ಹೊನ್ನಾವರ :ಗುಡ್ಡ ಕುಸಿತದಿಂದಾಗಿ 6ಮನೆಗಳು ಅಪಾಯಕ್ಕೆ ಸಿಲುಕಿವೆ. ಕಾನೂನು ಉಲ್ಲಂಘಿಸಿ ಗುಡ್ಡ ಕಡಿದ ಭೂಮಾಲಕರು ಶಾಸಕಿ, ದಂಡಾಧಿಕಾರಿಗಳು ಮತ್ತು ಮನೆ ಮಾಡಿಕೊಂಡಿದ್ದವರ ಎದುರು ತಡಗೋಡೆ ನಿರ್ಮಿಸಲು ಒಪ್ಪಿಕೊಂಡ ಘಟನೆ ಇಂದು ನಡೆಯಿತು. ರಾಷ್ಷ್ರೀಯ ಹೆದ್ದಾರಿಗೆ ಹೊಂದಿಕೊಂಡು ಕರ್ನಲ್ ಬಳಿ 18 ಗುಂಟೆ ಖಾಸಗಿ ಗುಡ್ಡವನ್ನು ಬಾರ್ ಮಾಲಕ ಸಂತೋಲಿನ್ ಫರ್ನಾಂಡೀಸ್ ಎಂಬವರು ಖರೀದಿಸಿದ್ದರು. ಗುಡ್ಡವನ್ನು ಕಡಿದು, ರಾಷ್ಟ್ರೀಯ ಹೆದ್ದಾರಿ ಮಟ್ಟಕ್ಕೆ ಇಳಿಸುವ ಕೆಲಸ ನಡೆದಾಗ … [Read more...] about ಗುಡ್ಡ ಕುಸಿತ:ಅಪಾಯದ ಅಂಚಿನಲ್ಲಿ 6ಮನೆಗಳು
ಹೆದ್ದಾರಿ
ಎನ್‍ಎಚ್‍ಎಐ ಹಾಗೂ ಐಆರ್‍ಬಿ ಸಂಸ್ಥೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ
ಕಾರವಾರ:ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದಾಗಿ ಉಂಟಾಗುತ್ತಿರುವ ಭೂಕುಸಿತ ಹಾಗೂ ಅನಾಹುತಗಳನ್ನು ತಪ್ಪಿಸಲು ವೈಜ್ಞಾನಿಕವಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ (ಎನ್‍ಎಚ್‍ಎಐ) ಹಾಗೂ ಐಆರ್‍ಬಿ ಸಂಸ್ಥೆಯ ಹಿರಿಯ ಅಧಿಕಾರಿಗಳಿಗೆ ತಾಕೀತು ಮಾಡಿದರು. ಕುಮಟಾದ ತಂಡ್ರಕುಳಿಯಲ್ಲಿ ಸಂಭವಿಸಿದ ಅನಾಹುತ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆಯಲಾಗಿದ್ದ … [Read more...] about ಎನ್‍ಎಚ್‍ಎಐ ಹಾಗೂ ಐಆರ್‍ಬಿ ಸಂಸ್ಥೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ
ಜಿಲ್ಲಾಧಿಕಾರಿಗಳಿಂದ ಹೆದ್ದಾರಿ ಪರಿಶೀಲನೆ
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿರುವ ಕಾರವಾರದಿಂದ ಹೊನ್ನಾವರದವರೆಗಿನ ಹೆದ್ದಾರಿ ಇಕ್ಕೆಲಗಳಲ್ಲಿ ಗುಡ್ಡ ಕುಸಿತ ಸಂಭವಿಸಬಹುದಾದ ಸ್ಥಳಗಳನ್ನು ಜಿಲ್ಲಾಧಿಕಾರಿ ಎಸ್.