ಹೊನ್ನಾವರ ;ತಾಲೂಕಿನ ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ 71 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸನ್ಮಾನ,ದೇಶಭಕ್ತಿ ಗೀತಾ ನೃತ್ಯ, ಮತ್ತು ಸ್ಫರ್ಧೆ ಏರ್ಪಡಿಸುವದರ ಮೂಲಕ ಆಚರಿಸಲಾಯಿತು. ಹಿರಿಯ ಮುತ್ಸದ್ದಿ , ಖ್ಯಾತ ಕೊಳಲು ವಾದಕ ಕೃಷ್ಣ ಅವಧಾನಿ ಹಾಗೂ ಶಾಲಾ ಪೂರ್ವ ವಿದ್ಯಾರ್ಥಿ, ಪ್ರಸ್ತುತ ಸೈನಿಕನಾಗಿ ಜಮ್ಮು ಕಾಶ್ಮೀರ ದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹೇಶ ಹರಿಕಾಂತ ಅವರನ್ನು ಸನ್ಮಾನಿಸಲಾಯಿತು. ಕುಮಾರಿ ಅಕ್ಷತಾ ಸಂಗಡಿಗರು ದೇಶಭಕ್ತಿ ನೃತ್ಯ ಪ್ರಸ್ತುತ … [Read more...] about 71 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ
ವರ್ಷದ
ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ
ಹಳಿಯಾಳ :ಸತತ ಮೂರು ವರ್ಷದ ಬರಗಾಲದಿಂದ ಆರ್ಥಿಕವಾಗಿ ತತ್ತರಿಸಿದ ರೈತರ ಸಾಲವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣವಾಗಿ ಮನ್ನಾ ಮಾಡಬೇಕು ಹಾಗೂ ಸಕ್ಕರೆ ಕಾರ್ಖಾನೆಯವರು ರೈತರ 2 ನೇ ಕಂತಿನ ಬಾಕಿ ಹಣವನ್ನು ಕೂಡಲೇ ನೀಡಬೇಕೆಂದು ಆಗ್ರಹಿಸಿ ಬುಧವಾರ ಪಟ್ಟಣದ ಶಿವಾಜಿ ವೃತ್ತದಲ್ಲಿ ಕಬ್ಬು ಬೆಳೆಗಾರ ಸಂಘದ ನೇತೃತ್ವದಲ್ಲಿ ರಸ್ತಾರೊಖೋ ನಡೆಸಿ ಪ್ರತಿಭಟಿಸಿದರು. ಕರ್ನಾಟಕ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ 153 ಒಕ್ಕೂಟಗಳಿಂದ ಹಾಗೂ ರಾಜ್ಯ ಕಬ್ಬು ಬೆಳೆಗಾರ … [Read more...] about ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ
ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ ವಿಷಯದಲ್ಲಿ 3 ವರ್ಷದ ಡಿಪ್ಲೊಮಾ ಕೋರ್ಸ್‍ಗಳಿಗೆ ಅರ್ಜಿ ಆಹ್ವಾನ
