ಹೊನ್ನಾವರ: ಕಳೆದ ನಾಲ್ಕು ಎರಡು ದಿನಗಳಿಂದ ಸುರಿಯುತ್ತಿರುವ ಗಾಳಿ, ಮಳೆಯಿಂದಾಗಿ ತಾಲೂಕಿನ ವಿವಿಧ ಭಾಗಗಳಲ್ಲಿ ಹಾನಿ ಸಂಭವಿಸಿದೆ. ಗುಡ್ಡಕುಸಿತ ಮತ್ತು ಮರಗಳು ಉರುಳಿ ಬಿದ್ದು ಮನೆಗಳಿಗೆ ಹಾನಿಯಾಗಿದೆ.ಕೊಡಾಣಿಯಯಲ್ಲಿ ವೆಂಕಟ್ರಮಣ ನಾರಾಯಣ ಹೆಗಡೆ ಅವರ ಮನೆಯ ಮೇಲೆ ಗುಡ್ಡದ ಮಣ್ಣು ಜಾರಿ ಬಂದು ಮನೆಯು ಸಂಪೂರ್ಣ ನೆಲಸಮವಾಗಿದೆ. ಮನೆಯೊಳಗಿದ್ದ ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ಅಡಕೆ ಮಣ್ಣಿನಲ್ಲಿ ಹೂತು ಹೋಗಿದೆ. ಮನೆಯಲ್ಲಿದ್ದ … [Read more...] about ಗಾಳಿ ಮಳೆ ಮನೆಗಳಿಗೆ ಹಾನಿ
Trending
ಅಗ್ನಿ ಅವಘಡ ಹೊಂದಿದ ಮನೆಗೆ ೫ ಲಕ್ಷ ಪರಿಹಾ ಧನದ ಚೆಕ್ ವಿತರಿಸಿದ ಶಾಸಕ ಸುನೀಲ ನಾಯ್ಕ
ಕೆಲ ತಿಂಗಳುಗಳ ಹಿಂದೆ ಹೊನ್ನಾವರ ತಾಲೂಕಿನ ಕೆಳಗಿನ ಇಡಗುಂಜಿ ಮೋಟೆಕೇರಿಯಲ್ಲಿ ಶ್ರೀ ಅಣ್ಣಯ್ಯ ಸಣಕೂಸ ಗೌಡ ಇವರು ಸುಮಾರು 48 ಜನ ಕೂಡು ಕುಟುಂಬದೊಂದಿಗೆ ವಾಸಿಸುತ್ತಿದ್ದ 75 ವರ್ಷ ಇತಿಹಾಸದ ಮನೆಯು ಅಗ್ನಿ ದುರಂತಕ್ಕೆ ಸಂಪೂರ್ಣ ಆಹುತಿಯಾಗಿದ್ದು ಬಡಕುಂಟಬ ಮನೆಯನ್ನು ಕಳೆದುಕೊಂಡಿತ್ತು.ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಕುಟುಂಬದ ತಾತ್ಕಾಲಿಕ ನಿರ್ವಹಣೆಗೆ ಬಟ್ಟೆ ಬರೆ ಸೇರಿದಂತೆ 50 ಸಾವಿರ ರೂಪಾಯಿ ನಗದು ಹಣವನ್ನು ವಯಕ್ತಿಕವಾಗಿ ನೀಡಲಾಗಿತ್ತು ಹಾಗೂ ಸರ್ಕಾರದಿಂದ … [Read more...] about ಅಗ್ನಿ ಅವಘಡ ಹೊಂದಿದ ಮನೆಗೆ ೫ ಲಕ್ಷ ಪರಿಹಾ ಧನದ ಚೆಕ್ ವಿತರಿಸಿದ ಶಾಸಕ ಸುನೀಲ ನಾಯ್ಕ
ಕರೋನಾಕ್ಕೆ ಶಿರಸಿ ಸರಕಾರಿ ಆಸ್ಪತ್ರೆ ವೈದ್ಯ ಸಾವು
ಶಿರಸಿ: ಇಲ್ಲಿಯ ಪಂಡಿತ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ ಬಸವನಗೌಡ( 61) ಭಾನುವಾರ ಮುಂಜಾನೆ 1.30ಕ್ಕೆ ನಿಧನರಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ.ಮೂಲತಃ ದಾವಣಗೆರೆಯವರಾದ ಅವರು, ತಮ್ಮ ಸೇವಾ ನಿವೃತ್ತಿಯ ನಂತರದಲ್ಲಿಯೂ ಸಹ ಶಿರಸಿಯ ಸರಕಾರಿ ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರಾಗಿ ಕೆಲವು ತಿಂಗಳುಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು.ಕಳೆದ ಆ. 25 ರಂದು ಅವರಿಗೆ ಕೊರೊನಾ ಪಾಸಿಟಿವ್ ದೃಢವಾಗಿತ್ತು. ನಂತರದಲ್ಲಿ … [Read more...] about ಕರೋನಾಕ್ಕೆ ಶಿರಸಿ ಸರಕಾರಿ ಆಸ್ಪತ್ರೆ ವೈದ್ಯ ಸಾವು
ಹಳ್ಳಕ್ಕೆ ತಡೆಗೋಡೆ ನಿರ್ಮಾಣ – ಕೆಲಸ ಮಾಡಿದವರ ಕೈಗೆ ಚೊಂಬು ಕೊಟ್ಟ ನರೇಗಾ
200 ಕೂಲಿಯಾಳಿಗೆ 17 ಸಾವಿರ ಸಂಬಳ - ಸಿಮೆಂಟ್ ಚೀಲಕ್ಕೆ 250, ಕೆಂಪು ಕಲ್ಲಿಗೆ 11 ರುಪಾಯಿ ಬೆಲೆ ನಿಗದಿ. ಇದೆಂತಾ ಉದ್ಯೋಗ ಖಾತ್ರಿನಾ..? ಇಲ್ಲ ಕತ್ರಿನಾ..?ಹೊನ್ನಾವರ – ಕೋಟಿ ಮೊತ್ತ ಮಂಜೂರಿ ಪಡಕೊಂಡು ಲಕ್ಷ ರೂಪಾಯಿ ಕೆಲಸ ಮಾಡಿದ್ದನ್ನು ಕೇಳಿದ್ದೇವೆ. ಆದರೆ ನರೇಗಾದಡಿ ಲಕ್ಷಾಂತರ ರೂಪಾಯಿ ಮೌಲ್ಯದ ಕೆಲಸ ಮಾಡಿ, ಮಾಡಿದ ಕೆಲಸಕ್ಕೆ ದಿನಗೂಲಿಯೂ ಸಿಗದೇ ಕೆಲಸಗಾರರು ಪರದಾಡುತ್ತಿರುವ ಅಪರೂಪದ ಪ್ರಕರಣ ತಾಲೂಕಿನ ಖರ್ವಾದಲ್ಲಿ ಬೆಳಕಿಗೆ ಬಂದಿದೆ.ಹಸಿಮನೆಯಲ್ಲಿ ಮಳೆಯ … [Read more...] about ಹಳ್ಳಕ್ಕೆ ತಡೆಗೋಡೆ ನಿರ್ಮಾಣ – ಕೆಲಸ ಮಾಡಿದವರ ಕೈಗೆ ಚೊಂಬು ಕೊಟ್ಟ ನರೇಗಾ
ಹೊನ್ನಾವರಕ್ಕಿಲ್ಲವೇ ಮಾದಕ ಲೋಕದ ನಂಟು..?
ಹೀಗೊಂದು ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಕಳೆದೊಂದು ವಾರದಿಂದ ರಾಜ್ಯದಂತೆ ಜಿಲ್ಲೆಯಲ್ಲಿಯೂ ಅತೀ ಹೆಚ್ಚು ಸೌಂಡು ಮಾಡುತ್ತಿರುವುದು ಮಾದಕ ಲೋಕದ ಬೆಚ್ಚಿಬೀಳಿಸುವ ಸುದ್ದಿ. ದಿನಬೆಳಗಾದರೆ ಬೇರೆ ಬೇರೆ ತಾಲೂಕುಗಳ ಗಾಂಜಾ ಸುದ್ದಿಗಳು ತಲ್ಲಣ ಮೂಡಿಸುತ್ತಿದ್ದರೆ ಹೊನ್ನಾವರ ಮಾತ್ರ ತನಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ತಣ್ಣಗಿದೆ. ಹಾಗಾದರೆ ಹೊನ್ನಾವರಕ್ಕೆ ಮಾದಕ ಲೋಕದ ನಂಟಿಲ್ಲವೇ ಎಂದು ಕೆಳಿದರೆ ಇಲ್ಲ ಎಂದು ಗಟ್ಟಿಯಾಗಿ ಹೇಳುವುದಕ್ಕೆ ಯಾರೂ ಸಿದ್ಧರಿಲ್ಲ.ಪಟ್ಟಣ … [Read more...] about ಹೊನ್ನಾವರಕ್ಕಿಲ್ಲವೇ ಮಾದಕ ಲೋಕದ ನಂಟು..?