ನಕುಲ್ ಅವರು ಮಂಗಳವಾರ ಅಧಿಕಾರಿಗಳ ತಂಡದೊಂದಿಗೆ ಪರಿಶೀಲನೆ ನಡೆಸಿದರು. ಗುಡ್ಡ ಕುಸಿಯುವ ಸಾಧ್ಯತೆ ಇರುವÀ ಕಡೆಗಳಲ್ಲಿ ಈಗಾಗಲೇ ಐಆರ್‍ಬಿ ಕಂಪೆನಿ ಕೈಗೊಂಡಿರುವ ತುರ್ತು ಕಾಮಗಾರಿಗಳನ್ನು ಸಹ ಜಿಲ್ಲಾಧಿಕಾರಿ ಪರಿಶೀಲಿಸಿದರು. ಕರಾವಳಿಯಲ್ಲಿ ಮಳೆ ಕಡಿಮೆಯಾಗಿದ್ದು, ಅಪಾಯ ಸಂಭವಿಸಬಹುದಾದ … [Read more...] about ಜಿಲ್ಲಾಧಿಕಾರಿಗಳಿಂದ ಹೆದ್ದಾರಿ ಪರಿಶೀಲನೆ
ಹೆದ್ದಾರಿ ಅಗಲೀಕರಣದಲ್ಲಿ ಬಲಿಯಾಗಲಿದ್ದ ಗಿಡ ಮರಗಳಿಗೆ ಮರು ಜೀವ ನೀಡಿದ ಅರಣ್ಯ ಇಲಾಖೆ
ಕಾರವಾರ:ಕರಾವಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಈಗಾಗಲೇ ಸಾವಿರಾರು ಮರಗಳು ನಾಶವಾಗಿದ್ದು, ಅಳಿದುಳಿದ ಸಸ್ಯ ಸಂಕುಲಗಳು ತಮ್ಮ ಜೀವ ಉಳಿಸಿಕೊಳ್ಳಲು ಕಡಲತೀರದಲ್ಲಿ ಆಶ್ರಯ ಪಡೆದಿವೆ! ರಸ್ತೆ ಅಗಲೀಕರಣಕ್ಕಾಗಿ ಮರ-ಗಿಡಗಳನ್ನು ಕಡಿಯುವ ಬದಲು ಅವನ್ನು ಬುಡಸಮೇತದ ಮಣ್ಣಿನೊಂದಿಗೆ ಸ್ಥಳಾಂತರ ಮಾಡುವ ಯೋಜನೆಗೆ ಅರಣ್ಯ ಇಲಾಖೆ ಮುನ್ನುಡಿ ಬರೆದಿದೆ. ಭಾನುವಾರ ಜಿಲ್ಲಾಕಾರಿ ಕಚೇರಿ ಎದುರು ಇರುವ ಬಾದಾಮಿ ಗಿಡಗಳನ್ನು ಜೆಸಿಬಿ ಮುಖಾಂತರ … [Read more...] about ಹೆದ್ದಾರಿ ಅಗಲೀಕರಣದಲ್ಲಿ ಬಲಿಯಾಗಲಿದ್ದ ಗಿಡ ಮರಗಳಿಗೆ ಮರು ಜೀವ ನೀಡಿದ ಅರಣ್ಯ ಇಲಾಖೆ
ಹೆದ್ದಾರಿ ಅಗಲೀಕರಣ ಕಾಮಗಾರಿ;ಕೃತಕ ನೆರೆ ಉಂಟಾಗದಿರಲಿ
ಕಾರವಾರ:ಹೆದ್ದಾರಿ ಅಗಲೀಕರಣ ಕಾಮಗಾರಿಯಿಂದಾಗಿ ಮಳೆಯ ನೀರು ಸರಾಗವಾಗಿ ಹರಿದು ಹೋಗದೆ ಕೃತಕ ನೆರೆ ಇತ್ಯಾದಿ ತೊಂದರೆಗಳು ಉಂಟಾಗಬಹುದಾದ ಸ್ಥಳಗಳನ್ನು ಗುರುತಿಸಿ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್.ನಕುಲ್ ಐಆರ್‍ಬಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಐಆರ್‍ಬಿ ಸಂಸ್ಥೆ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಮಳೆಗಾಲ ಪೂರ್ವದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ … [Read more...] about ಹೆದ್ದಾರಿ ಅಗಲೀಕರಣ ಕಾಮಗಾರಿ;ಕೃತಕ ನೆರೆ ಉಂಟಾಗದಿರಲಿ