ಕಾರವಾರ:2017-18 ನೇ ಸಾಲಿನ ಶೈಕ್ಷಣಿಕ ಅವಧಿಗೆ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ ವಿಷಯದಲ್ಲಿ 3 ವರ್ಷದ ಡಿಪ್ಲೊಮಾ ಕೋರ್ಸ್‍ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಇಂಗ್ಲೀಷ್‍ನ್ನು ಒಂದು ವಿಷಯವಾಗಿ ಅಭ್ಯಸಿಸಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಜೂನ್ 10ರ ಒಳಗಾಗಿ ಅರ್ಜಿ ಸಲ್ಲಿಸಬಹುದು. 1 ಜುಲೈ 2017 ಕ್ಕೆ ಅನ್ವಯಿಸುವಂತೆ ಸಾಮಾನ್ಯ ವರ್ಗದ ಅಭ್ಯರ್ಥಿಗಳು 15 ರಿಂದ 23 ರ ವಯೋಮಿತಿ ಹಾಗೂ ಪರಿಶಿಷ್ಟ ಜಾತಿ ಮತ್ತು … [Read more...] about ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ ವಿಷಯದಲ್ಲಿ 3 ವರ್ಷದ ಡಿಪ್ಲೊಮಾ ಕೋರ್ಸ್‍ಗಳಿಗೆ ಅರ್ಜಿ ಆಹ್ವಾನ
ಲಿಮ್ಕಾ ದಾಖಲೆಯತ್ತ ೫ ವರ್ಷದ ಬಾಲಕಿ ಪ್ರಿಯದರ್ಶಿನಿ
ಕಾರವಾರ: ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಹಿಮ್ಮುಖವಾಗಿ ಲಿಂಬೋ ಸ್ಕೇಟಿಂಗ್ ಮಾಡುವ ಮೂಲಕ ಕೈಗಾದ ಐದು ವರ್ಷದ ಬಾಲಕಿ ಪ್ರಿಯದರ್ಶಿನಿ ಎಂ. ಹಿರೇಮಠ ಎಲ್ಲರ ಮೆಚ್ಚುಗೆಗೆ ಕಾರಣರಾದರು.ಬುಧವಾರ ಕೈಗಾದ ವಸತಿ ಸಂಕೀರ್ಣದ ಸ್ಕೇಟಿಂಗ್ ರಿಂಕ್‌ನಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪ್ರದರ್ಶನದಲ್ಲಿ ಪ್ರಿಯದರ್ಶಿನಿ ಈ ಸಾಧನೆ ಮಾಡಿದಳು. 50 ಮೀಟರ್ಸ್ ದೂರದವರೆಗೆ ನೆಲದಿಂದ 6.50 ಇಂಚು ಎತ್ತರದಲ್ಲಿ ಒಟ್ಟು 40 ಬಾರ್‌ಗಳನ್ನು ಅಡ್ಡಲಾಗಿ ಇಡಲಾಗಿತ್ತು. ಈ ಬಾರ್‌ಗಳ … [Read more...] about ಲಿಮ್ಕಾ ದಾಖಲೆಯತ್ತ ೫ ವರ್ಷದ ಬಾಲಕಿ ಪ್ರಿಯದರ್ಶಿನಿ
ಹೈದರಾಬಾದ್ ಮೂಲದ ಟೆಕ್ ಮಹೇಂದ್ರ ಕಂಪನಿಯು ಕ್ಯಾಂಪಸ್ ಸಂದರ್ಶನ
ಹೊನ್ನಾವರ;ಎಸ್. ಡಿ. ಎಂ. ಪದವಿ ಮಹಾವಿದ್ಯಾಲಯದಲ್ಲಿ ಹೈದರಾಬಾದ್ ಮೂಲದ ಟೆಕ್ ಮಹೇಂದ್ರ ಕಂಪನಿಯು ಕ್ಯಾಂಪಸ್ ಸಂದರ್ಶನ ನಡೆಸಿತು. ನಮ್ಮ ಮಹಾವಿದ್ಯಾಲಯದ ಬ.ಎ., ಬಿ.ಎಸ್ಸಿ., ಬಿ.ಕಾಂ., ಬಿ.ಬ.ಎ. ಎಂ.ಕಾಂ., ಹಾಗೂ ಎಂ.ಎಸ್ಸಿ. ಅಂತಿಮ ವರ್ಷದ ಸುಮಾರು 100 ವಿದ್ಯಾರ್ಥಿಗಳು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಿದ್ದರು. ಕಂಪನಿಯ ಎಚ್.ಆರ್. ವಿಭಾಗದ ಪ್ರಥಮೇಶ ರೇಡಕರ್, ಜಿ.ಡಿ. ವಿಡಿಯೋ ಸಂವಾದಗಳ ಮುಂತಾದ 4 … [Read more...] about ಹೈದರಾಬಾದ್ ಮೂಲದ ಟೆಕ್ ಮಹೇಂದ್ರ ಕಂಪನಿಯು ಕ್ಯಾಂಪಸ್ ಸಂದರ್ಶನ