ಭಟ್ಕಳ: ಕೋವಿಡ್ ಸಂದರ್ಭದಲ್ಲಿ ಯಾವುದೇ ಫಲಾಫೇಕ್ಷೆ ಇಲ್ಲದೆ ಸ್ವಂತ ಖರ್ಚಿನಲ್ಲಿ ಅವಶ್ಯಕತೆ ಇದ್ದವರಿಗೆ ಊಟೋಪಚಾರ ಸೇರಿ ವಿವಿಧ ರೀತಿಯಲ್ಲಿ ಸಹಕರಿಸಿದ ಮಹಿಳೆಯರ ಕೊಡುಗೆ ಅಪಾರ ಹಾಗೂ ಶ್ಲಾಘನೀಯ ಎಂದು ಸ್ಪಂದನಾ ಸೇವಾ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ನಾಯ್ಕ ಹೇಳಿದರು.ಅವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕೋಗ್ತಿಯಲ್ಲಿರುವ ಸ್ನೇಹ ವಿಶೇಷ ಮಕ್ಕಳ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಸ್ಪಂದನಾ ಸಂಸ್ಥೆ … [Read more...] about ವಿವಿಧ ಕ್ಷೇತ್ರದ ಮಹಿಳಾ ಸಾಧಕಿಯರಿಗೆ ಸನ್ಮಾನ
Trending
ಲಯನ್ಸ ಪ್ರಾದೇಶಿಕ ಸಮ್ಮೇಳಕ್ಕೆ ಹೊನ್ನಾವರದಲ್ಲಿ ಚಾಲನೆ ನೀಡಿದ ಕರ್ನಾಟಕ ವಿಕೇಂದ್ರಿಕರಣ ಸಮಿತಿಯ ಉಪಾಧ್ಯಕ್ಷರಾದ ಪ್ರಮೋದ ಹೆಗಡೆ
ಹೊನ್ನಾವರ: ಸೇವಾ ಚಟುವಟಿಕೆ ಮೂಲಕ ಜಗತ್ತಿಗೆ ಮಾದರಿಯಾದ ಲಯನ್ಸ ಸಂಸ್ಥೆ ಹಲವು ಸಮಾಜಮುಖಿ ಕಾರ್ಯದ ಮೂಲಕ ಜನಮನ್ನಣೆ ಪಡೆದಿದೆ ಎಂದು ಕರ್ನಾಟಕ ವಿಕೇಂದ್ರಿಕರಣ ಸಮಿತಿಯ ಉಪಾಧ್ಯಕ್ಷರಾದ ಪ್ರಮೋದ ಹೆಗಡೆ ಹೇಳಿದರು. ಅವರು ಹೊನ್ನಾವರದ ಲಯನ್ ಸಭಾಭವನದಲ್ಲಿ ಲಯನ್ಸ ಪ್ರಾದೇಶಿಕ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು."ರಿಚ್ ದ ನೀಡಿ" ಎನ್ನುವ ಆಶಯದೊಂದಿಗೆ ಹಮ್ಮಿಕೊಂಡ ಈ ಕಾರ್ಯಕ್ರಮ ವಿಭಿನ್ನವಾಗಿದೆ. ಲಯನ್ಸ್ ಸೇವಾ ಸಂಸ್ಥೆ ಜಗತ್ತಿನಾದ್ಯಂತ . … [Read more...] about ಲಯನ್ಸ ಪ್ರಾದೇಶಿಕ ಸಮ್ಮೇಳಕ್ಕೆ ಹೊನ್ನಾವರದಲ್ಲಿ ಚಾಲನೆ ನೀಡಿದ ಕರ್ನಾಟಕ ವಿಕೇಂದ್ರಿಕರಣ ಸಮಿತಿಯ ಉಪಾಧ್ಯಕ್ಷರಾದ ಪ್ರಮೋದ ಹೆಗಡೆ
ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ. ಪೋಕ್ಸೋ ಕಾಯ್ದೆಯಡಿ ಇಬ್ಬರ ಬಂಧನ.
ಭಟ್ಕಳ: ತಾಲೂಕಿನ ಶಿರಾಲಿ ಚಿತ್ರಾಪುರದಲ್ಲಿ ನಡೆದ 14 ವರ್ಷ ಪ್ರಾಯದ ಶಾಲಾ ಬಾಲಕಿಯೋರ್ವಳನ್ನು ಪುಸಲಾಯಿಸಿ, ಆಕೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ ಗರ್ಭಿಣಿಯನ್ನಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ಆರೋಪಿಗಳನ್ನು ಬಂಧಿಸಲಾಗಿದೆ. ಶಿರಸಿ ಮೂಲದ ರವಿ ಪಟಗಾರ (35) ಹಾಗೂ ಇಲ್ಲಿನ ಶಿರಾಲಿ ಗುಡಿಹಿತ್ತಲ್ ನಿವಾಸಿ ಶಿವರಾಜು ನಾಯ್ಕ (22) ಎಂದು ಗುರುತಿಸಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ … [Read more...] about ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ. ಪೋಕ್ಸೋ ಕಾಯ್ದೆಯಡಿ ಇಬ್ಬರ ಬಂಧನ.
