಿಸಿದ ಅನಾಹುತ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆಯಲಾಗಿದ್ದ … [Read more...] about ಎನ್ಎಚ್ಎಐ ಹಾಗೂ ಐಆರ್ಬಿ ಸಂಸ್ಥೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ
ರಾಷ್ಟ್ರೀಯ
ಜಿಲ್ಲಾಧಿಕಾರಿಗಳಿಂದ ಹೆದ್ದಾರಿ ಪರಿಶೀಲನೆ
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿರುವ ಕಾರವಾರದಿಂದ ಹೊನ್ನಾವರದವರೆಗಿನ ಹೆದ್ದಾರಿ ಇಕ್ಕೆಲಗಳಲ್ಲಿ ಗುಡ್ಡ ಕುಸಿತ ಸಂಭವಿಸಬಹುದಾದ ಸ್ಥಳಗಳನ್ನು ಜಿಲ್ಲಾಧಿಕಾರಿ ಎಸ್.ನಕುಲ್ ಅವರು ಮಂಗಳವಾರ ಅಧಿಕಾರಿಗಳ ತಂಡದೊಂದಿಗೆ ಪರಿಶೀಲನೆ ನಡೆಸಿದರು. ಗುಡ್ಡ ಕುಸಿಯುವ ಸಾಧ್ಯತೆ ಇರುವÀ ಕಡೆಗಳಲ್ಲಿ ಈಗಾಗಲೇ ಐಆರ್ಬಿ ಕಂಪೆನಿ ಕೈಗೊಂಡಿರುವ ತುರ್ತು ಕಾಮಗಾರಿಗಳನ್ನು ಸಹ ಜಿಲ್ಲಾಧಿಕಾರಿ ಪರಿಶೀಲಿಸಿದರು. ಕರಾವಳಿಯಲ್ಲಿ ಮಳೆ ಕಡಿಮೆಯಾಗಿದ್ದು, ಅಪಾಯ ಸಂಭವಿಸಬಹುದಾದ … [Read more...] about ಜಿಲ್ಲಾಧಿಕಾರಿಗಳಿಂದ ಹೆದ್ದಾರಿ ಪರಿಶೀಲನೆ
ಹೆದ್ದಾರಿ ಅಗಲೀಕರಣದಲ್ಲಿ ಬಲಿಯಾಗಲಿದ್ದ ಗಿಡ ಮರಗಳಿಗೆ ಮರು ಜೀವ ನೀಡಿದ ಅರಣ್ಯ ಇಲಾಖೆ
ಕಾರವಾರ:ಕರಾವಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಈಗಾಗಲೇ ಸಾವಿರಾರು ಮರಗಳು ನಾಶವಾಗಿದ್ದು, ಅಳಿದುಳಿದ ಸಸ್ಯ ಸಂಕುಲಗಳು ತಮ್ಮ ಜೀವ ಉಳಿಸಿಕೊಳ್ಳಲು ಕಡಲತೀರದಲ್ಲಿ ಆಶ್ರಯ ಪಡೆದಿವೆ! ರಸ್ತೆ ಅಗಲೀಕರಣಕ್ಕಾಗಿ ಮರ-ಗಿಡಗಳನ್ನು ಕಡಿಯುವ ಬದಲು ಅವನ್ನು ಬುಡಸಮೇತದ ಮಣ್ಣಿನೊಂದಿಗೆ ಸ್ಥಳಾಂತರ ಮಾಡುವ ಯೋಜನೆಗೆ ಅರಣ್ಯ ಇಲಾಖೆ ಮುನ್ನುಡಿ ಬರೆದಿದೆ. ಭಾನುವಾರ ಜಿಲ್ಲಾಕಾರಿ ಕಚೇರಿ ಎದುರು ಇರುವ ಬಾದಾಮಿ ಗಿಡಗಳನ್ನು ಜೆಸಿಬಿ ಮುಖಾಂತರ … [Read more...] about ಹೆದ್ದಾರಿ ಅಗಲೀಕರಣದಲ್ಲಿ ಬಲಿಯಾಗಲಿದ್ದ ಗಿಡ ಮರಗಳಿಗೆ ಮರು ಜೀವ ನೀಡಿದ ಅರಣ್ಯ ಇಲಾಖೆ
ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಡೆಗಟ್ಟುವಂತೆ ಆಗ್ರಹಿಸಿ ಕೇಂದ್ರ ಗೃಹ ಮಂತ್ರಿಗಳಿಗೆ ಸಹಾಯಕ ಆಯುಕ್ತರ ಮೂಲಕ ಮನವಿ
ಭಟ್ಕಳ:ರಾಷ್ಟ್ರೀಯ ಹಿಂದೂ ಆಂದೋಲನದ ವತಿಯಿಂದ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಡೆಗಟ್ಟುವಂತೆ ಆಗ್ರಹಿಸಿ ಕೇಂದ್ರ ಗೃಹ ಮಂತ್ರಿಗಳಿಗೆ ಸಹಾಯಕ ಆಯುಕ್ತರ ಮೂಲಕ ಮನವಿಯನ್ನು ಸಲ್ಲಿಸಲಾಯಿತು. ಮನವಿಯಲ್ಲಿ ಕಾಶ್ಮೀರದಲ್ಲಿ ದೇಶ ವಿರೋಧಿ ಕೃತ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಗಡಿ ಕಾಯುವ ಸೈನಿಕರನ್ನು ಸೆರೆ ಹಿಡಿದು ಹೊಡೆಯುವುದು, ಜೆಹಾದಿ ಉಗ್ರರೊಂದಿಗೆ ಹೋರಾಡುವ ಸೈನಿಕರ ಮೇಲೆ ಕಲ್ಲು ಎಸೆಯುವುದು, ಪಾಕಿಸ್ತಾನ ಮತ್ತು ಇಸ್ಲಾಮಿಕ್ ಸ್ಟೇಟ್ … [Read more...] about ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಡೆಗಟ್ಟುವಂತೆ ಆಗ್ರಹಿಸಿ ಕೇಂದ್ರ ಗೃಹ ಮಂತ್ರಿಗಳಿಗೆ ಸಹಾಯಕ ಆಯುಕ್ತರ ಮೂಲಕ ಮನವಿ
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜಿಲ್ಲಾ ಪಂಚಾಯತ ಎದುರು ದರಣಿ
ಕಾರವಾರ:ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅಕ್ಷರ ದಾಸೋಹ ನೌಕರರು ಜಿಲ್ಲಾ ಪಂಚಾಯತ ಎದುರು ಗುರುವಾರ ದರಣಿ ನಡೆಸಿದರು. ನಂತರ ತಮ್ಮ ಬೇಡಿಕೆಗಳ ಪಟ್ಟಿಯನ್ನು ಮುಖ್ಯಮಂತ್ರಿಗಳಿಗೆ ರವಾನಿಸಿದರು. ಅಕ್ಷರ ದಾಸೋಹ ಯೋಜನೆಗೆ ಕೇಂದ್ರ ಸರ್ಕಾರದ ಅನುದಾನ ಕಡಿತವನ್ನು ಪ್ರತಿಭಟನಾಕಾರರು ವಿರೋಧಿಸಿದರು. ಬಿಸಿಯೂಟ ಯೋಜನೆಯನ್ನು ಖಾಸಗಿಕರಣ ಮಾಡಬಾರದು ಎಂದು ಆಗ್ರಹಿಸಿದರು. ಶಿಕ್ಷಣ ಇಲಾಖೆ ಶಿಫಾರಸ್ಸಿನಂತೆ 4ಸಾವಿರ ರೂ ವೇತನ ಹೆಚ್ಚುವರಿಗೆ ಒತ್ತಾಯಿಸಿದರು. ಕೇಂದ್ರ ಸರ್ಕಾರ … [Read more...] about ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜಿಲ್ಲಾ ಪಂಚಾಯತ ಎದುರು ದರಣಿ