ದುಬೈನಿಂದ ಚಿನ್ನ ಕಳ್ಳ ಸಾಗಾಣಿಕೆ ಅನುಮಾನ; ರು.48 ಲಕ್ಷ ಮೌಲ್ಯದ ಕೈಗಡಿಯಾರ ಒಡೆದ ಕಸ್ಟಮ್ಸ್, ಭಟ್ಕಳದ ವ್ಯಕ್ತಿಯಿಂದ ಕ್ಯಾಲಿಕಟ್‍ನಲ್ಲಿ ದೂರು ದಾಖಲು
ಭಟ್ಕಳ: ಕೈಗಡಿಯಾರದಲ್ಲಿ ಚಿನ್ನ ಅಡಗಿಸಿಟ್ಟು ಸಾಗಿಸಿರುವ ಶಂಕೆಯ ಮೇಲೆ ವಿಮಾನದಿಂದ ಇಳಿದ ಭಟ್ಕಳ ಮೂಲದ ವ್ಯಕ್ತಿಯನ್ನು ತಪಾಸಣೆಗೆಂದು ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು, ಆತನ ಕೈಯಲ್ಲಿದ್ದ ರು.48 ಲಕ್ಷಕ್ಕೂ ಅಧಿಕ ಮೌಲ್ಯದ ಆಡಿಮೂವರ್ಸ ಪಿಗುಯೆಟ್ ಕಂಪೆನಿಯ ಕೈಗಡಿಯಾರವನ್ನು ಜಫ್ತುಪಡಿಸಿಕೊಂಡು ಗಡಿಯಾರದ ಮೌಲ್ಯವನ್ನು ಅರಿಯದೇ ಅದನ್ನು ಪುಡಿಗಟ್ಟಿ ಚಿನ್ನಕ್ಕಾಗಿ ಹುಡುಕಾಟ ನಡೆಸಿದ ಘಟನೆ ಕೇರಳ ಕ್ಯಾಲಿಕಟ್‍ನಲ್ಲಿ ನಡೆದಿದೆ. ಹಾನಿಗೊಳಗಾದ ವ್ಯಕ್ತಿಯನ್ನು … [Read more...] about ದುಬೈನಿಂದ ಚಿನ್ನ ಕಳ್ಳ ಸಾಗಾಣಿಕೆ ಅನುಮಾನ; ರು.48 ಲಕ್ಷ ಮೌಲ್ಯದ ಕೈಗಡಿಯಾರ ಒಡೆದ ಕಸ್ಟಮ್ಸ್, ಭಟ್ಕಳದ ವ್ಯಕ್ತಿಯಿಂದ ಕ್ಯಾಲಿಕಟ್‍ನಲ್ಲಿ ದೂರು ದಾಖಲು
ಹೊನ್ನಾವರ ರಥೋತ್ಸವ ಹಿನ್ನಲೆ ತುರ್ತಾಗಿ ರಥಬೀದಿ ರಸ್ತೆಗೆ ಡಾಂಬರೀಕರಣ ನಡೆಸಿ ಸಾಮಾಜಿಕ ಕಳಕಳಿ ಮೆರೆದ ಶಾಸಕ ದಿನಕರ ಶೆಟ್ಟಿ.
ಹೊನ್ನಾವರ; ಪಟ್ಟಣದ ರಸ್ತೆಗಳಿಗೆ ಶಾಸಕರಾದ ಬಳಿಕ ಕಾಂಕ್ರಿಟಿಕರಣ ಮಾಡುವ ಮೂಲಕ ಬಹುವರ್ಷದ ಹೊಂಡಮಯ ರಸ್ತೆಗೆ ಮುಕ್ತಿ ನೀಡಿದ್ದ ಶಾಸಕರು, ಇದೀಗ ಪಟ್ಟಣದ ವೆಂಕ್ರಟಮಣ ದೇವರ ರಥೋತ್ಸವದ ಹಿನ್ನಲೆಯಲ್ಲಿ ರಥವು ಸಂಚರಿಸುವ ಮಾರ್ಗಗಳಿಗೆ ತುರ್ತಾಗಿ ರಸ್ತೆ ಕಾಮಗಾರಿ ನಡೆಸುವ ಮೂಲಕ ಸಾಮಾಜಿಕ ಕಳಕಳಿ ತೋರಿದ್ದಾರೆ. ಅಧಿಕಾರ ವಹಿಸಿಕೊಂಡ ಬಳಿಕ ಪಟ್ಟಣ ವ್ಯಾಪ್ತಿಯ ಎಮ್ಮೆಪೈಲ್ ರಸ್ತೆ, ದುರ್ಗಾಕೇರಿ ರಸ್ತೆ, ಶರಾವತಿ ವೃತ್ತದಿಂದ ಬಸ್ ನಿಲ್ದಾಣ ರಸ್ತೆ, ಪ್ರಭಾತನಗರದ ಕೆ.ಎಚ್.ಬಿ … [Read more...] about ಹೊನ್ನಾವರ ರಥೋತ್ಸವ ಹಿನ್ನಲೆ ತುರ್ತಾಗಿ ರಥಬೀದಿ ರಸ್ತೆಗೆ ಡಾಂಬರೀಕರಣ ನಡೆಸಿ ಸಾಮಾಜಿಕ ಕಳಕಳಿ ಮೆರೆದ ಶಾಸಕ ದಿನಕರ ಶೆಟ್ಟಿ.




